Saturday 10th, May 2025
canara news

ಯಂಗ್‍ಮೆನ್ಸ್ ಎಜ್ಯುಕೇಶನ್ ಸೊಸೈಟಿ ಸಂಭ್ರಮಿಸಿದ 72ನೇ ವಾರ್ಷಿಕೋತ್ಸವ

Published On : 14 Sep 2017   |  Reported By : Rons Bantwal


ಮಕ್ಕಳಲ್ಲಿ ವಾಸ್ತವಿಕತೆಯ ಅರಿವು ಹೆಚ್ಚಿಸಿರಿ : ಡಾ| ಎನ್.ಕೆ ಬಿಲ್ಲವ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.14: ಪ್ರತೀಯೊಂದು ಮಕ್ಕಳಲ್ಲೂ ಭೇದಭಾವಕ್ಕಿಂತ ಸಖೀಭಾವ ರೂಢಿಸುವ ಕೆಲಸ ಪಾಲಕರಿಂದಲೇ ಆಗಬೇಕು. ಅಂತಹ ಮಕ್ಕಳಲ್ಲಿ ಸಾಮಾಜಿಕ ಕಳಕಳಿಯ ಹುಮ್ಮಸ್ಸು ಹೆಚ್ಚಿಸುವುದು. ಆ ಮೂಲಕ ರಾಷ್ಟ್ರದ ಮತ್ತು ಸ್ವಭವಿಷ್ಯ ರೂಪಿಸುವ ವಾಸ್ತವಿಕತೆ ಮಕ್ಕಳಲ್ಲಿ ತನ್ನೀಂತಾನೇ ಹುಟ್ಟುತ್ತದೆ. ಯಾವುದೇ ಕಾರಣಕ್ಕೂ ಮಕ್ಕಳಲ್ಲಿ ಕೀಳರಿಮೆ ವಿಚಾರಗಳನ್ನು ಭಿತ್ತದೆ ಸಾಮರಸ್ಯದ ಬಾಳಿಗೆ ಪೆÇ್ರೀತ್ಸಾಹಕರಾಗಬೇಕು. ಯುವಪೀಳಿಗೆಯಲ್ಲಿ ಆತ್ಮವಿಶ್ವಾಸದ ಕೊರತೆ ಕಾಣುತ್ತಿದೆ. ಮಕ್ಕಳು ಕೂಡಾ ಎಂದಿಗೂ ಋಣಾತ್ಮಾಕ ಚಿಂತನೆಗಳಿಂದ ದೂರವಿದ್ದು ಸದಾ ಧನಾತ್ಮಕ ಚಿಂತನೆ ಮೈಗೂಡಿಸಿ ಕೊಳ್ಳಬೇಕು ಅವಾಗಲೇ ನಿಮ್ಮ ಜೀವನಗುರಿ ನಿರ್ಧಿಷ್ಟವಾಗಿ ತಲುಪುವುದು. ಈ ಬಗ್ಗೆ ಅವರಲ್ಲಿ ಭರವಸೆಯ ಅರಿವು ಹೆಚ್ಚಿಸುವ ಅಗತ್ಯವಿದೆ. ಇಂತಹ ವಿಚಾರಧಾರೆ ಗೈಯುವ ಕೆಲಸ ಇಂತಹ ಸಂಸ್ಥೆಗಳಿಂದಲೇ ಆಗಬೇಕಾಗಿದೆ ಎಂದು ಶುಭದಾ ಆಂಗ್ಲ ಮಾಧ್ಯಮ ವಿದ್ಯಾಲಯ ನಾವುಂದ ಕುಂದಾಪುರ ಇದರ ಸಂಸ್ಥಾಪಕ ಡಾ| ಎನ್.ಕೆ ಬಿಲ್ಲವ ನುಡಿದರು.

