Saturday 10th, May 2025
canara news

ಶ್ರೀಕ್ಷೇತ್ರ ಕದ್ರಿಯಲ್ಲಿ ರಾಷ್ಟ್ರೀಯ ಮ್ಕಕಳ ಹಬ್ಬ ಶ್ರೀಕೃಷ್ಣ ವೇಷ ಸ್ಪರ್ಧೆ

Published On : 15 Sep 2017   |  Reported By : Canaranews Network


ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ಸೆಪ್ಟೆಂಬರ್ 13ನೇ ಬುಧವಾರ ವರ್ಷಂಪ್ರತಿಯಂತೆ ಶ್ರೀಕ್ಷೇತ್ರ ಕದ್ರಿಯಲ್ಲಿ ರಾಷ್ಟ್ರೀಯ ಮ್ಕಕಳ ಹಬ್ಬ ಶ್ರೀಕೃಷ್ಣ ವೇಷ ಸ್ಪರ್ಧೆಯು ಜರಗಿತ್ತು. ಬೆಳಿಗ್ಗೆ 9ರಿಂದ ಆರಂಭಗೊಂಡು ರಾತ್ರಿ 12ರವರೆಗೆ ನಡೆದ ಈ ಬೃಹತ್ ಸ್ಪರ್ಧಾಕಾರ್ಯಕ್ರಮದಲ್ಲಿ ಒಂದು ವರ್ಷದೊಳಗಿನ ