Saturday 10th, May 2025
canara news

ಕಲಾಲೋಕದ ಮಿನುಗುತಾರೆ-ಮಾಯಾನಗರಿಯ ಸಾಂಸ್ಕೃತಿಕ ರಾಯಭಾರಿ ಆಗಿದ್ದು ಇಹಲೋಕ ಸೇರಿದ ತಾರಾ ಎಸ್.ರಾವ್ ಅಗಲುವಿಕೆಗೆ ಮಿಡಿದ ಹೃನ್ಮನಗಳು

Published On : 11 Sep 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.11: ಗೋಕುಲ ಕಲಾಶ್ರೀ ಬಿರುದಾಂಕಿತ ನತ್ಯಮಯೂರಿ, ಅಪ್ರತಿಮ ಕಲಾವಿದೆ, ಸಮಾಜ ಸೇವಕಿ ಆಗಿದ್ದು ಇತ್ತಿಚೆಗೆ ಸ್ವರ್ಗಸ್ಥರಾದ ಕಲಾಲೋಕದ ಮಿನುಗುತಾರೆ, ಮಾಯಾನಗರಿಯ ಸಾಂಸ್ಕೃತಿಕ ರಾಯಭಾರಿ ತಾರಾ ಎಸ್.ರಾವ್ ಅಗಲುವಿಕೆಗೆ ಇಂದಿಲ್ಲಿ ರವಿವಾರ ಚೆಂಬೂರು ಛೆಡಾ ನಗರzಲ್ಲಿನÀ ಶ್ರೀ ಸುಬ್ರಹ್ಮಣ್ಯ ಮಠದ ನಾಗ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿದ್ದು ಉಪಸ್ಥಿತ ಅಪಾರ ಸಂಖ್ಯೆಯ ಕಲಾವಿದರು, ಹಿತೈಷಿ, ಅಭಿಮಾನಿಗಳು ದುಃಖತಪ್ತ ಹೃನ್ಮನಗಳಿಂದ ಕಂಬನಿ ಮಿಡಿದರು.

ಸ್ವರ್ಗಸ್ಥರ ಕಳೆದ ದಿನಗಳಲ್ಲಿ ಆತ್ಮಸದ್ಗತಿಗಾಗಿ ಧರ್ಮೋದಕ, ಏಕೋಧಿಷ್ಟ, ಸಪಿಂದಿಕರಣ, ವೈಕುಂಠ ಸಮಾರಾ ಧನೆ ಇತ್ಯಾದಿ ವಿಧಿಗಳನ್ನು ನೆರವೇರಿಸಲಾಗಿದ್ದು ಇಂದಿಲ್ಲಿ ಚಕ್ರಾಭ್ಜ ಮಂಡಲ ವಿಷ್ಣುಪೂಜೆ ನೆರವೇರಿಸಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಪತಿ ಸುಬ್ರಹ್ಮಣ್ಯ ರಾವ್ ಬಾಳ, ಸುಪುತ್ರಿ ತೃಪ್ತಿ ಎಸ್.ರಾವ್ ಮತ್ತು ಪರಿವಾರವು ಪೂಜಾಧಿಗಳಲ್ಲಿ ಪಾಲ್ಗೊಂಡಿದ್ದರು. ವೇದಮೂರ್ತಿ ಶ್ರೀಪತಿ ಭಟ್ ಕೊಡಂಜ ಅವರು ವಿಷ್ಣುಪೂಜೆ ನೇರವೇರಿಸಿ ತೀರ್ಥಪ್ರಸಾದ ನೀಡಿ ಹರಸಿದರು. ಭವಾನಿಶಂಕರ್ ಭಟ್ ಮತ್ತು ಮುರಳೀಧರ್ ಭಟ್ ಪೂಜೆಗೆ ಸಹಯೋಗವನ್ನಿತ್ತರು.