ಕಳೆದ ಶನಿವಾರ ಮಾಟುಂಗಾದಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಸಭಾಗೃಹದಲ್ಲಿ ಮಹಾನಗರದ ಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಯಂಗ್‍ಮೆನ್ಸ್ ಎಜ್ಯುಕೇಶನ್ ಸೊಸೈಟಿ ಸಂಭ್ರಮಿಸಿದ 72ನೇ ವರ್ಧಂತ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ವಾರ್ಷಿಕೋತ್ಸವಕ್ಕೆ ಚಾಲನೆಯನ್ನಿತ್ತು ಡಾ| ಬಿಲ್ಲವ ಮಾತನಾಡಿದರು.

ಸೊಸೈಟಿ ಅಧ್ಯಕ್ಷ ಎನ್.ಪಿ ಸುವರ್ಣ ಅಧ್ಯಕ್ಷತೆಯಲ್ಲಿ ಆಚರಿಸಲ್ಪಟ್ಟ ಸಮಾರಂಭದಲ್ಲಿ ಉಪಸ್ಥಿತ ನಾಡಿನ ಹಿರಿಯ ಸಾಹಿತಿ ಡಾ| ಜಿ.ಡಿ ಜೋಶಿ ಅವರು ಪ್ರಭಾ ಎನ್.ಪಿ ಸುವರ್ಣ ರಚಿತ `ಗೊಂಚಲು' ಕೃತಿ ಬಿಡುಗಡೆ ಗೊಳಿಸಿದರು ಹಾಗೂ ಕನ್ನಡ ಶಾಲಾ ವಿದ್ಯಾಥಿರ್üಗಳಿಗೆ ಪ್ರತಿಭಾ ಪುರಸ್ಕಾರವಿತ್ತು ಗೌರವಿಸಿದರು.

ನನ್ನ ಅದೆಷ್ಟೋ ವಿದ್ಯಾಥಿರ್üಗಳು ಹಗಲು ಅಲ್ಲಿಲ್ಲಿ ದುಡಿದು ರಾತ್ರಿಶಾಲೆಗಳಲ್ಲಿ ಓದಿ ಅಪಾರ ಪರಿಶ್ರಮದಿಂದ ಸುಶಿಕ್ಷಿತರಾಗಿದ್ದಾರೆ. ಅವರ್ಯಾರೂ ಶ್ರೀಮಂತರಾಗುವ ಕನಸು ಎಂದೂ ಕಂಡವರಲ್ಲ ಬರೇ ಹಸಿವು ನಿಭಾಯಿಸಲು ಬಂದವರು. ಇಂದು ಅದೆಷ್ಟೋ ಮಂದಿ ಮಾಲಕರಾಗಿ ಇಷ್ಟೆತ್ತರಕ್ಕೆ ಬೆಳೆದು ಬದುಕು ಕಟ್ಟಿದ್ದಾರೆ ಎನ್ನುವ ಅಭಿಮಾನ ನನ್ನ ಶಿಕ್ಷಕಸೇವೆಗೆ ಸಂದ ಗೌರವವಾಗಿದೆ. ಪ್ರಭಾ ಕೂಡಾ ನನ್ನ ವಿದ್ಯಾಥಿರ್üನಿಯಾಗಿದ್ದು ಇಷ್ಟೆತ್ತರಕ್ಕೆ ಬೆಳೆದರೂ ಇಂದಿಗೂ ಶಿಷ್ಯೆಯಾಗಿ ನನ್ನೊಂದಿರುವುದು ತುಂಬಾ ಅಭಿಮಾನ ಅಣಿಸಿತ್ತಿದೆ. ಆಕೆಗೆ `ಗೊಂಚಲು' ಕೃತಿ ರೂಪಿಸುವಲ್ಲಿ ನಾನು ಪ್ರೇರೆಪಿಸಿದ್ದೇನೆ. ಕೃತಿ ನನ್ನ ಹಸ್ತದಿಂದಲೇ ಅನಾವರಣ ಗೊಳಿಸುವ ಬಗ್ಗೆ ಕಾಳಜಿ ತೋರಿದ ಈ ಸಂಸ್ಥೆಯ ಸೇವೆ ಮೆಚ್ಚುಗೆಯದ್ದಾಗಿದೆ ಎಂದು ಡಾ| ಜಿ.ಡಿ ಜೋಶಿ ತಿಳಿಸಿದರು.

