Saturday 10th, May 2025
canara news

ಕನ್ನಡ ಸಂಘ ಸಾಂತಾಕ್ರೂಜ್ 2017-20ನೇ ಸಾಲಿಗೆ ನೂತನ ಪದಾಧಿಕಾರಿಗಳು

Published On : 11 Sep 2017   |  Reported By : Rons Bantwal


ಏಳನೇ ಬಾರಿಗೆ ಅಧ್ಯಕ್ಷರಾಗಿ ಎಲ್.ವಿ ಅವಿೂನ್ ಪುನಾರಾಯ್ಕೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.11: ಕನ್ನಡ ಸಂಘ ಸಾಂತಾಕ್ರೂಜ್ (ರಿ).ಇದರ 2017-2020ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಇಂದಿಲ್ಲಿ ಗುರುವಾರ ಸಂಜೆ ಸಾಂತಾಕ್ರೂಜ್ ಪೂರ್ವದ ವಕೋಲಾ ಅಲ್ಲಿನ ಸಂಘದ ಸ್ವಕಚೇರಿಯಲ್ಲಿ ನಡೆಸಲ್ಪಟ್ಟಿತು. ಅಂತೆಯೇ 2017-2020ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಎಲ್.ವಿ ಅವಿೂನ್ ಅವರನ್ನು ಸಭೆಯು ಏಳÀನೇ ಬಾರಿಗೆ ಹಾಗೂ ಗೌರವ ಪ್ರಧಾನ ಕಾರ್ಯದರ್ಶಿ ಆಗಿ ಸುಜತಾ ಆರ್.ಶೆಟ್ಟಿ ದ್ವಿತೀಯ ಬಾರಿಗೆ ಸರ್ವಾನುಮತದಿಂದ ಪುನಾರಾಯ್ಕೆಗೊಳಿಸಿತು.

ಕಳೆದ ಶನಿವಾರ ಸಂಘದ ಅರ್ವತ್ತನೇ ವಾರ್ಷಿಕ ಮಹಾಸಭೆಯು ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಕಿರು ಸಭಾಗೃಹದಲ್ಲಿ ನಡೆಸಲ್ಪಟ್ಟಿದ್ದು ಮಹಾಸಭೆಯ ಕಾರ್ಯಸೂಚಿಯಂತೆ ಒಟ್ಟು 556 ಸದಸ್ಯತ್ವವುಳ್ಳ ಸಂಘದ ಭವಿಷ್ಯತ್ತಿನ ಸಮಿತಿಗೆ ನೂತನ ಕಾರ್ಯಕಾರಿ ಸಮಿತಿ ಆಯ್ಕೆ ಆಗಬೇಕಿತ್ತು. ಆದರೆ ಈ ಬಾರಿ ಕಾರ್ಯಕಾರಿ ಸಮಿತಿಗೆ ಹದಿನೈದು ಸದಸ್ಯತ್ವಕ್ಕಾಗಿ ಸುಮಾರು 28 ಸದಸ್ಯರು ನಾಮಪತ್ರ ಸಲ್ಲಿಸಿದ ಕಾರಣ ಚುನಾವಣೆ ಮುಖೇನ ಆಯ್ಕೆ ನಡೆಸಲ್ಪಟ್ಟಿತು. ಆರು ದಶಕಗಳ ಇತಿಹಾಸದಲ್ಲೇ ಮೊದಲ ಬಾರಿ ಎಂಬಂತೆ ಸಂಘವು ಕಾರ್ಯಕಾರಿ ಸಮಿತಿ ಆಯ್ಕೆಗೆ ಚುನಾವಣೆ ನಡೆಸುವುದು ಅನಿವಾರ್ಯವಾಯಿತು ಎನ್ನುತ್ತಾರೆ ಸಂಘದ ಹಿರಿಯ ಸದಸ್ಯರು.