ಶ್ರದ್ಧಾಂಜಲಿ ಸಭೆಯಲ್ಲಿ ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಪರವಾಗಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಆರೈಕೆಗೈದ ಹಿರಿಯಣ್ಣ ಸಮಾನ ಭಾಂಡೂಪ್‍ನ ಸೆಂಟ್ರಲ್ ಹೆಲ್ತ್ ಹೋಮ್‍ನ ವೈದ್ಯಾಧಿಕಾರಿ ಡಾ| ಕೆ.ರತ್ನಾಕರ್ ಶೆಟ್ಟಿ, ಗ್ರೇಟ್‍ಈಸ್ಟರ್ನ್ ಗಾರ್ಡನ್ಸ್ ಅಪಾರ್ಟ್‍ಮೆಂಟ್ಸ್ ಅಸೋಸಿಯೇಶನ್ ಪರವಾಗಿ ಸತೀಶ್ ಪರ್ಚುನ್, ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ಪರವಾಗಿ ಗೌರವಾಧ್ಯಕ್ಷ ಡಾ| ಎ.ಎಸ್ ರಾವ್, ಪೇಜಾವರ ಮಠ ಮುಂಬಯಿ ಶಾಖೆಯ ವತಿಯಿಂದ ರಾಮದಾಸ ಉಪಾಧ್ಯಾಯ ರೆಂಜಾಳ, ಪ್ರಕಾಶ ಆಚಾರ್ಯ ರಾಮಕುಂಜ, ಬಿ.ನಾಗರಾಜ್, ಡಾ| ಮಾಧುರಿ ಸಾವಂತ್, ಶ್ರೀಕೃಷ್ಣ ವಿಠಲ ಪ್ರತಿಷ್ಠಾನ ಮುಂಬಯಿ ಪರವಾಗಿ ಸುನಂದ ಸದಾನಂದ ಉಪಾಧ್ಯಾಯ, ಕೆ.ಸುಬ್ಬಣ್ಣ ರಾವ್, ಎಂ.ನರೇಂದ್ರ, ಪ್ರಹ್ಲಾದ್ ರಾವ್, ಸಿಎ| ಹರಿದಾಸ್ ಭಟ್, ಶ್ರೀನಿವಾಸ ರಾವ್ ಪರೇಲ್, ಸುಧೀರ್ ಆರ್. ಎಲ್ ಶೆಟ್ಟಿ, ನ್ಯಾ| ಗೀತಾ ಆರ್.ಎಲ್ ಭಟ್, ಚಿತ್ರಾ ಮೇಲ್ಮನೆ, ಬಾಲಕೃಷ್ಣ ಪಿ.ಭಂಡಾರಿ, ಡಾ| ಸುಮನ್ ರಾವ್ ಅವರ ಒಡನಾಟ, ಸಮನ್ವತೆಯ ಬದುಕನ್ನು ಸ್ಥೂಲವಾಗಿ ಬಣ್ಣಿಸಿ ಕಂಬನಿ ಮಿಡಿಯುತ್ತಾ ಬಾಷ್ಪಾಂಜಲಿ ಅರ್ಪಿಸಿದರು.

ನುಡಿ ನಮನಗೈದು ಪ್ರೀತಿವಾತ್ಸಲ್ಯ ಸಾಮರಸ್ಯದ ಬದುಕಿನ ಪ್ರತೀಕವಾಗಿದ್ದ ತಾರಾ ರಾವ್ ಅನಾರೋಗ್ಯದ ಮಧ್ಯೆಯೂ ಸಂಸ್ಕೃತಿ, ಭಜನೆ, ಕಲಾರಾಧನೆಯನ್ನು ಅಸ್ವಾಧಿಸುತ್ತಾ ಸಾಂಸ್ಕೃತಿಕ ರಾಯಭಾರಿ ಎಂದೆಣಿಸಿ ಕಲಾಭಿಮಾನ ಮೆರೆದಿದ್ದರು. ಯಾವೋತ್ತೂ ಕಲೆ ಸಂಸ್ಕೃತಿ ಎನ್ನುತ್ತಾ ಅವುಗಳೇ ಆಕೆಗೆ ಜೀವಾಳವಾಗಿದ್ದು ಜೀವನನೇ ಸಂಸ್ಕಾರವಾಗಿಸಿದ್ದರು. ಇವೆಲ್ಲವುಗಳಿಗೂ ಪೆÇ್ರೀತ್ಸಹಿಸುವ ಚೈತನ್ಯ ಅವರಲ್ಲಿನ ತಾಕತ್ತುವಾಗಿತ್ತು. ತನ್ನ ಜೀವಕ್ಕಿಂತ ಪರರ ಬಗೆಗಿನ ಚಿಂತೆ ಮತ್ತು ಎಲ್ಲರೂ ತನ್ನವರು ಎನ್ನುವ ಅಪಾರ ಕಾಳಜಿ ಅವರಲ್ಲಿತ್ತು. ಇಂತಹ ತಾರಕ್ಕ ನಮ್ಮಿಂದ ಮರೆಯಾಗಿರ ಬಹುದು ಆದರೆ ಅವರಲ್ಲಿನ ಸೇವಾ ಮನೋಭಾವ, ಸಂಸ್ಕೃತಿಪ್ರಿಯತೆ, ಸದ್ಗುಣಗಳು ನಮಗೆಲ್ಲರ ಬದುಕಿಗೆ ನೀತಿಪಾಠವಾಗಿ ಉಳಿಸಿ ಹೋಗಿದ್ದಾರೆ. ಇವುಗಳೆಂದೂ ನಮ್ಮಲ್ಲಿ ಅಳಿಯಲಾರವು. ಇಂತಹ ಪ್ರತಿಭಾನ್ವಿತೆ ಅಗಲಿಕೆಯಿಂದ ಗೋಕುಲವೂ ಮೌನವಾಗಿದೆ ಎನ್ನುತ್ತಾ ಓರ್ವ ವೈದ್ಯರಾಗಿದ್ದೂ ಡಾ| ಸುರೇಶ್ ಎಸ್.ರಾವ್ ಭಾವೋದ್ವೆಗರಾಗಿ ಅಗಲಿದ ದಿವ್ಯಾತ್ಮಕ್ಕೆ ಶ್ರದ್ಧಾಂಜಲಿ ಕೋರಿದರು.

