ಕುಂದಾಪುರ, ಸೆ.೧೧: ಉಡುಪಿ ಜಿಲ್ಲಾ ಮತ್ತು ಕುಂದಾಪುರ ತಾಲೂಕು ದ.ಸಂ.ಸ. ಇವರಿಂದ ಗೌರಿ ಲಂಕೇಶ್ ಹತ್ಯೆಗೆ ಖಂಡನೆ ಮತ್ತು ಶ್ರದ್ದಾಂಜಲಿ ಅರ್ಪಣಾ ಸಭೆ ಕುಂದಾಪುರ ಚಿಕ್ಕನಸಾಲು ರಸ್ತೆಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆಡೆಯಿತು. ಜಿಲ್ಲಾ ಸಂಘಟನ ಸಂಚಾಲಕರಾದ ವಾಸುದೇವ ಮೂದುರು ಗೌರಿ ಲಂಕೇಶ್ ಅವರ ಜೀವನದ ಬಗ್ಗ ಮಾತಾನಾಡಿ, ಅವರ ಹತ್ಯೆ ಪ್ರಜಾಪ್ರಭುತ್ವಕ್ಕೆ ತಕ್ಕುದಲ್ಲಾ 'ಎಂದು ಪ್ರಸ್ತಾವನ ಭಾಷಣ ಮಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಹಿತಿ ಪತ್ರಕರ್ತ ಬರ್ನಾಡ್ ಡಿಕೋಸ್ತಾ, ಮತ್ತು ವಿನೋದ್ ಕ್ರಾಸ್ತಾ ಹಾಗೂ ಸಮಿತಿಯ ಪಧಾಧಿಕಾರಿಗಳ ಜೊತೆ ಗೌರಿ ಲಂಕೇಶ್ ಇವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚಣೆಗೈದರು. ಅತಿಥಿ ವಿನೋದ್ ಕ್ರಾಸ್ತಾ ' ಗೌರಿ ಲಂಕೇಶ್ ಒರ್ವ ಅಹಿಂಸಾತ್ಮ್ಕಳಾಗಿದ್ದು, ಅವಳು ದಲಿತರ ಅಲ್ಪ ಸಂಖ್ಯಾಕರಿಗೆ ಧ್ವನಿಯಾಗಿದ್ದಳು, ಅವರ ಸಿದ್ದಾಂತಕ್ಕೆ ಸಾವಿಲ್ಲಾ, ಒರ್ವ ಗೌರಿ ಲಂಕೇಶ್ ಕೊಲೆಯಾಗಿದೆ, ಇದರಿಂದಾಗಿ ಇನ್ನೂ ಮುಂದೆ ಸಾವಿರಾರು ಗೌರಿ ಲಂಕೇಶ್ ಹುಟ್ಟುತ್ತಾರೆಂದು' ತಿಳಿಸಿದರು.
ಮುಖ್ಯ ಅತಿಥಿ ಬರ್ನಾಡ್ ಡಿಕೋಸ್ತಾ ಮಾತಾಡಿ ' ಗೌರಿ ಲಂಕೇಶ್ ಕೇವಲ ಪತ್ರಕರ್ತೆ, ಸಾಹಿತಿ ಮಾತ್ರವಲ್ಲಾ, ಅವಳೊಬ್ಬಳು ಸಮಾಜ ಸುಧಾರಾಕಳಾಗಿದ್ದಳು, ಗೌರಿ ಲಂಕೇಶ್ ಹಿಂದು ಧರ್ಮದ ಬಗ್ಗೆ ಅವಹೇಳನ ಮಾಡಿದ್ದಲ್ಲಾ, ಹಿಂದೂ ಧರ್ಮದಲ್ಲಿದ್ದ ದೋಷಗಳನ್ನು ತೊರೀಸಿ ಕೊಟ್ಟಿದ್ದಳು. ಮಡಿ, ಮೂಢ ನಂಬಿಕೆ, ಸಂಸ್ಥಾಪಕರ ಅನಾಚಾರ ಇನ್ನ್ನಿತರ ವಿಚಾರಗಳನ್ನು ಎತ್ತಿ ತೊರಿಸಿದ ಧಿಮಂತ ಮಹಿಳೆ, ಅವಳ ಕೊಲೆ ಮಾಡಿದ್ದು ಯಾವತ್ತೂ ಅನ್ಯಾಯವೆ. ಹಿಂದಿನಿಂದಲೂ ಸಮಾಜ ಸುಧಾರಣೆ ಮಾಡಲು ಬಂದವರ ಕೊಲೆಯನ್ನು ಮಾಡಲಾಗಿದೆ, ಯೇಸುವನ್ನು, ಗಾಂಧಿಜಿಯನ್ನು, ಅಬ್ರಾಹಮ್ ಲಿಂಕರನ್ನು ಸಾಯಿಸಿದ್ದಾರೆ ಆದರೆ ಅವರ ವಿರೋಧಿಗಳು ಅವರನ್ನು ಸಾಯಿಸಲಸ್ಟೇ ಅಯಿತು ವಿನಹ, ಅವರ ಸಿದ್ದಾಂತಗಳು ಸಾಯಲಿಲ್ಲಾ ಬದಲಿಗೆ ಅವರ ಹಿಂಬಾಲಕರು ಹೆಚ್ಚಾಗಿದ್ದಾರೆ, ಹಾಗೆ ಗೌರಿ ಲಂಕೇಶ್ ಲಂಕೇಶ್ ಅವರನ್ನು ಸಾಯಿಸಲಾಗಿದೆ, ಅವಳ ತತ್ವ ಸಿದ್ದಾಂತಕ್ಕೂ ಸಾವಿರುವುದಿಲ್ಲಾ, ಬದಲಿಗೆ ಅವರ ಹಿಂಬಾಲಕರು ಹೆಚ್ಚಾಗುತ್ತಾರೆ' ಎನ್ನುತ್ತಾ ಅವಳ ಹತ್ಯೆಯನ್ನು ತೀವ್ರವಾಗಿ ಖಂಡಿಸಿ ಅವರ ಆತ್ಮಕ್ಕೆ ಚೀರ ಶಾಂತಿಯನ್ನು ಕೋರಿದರು.
ತಾಲೂಕು ಸಂಚಾಲಕರಾದ ರಾಜು ಬೆಟ್ಟಿನ ಮನೆ " ಗೌರಿ ಲಂಕೇಶ್ ಅವರ ಸಾವಿನಿಂದ ನಮಗೆ ನಶ್ಟ ಉಂಟಾಗಿದೆ, ಎಂದು ಅವರ ಹತ್ಯೆಯನ್ನು ಖಂಡಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಉಡುಪಿ ಜಿಲ್ಲಾ ದ.ಸಂ.ಸ. ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು ಮಾತಾಡಿ ' ಗೌರಿ ಲಂಕೇಶ್ ನಮ್ಮ ದಲಿತರಿಗಾಗಿ ಸಾಕಸ್ಟು ಶ್ರಮ ಪಟ್ಟಿದ್ದಾರೆ, ಗೌರಿ ಲಂಕೇಶ್ ಅವರಂತೆ ನಮ್ಮ ಸಮಾಜದ ಎಳಿಗೆಗಾಗಿ ಹಲವರು ಶ್ರಮಿಸಿದ್ದಾರೆ, ಅಂಬೇಡ್ಕರ್ ಮಾತ್ರವಲ್ಲಾ, ರಾಜಾರಾಮ್ ಮತ್ತು ಹಲವರು ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಪ್ರಗತಿಪರ ಚಿಂತನೇಯ ಹಲವರ ಕೊಲೆಯಾಗಿದ್ದು, ಗೊತ್ತಿದ್ದೂ ರಾಜ್ಯ ಸರಕಾರ ಸ್ವಲ್ಪ ಜಾಗ್ರತೆ ಮಾಡಿದಲ್ಲಿ ಈ ಕೊಲೆ ತಪ್ಪಿಸ ಬಹುದಿತ್ತು ಎಂದು ತಿಳಿಸುತ್ತಾ, ಗೌರಿ ಲಂಕೇಶ್ ಅವರ ಹತ್ಯೆಯನ್ನು ಬಲವಾಗಿ ಖಂಡಿಸುತೇವೆ’ ಎಂದರು.
ಸಭೆಯಲ್ಲಿ ಪದಾಧಿಕಾರಿಗಳಾದ ಸಭೆಯಲ್ಲಿ ಪದಾಧಿಕಾರಿಗಳಾದ ನಗರ ಮಹಿಳಾ ಘಟಕದ ಅಧ್ಯಕ್ಷೆ ಸೀತಾ, ಮಂಜುನಾಥ ಕೆ. ತಾಲೂಕು ಸಂಘಟನ ಸಂಚಾಲಕರು, ಮುಖಂಡರುಗಳಾದ ಪ್ರಭಾಕರ, ಸುರೇಶ,ಗೋಪಾಲ ಆನಗಳ್ಳಿ ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು. ನಗರ ಸಂಚಾಲಕ ಪ್ರಾಧ್ಯಪಕರಾದ ಕ್ರಸ್ಣಮೂರ್ತಿ ಡಿ.ಬಿ. ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದಗಳನ್ನು ಅರ್ಪಿಸಿದರು