ಮತದಾನದಲ್ಲಿ ಪ್ರಸಕ್ತ ಅಧ್ಯಕ್ಷ ಎಲ್.ವಿ ಅವಿೂನ್ ಗರಿಷ್ಠ ಮತಗಳಿಂದ ಚುನಾಯಿತರಾದರು. ಅಂತೆಯೇ ಸ್ಪರ್ಧಿಸಿದ್ದ ದಿನೇಶ್ ಬಿ.ಅವಿೂನ್, ಲಕ್ಷ್ಮೀ ಎನ್.ಕೋಟ್ಯಾನ್, ಬನ್ನಂಜೆ ರವೀಂದ್ರ ಅವಿೂನ್, ಚಂದ್ರಹಾಸ ಜೆ.ಕೋಟ್ಯಾನ್, ಸುಜತಾ ಆರ್.ಶೆಟ್ಟಿ, ಗೋವಿಂದ ಆರ್.ಬಂಗೇರಾ, ಶಾರದಾ ಎಸ್.ಪೂಜಾರಿ, ಸುಮಾ ಎಂ.ಪೂಜಾರಿ, ಸುಧಾಕರ್ ಉಚ್ಚಿಲ್, ಶಕೀಲಾ ಪಿ.ಶೆಟ್ಟಿ, ವನಿತಾ ನೋಂದ, ಶಾಲಿನಿ ಎಸ್.ಶೆಟ್ಟಿ, ಗುಣಪಾಲ ಶೆಟ್ಟಿ ಐಕಳ, ಆರ್.ಪಿ ಹೆಗ್ಡೆ ಚುನಾಯಿತರಾದರು. ಚುನಾವಣಾ ಅಧಿಕಾರಿಗಳಾಗಿ ಧರ್ಮೇಶ್ ಎಸ್.ಸಾಲ್ಯಾನ್, ಬಿ.ಆರ್ ಪೂಂಜಾ ಮತ್ತು ವಿಜಯಕುಮಾರ್ ಕೆ.ಕೋಟ್ಯಾನ್ ಚುನಾವಣಾ ಪ್ರಕ್ರಿಯೆ ನಡೆಸಿದರು.
ನೂತನ ಪದಾಧಿಕಾರಿಗಳು: ಎಲ್.ವಿ ಅವಿೂನ್ (ಅಧ್ಯಕ್ಷರು) ಗುಣಪಾಲ ಶೆಟ್ಟಿ ಐಕಳ (ಉಪಾಧ್ಯಕ್ಷರು) ಸುಜತಾ ಆರ್.ಶೆಟ್ಟಿ (ಗೌ| ಪ್ರ| ಕಾರ್ಯದರ್ಶಿ) ಸುಧಾಕರ್ ಉಚ್ಚಿಲ್ (ಗೌ| ಪ್ರ| ಕೋಶಾಧಿಕಾರಿ) ಚಂದ್ರಹಾಸ ಜೆ.ಕೋಟ್ಯಾನ್ (ಜೊತೆ ಕಾರ್ಯದರ್ಶಿ), ದಿನೇಶ್ ಬಿ.ಅವಿೂನ್ (ಜೊತೆ ಕೋಶಾಧಿಕಾರಿ) ಆಯ್ಕೆಯಾದರು.

ಗೋವಿಂದ ಆರ್.ಬಂಗೇರಾ, ಶಾರದಾ ಎಸ್.ಪೂಜಾರಿ, ಸುಮಾ ಎಂ.ಪೂಜಾರಿ, ಶಾಲಿನಿ ಎಸ್.ಶೆಟ್ಟಿ, ಆರ್.ಪಿ ಹೆಗ್ಡೆ (ಕಾರ್ಯಕಾರಿ ಸಮಿತಿ ಸದಸ್ಯರು), ನಾರಾಯಣ ಎಸ್.ಶೆಟ್ಟಿ, ಬಿ.ಆರ್ ಪೂಂಜಾ, ಎನ್.ಎಂ ಸನೀಲ್ (ಸಲಹಾ ಸಮಿತಿ ಸದಸ್ಯರು), ಶಿವರಾಮ ಎಂ.ಕೋಟ್ಯಾನ್, ಲಿಂಗಪ್ಪ ಬಿ.ಅವಿೂನ್, ಸುರೇಶ್ ಎನ್.ಶೆಟ್ಟಿ, ವಿಜಯಕುಮಾರ್ ಕೆ.ಕೋಟ್ಯಾನ್, ಉಷಾ ವಿ.ಶೆಟ್ಟಿ, ಹರೀಶ್ ಜೆ.ಪೂಜಾರಿ, ಸುಜತಾ ಸುಧಾಕರ್ ಉಚ್ಚಿಲ್ (ವಿಶೇಷ ಆಮಂತ್ರಿತ ಸದಸ್ಯರು) ಅವರನ್ನು ಆಯ್ಕೆ ನಡೆಸಲಾಯಿತು.

ರಾಜಶೇಖರ್ ಎ.ಅಂಚನ್ (ಆಂತರಿಕ ಲೆಕ್ಕ ಪರಿಶೋಧಕ), ಹೆಚ್.ಡಿ.ಪೂಜಾರಿ (ಬಾಹ್ಯ ಲೆಕ್ಕ ಪರಿಶೋಧಕ), ಬನ್ನಂಜೆ ರವೀಂದ್ರ ಅವಿೂನ್ (ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ), ಶಕೀಲಾ ಪಿ.ಶೆಟ್ಟಿ (ಕಾರ್ಯದರ್ಶಿ), ವನಿತಾ ವೈ.ನೋಂದ (ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ), ಲಕ್ಷ್ಮೀ ಎನ್.ಕೋಟ್ಯಾನ್ (ಕಾರ್ಯದರ್ಶಿ) ಆಗಿ ಸಮಿತಿಯು ಆಯ್ಕೆಗೊಳಿಸಿತು.

ಸಾಮೂಹಿಕ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತು. ಅಧ್ಯಕ್ಷರು ಉಪಸ್ಥಿತ ನೂತನ ಪದಾಧಿಕಾರಿಗಳಿಗೆ ಪುಷ್ಪಗುಪ್ಛವನ್ನಿತ್ತು ಅಭಿವಂದಿಸಿದರು. ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಸ್ವಾಗತಿಸಿ ನೂತನ ಪದಾಧಿಕಾರಿಗಳ ಯಾದಿ ಪ್ರಕಟಿಸಿ ಅಭಾರ ಮನ್ನಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here