ಕಲಾವಿದರ ಪರವಾಗಿ ಬೈಲೂರು ಬಾಲಚಂದ್ರ ರಾವ್ ಮಾತನಾಡಿ ಈಕೆ ನಮ್ಮ ಗೋಕುಲದ ಧ್ರುವತಾರೆಯಾಗಿದ್ದ ತಾರಾಗಳಂತಹ ಪ್ರತಿಭಾನ್ವಿತೆಯ ಬಗ್ಗೆ ಹೇಳಿ ಮುಗಿಯದ ಪುರಾಣವಾಗಬಹುದು. ಬರೆದರೆ ಬೃಹತ್ ಗ್ರಂಥವೂ ವಿೂರÀಬಹುದು. ಸರ್ವರ ಆಪ್ತಮಿತ್ರೆಯಾಗಿದ್ದ ತಾರಾ ಕಲಾ ಜೀವನಶೈಲಿಯೂ ವರ್ಣಿಸಲು ಅಸಾಧ್ಯ. ಚತುರ್ಮುಖಿ ಕಲಾವಿದೆ ಜೊತೆಗೆ ಕಲಾ ಕಣಜವಾಗಿದ್ದ ಈಕೆ ಸಂಗೀತವನ್ನು ಅರಸಿ ಮನೆಮನಗಳಲ್ಲಿ ಭಜನೆ ಬೆಳೆಸಿದ ಪ್ರವೀಣೆ. ಮಕ್ಕಳಲ್ಲಿ ಮಗುವಾಗಿ ದೊಡ್ದವರಲ್ಲಿ ಮಗಳಾಗಿಯೇ ಬೆಳೆದ ಈ ಬೆಡಗಿಯ ಸಾವು ಅನಿವಾರ್ಯವೇ ಸರಿ ಎಂದು ಸಂತಾಪ ವ್ಯಕ್ತ ಪಡಿಸಿದರು.