ಕ್ರಿಯಾಶೀಲಾ ಮಕ್ಕಳ ಪೆÇೀಷಣೆಯು ಶೈಕ್ಷಣಿಕ ಜ್ಞಾನೋದಯದಿಂದಲೇ ಸಾಧ್ಯ. ಇಲ್ಲಿ ಭಾಷೆಕ್ಕಿಂತಲೂ ಶಿಕ್ಷಣ ಮೌಲ್ಯವೇ ಮಹತ್ವದ್ದು. ನಮ್ಮ ಸಂಸ್ಥೆಯು ಇದನ್ನೇ ಧ್ಯೇಯವಾಗಿರಿಸಿ ಮಕ್ಕಳನ್ನು ಪೆÇ್ರೀತ್ಸಹಿಸಿ ಬಂದಿದೆ. ಶೈಕ್ಷಣಿಕ ಪೆÇ್ರೀತ್ಸಾಹದಿಂದ ಪ್ರತಿಭಾನ್ವಿತರ ಗುರುತುವಿಕೆ ಸಾಧ್ಯವಾಗಿದ್ದು ಶಿಕ್ಷಣಪ್ರೇಮಿಗಳು ಸಹಕರಿಸಿ ಮಕ್ಕಳಲ್ಲಿ ಸಂತೃಪ್ತಿಯ ಮನೋಭಾವ ಬೆಳೆಸಿರಿ. ನನ್ನ ಗೆಳೆಯರ ಬಳಗವೂ ಎಂದಿಗೂ ಪೆÇ್ರೀತ್ಸಹಿಸಿದ್ದಾರೆ. ಈ ಕಾರ್ಯಕ್ರಮವೂ ತಮ್ಮೆಲ್ಲರ ಸಹಕಾರದಿಂದಲೇ ಮೂಡಿ ಬರಲು ಸಾಧ್ಯವಾಗಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಎನ್.ಪಿ ಸುವರ್ಣ ತಿಳಿಸಿದರು.

ರಾಧಾಕೃಷ್ಣ ನೃತ್ಯ ಅಕಾಡೆಮಿ ವಿೂರಾರೋಡ್ ಪ್ರತಿಭೆಗಳು ಪ್ರಾರ್ಥನೆಯನ್ನಾಡಿದರು. ಪ್ರಭಾ ಸುವರ್ಣ ಶ್ಲೋಕ ಪಠಿಸಿ ಸಾಮಾಜಿಕ ಮತ್ತು ನೆರೆದ ಸಭಿಕರಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕಾಳಜಿಯನ್ನು ಜೀವಾಳವಾಗಿಸಿದರು. ಸೊಸೈಟಿ ಉಪಾಧ್ಯಕ್ಷ ಆನಂದ ಎ.ಶೆಟ್ಟಿ ssಸ್ವಾಗತಿಸಿದರು. ಚಿತ್ರಾಪು ಕೆ.ಎಂ ಕೋಟ್ಯಾನ್ ಅತಿಥಿü ಪರಿಚಯ ಗೈದರು. ಗೌ| ಕೋಶಾಧಿಕಾರಿ ಶೇಖರ್ ಎನ್.ಸುವರ್ಣ ಪ್ರತಿಭಾ ಪುರಸ್ಕೃತರ ಯಾದಿ ವಾಚಿಸಿದರು. ವಸಂತ್ ಎನ್.ಸುವರ್ಣ ಡೊಂಬಿವಿಲಿ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಪಿ.ಎನ್ ಶೆಟ್ಟಿಗಾರ್ ವಂದಿಸಿದರು. ರಾಧಾಕೃಷ್ಣ ನೃತ್ಯ ಅಕಾಡೆಮಿ ಕಲಾವಿದರು ನಾಟ್ಯಗುರು ಸುಕಾನ್ಯ ಭಟ್ ನಿರ್ದೇಶನದಲ್ಲಿ ನೃತ್ಯವೈಭವ ಪ್ರಸ್ತುತ ಪಡಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here