ಮನೆಮನೆಯಲ್ಲಿ ಭಜನೆ ಮಾಡಿಸುವಲ್ಲಿ ಪ್ರೇರಕರಾದ ತಾರಾ ನಿಧನದಿಂದ ಇಂದು ಮನಮನಗಳಲ್ಲೂ ಅವರದ್ದೇ ಸ್ಮರಣೆ ಮಾಡುವಂತಾಗಿದೆ. ನಮ್ಮನ್ನಗಲಿ ಮರಣದಲ್ಲಿ ಒಂದಾದರೂ ನಕ್ಷತ್ರಪ್ರಾಯರಾಗಿದ್ದಾರೆ. ಯಾವುದೇ ಕೆಲಸವನ್ನೂ ಲವಲವಿಕೆಯಿಂದ ಮಾಡುತ್ತಾ ಎಲ್ಲರನ್ನೂ ಉತ್ತೇಜಿಸುವ ಸದ್ಗುಣ ಅನನ್ಯವಾದದ್ದು. ಪ್ರತಿಯೋಂದು ಕಲೆಗಳನ್ನೂ ಕರಗತಗೊಳಿಸಿ ಕಲಾಜೀವಿಯಾಗಿಯೇ ಬದುಕಿದ ಅಪರೂಪದ ಕಲಾವಿದೆ ಎಂದು ತಾರಾ ಜೊತೆ ನಟಿಸಿದ ಹಿರಿಯ ಕಲಾವಿದ, ಬಾಲಿವುಡ್ ನಟ ಹರೀಶ್ ವಾಸು ಶೆಟ್ಟಿ ಚರಮಾಂಜಲಿ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ತಾರಾ ಪರಿವಾರದ ರವಿ ರಾವ್, ಗಣೇಶ್ ಆಚಾರ್ಯ, ಡಾ| ವ್ಯಾಸರಾಯ ನಿಂಜೂರು, ಬಿ.ರಮಾನಂದ ರಾವ್ ಕಲೀನ, ಕೃಷ್ಣ ವೈ.ಆಚಾರ್ಯ, ಅವಿನಾಶ್ ಶಾಸ್ತ್ರಿ, ವಾಮನ ಹೊಳ್ಳ, ಪಿ.ಉಮೇಶ್ ರಾವ್, ಪಿ.ಸಿ.ಎನ್ ರಾವ್, ವೈ. ಗುರುರಾಜ್ ಭಟ್, ಅವಿನಾಶ್ ಶಂಕರ್ ಶಾಸ್ತ್ರಿ, ಪ್ರಶಾಂತ್ ಆರ್.ಹೆರ್ಲೆ, ಡಾ| ಸಹನಾ ಎ.ಪೆÇೀತಿ, ಚಂದ್ರಶೇಖರ್ ಭಟ್, ಐ.ಕೆ ಪ್ರೇಮಾ ಎಸ್.ರಾವ್, ಯು.ರವೀಂದ್ರ ರಾವ್, ವಿದ್ಯಾ ಆರ್.ರಾವ್, ಕಡೆಕಾರು ಶ್ರೀಶÀ ಭಟ್, ವಿಷ್ಣು ಕಾರಂತ್ ಚೆಂಬೂರು, ಎ.ಬಿ ರಾವ್ ಖಾರ್, ಕಲಾವಿದರಾದ ಪದ್ಮನಾಭ ಸಸಿಹಿತ್ಲು, ಚಂದ್ರವತಿ ದೇವಾಡಿಗ, ಸುಧಾ ಶೆಟ್ಟಿ ಸೇರಿದಂತೆ ನೂರಾರು ಗಣ್ಯರು ಪಾಲ್ಗೊಂಡು ಭಾವಚಿತ್ರಕ್ಕೆ ಪುಷ್ಫವೃಷ್ಠಿಗೈದು ಕೊನೆಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಆರಂಭದಲ್ಲಿ ತಾರಾ ಅವರ ಇಷ್ಟರ್ಥದ ಸಂಕೀರ್ತನೆ, ಭಾವಗೀತೆ, ಭಜನೆ ನಡೆಸಲಾಯಿತು. ಚಂದ್ರಾವತಿ ರಾವ್ ತನ್ನ ಕವಿತೆಯಲ್ಲಿ ತಾರಾ ಜೀವನ ವೈಶಿಷ್ಟ್ಯತೆ ಮೆಲುಕು ಹಾಕುತ್ತಾ ನೆರೆದ ತಾರಾಭಿಮಾನಿಗಳನ್ನು ಮೂಕಪ್ರೇಕ್ಷಕರನ್ನಾಗಿಸಿತು. ಬಿಎಸ್‍ಕೆಬಿ ಗೌರವ ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ ಕೆ.ಪೆÇೀತಿ ಕಾರ್ಯಕ್ರಮ ನಿರ್ವಹಿಸಿದರು.

ತಾರಾ ಎಸ್.ರಾವ್ ಶೀಘ್ರವೇ ಕೃತಿ ಪ್ರಕಟ
ತಾರಾ ಎಸ್.ರಾವ್ ಭವಿಷ್ಯತ್ತಿನ ಪೀಳಿಗೆಗೆ ಆದರ್ಶ ಕಲಾವಿದೆ, ಆದರನೀಯ ಗೃಹಿಣಿಯಾಗಿ ಬಾಳಿದ ಇಂತಹ ಮಹಾನ್ ಚೇತನ ನಮ್ಮೆಲ್ಲರೊಂಇಗೆ ಸದಾ ಅನುಕರಣೀಯರಾಗಿ ಬೆಳಗುತ್ತಿರಬೇಕು ಎನ್ನುವ ಉದ್ದೇಶವಿರಿಸಿ ಸಾಹಿತ್ಯ ಬಳಗ ಮುಂಬಯಿ ಆಕೆಯ ಜೀವನಶೈಲಿಯ ಒಂದು ಕೃತಿಯನ್ನು ಶೀಘ್ರವೇ ಪ್ರಕಾಶಿಸಲು ನಿರ್ಧಾರಿಸಿದೆ. ತಾರಾ ಬಗೆಗಿನ ಚಿತ್ರ ಲೇಖನ, ಆಕೆಯ ಬಗೆಗಿನ ಒಡನಾಟದ ಒಂದುಷ್ಟು ವಿಚಾರಗಳು ಸಹೃದಯಿಗಳು ನೀಡಿದಲ್ಲಿ ಕೃತಿಯಲ್ಲಿ ಪ್ರಕಾಶಿಸಲಾಗುವುದು. ವಿವರಗಳಿಗಾಗಿ ಮನುಶ್ರೀ, ಸಿ-42/2/2, ಸೆಕ್ಟರ್ 29, ವಾಶಿ, ನವಿಮುಂಬಯಿ 400703. ದೂರವಾಣಿ (022)27880671, 9969533123 ಸಂಖ್ಯೆಗಳನ್ನು ಸಂಪರ್ಕಿಸ ಬಹುದು ಎಂದು ಹೆಚ್.ಬಿ.ಎಲ್ ರಾವ್ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here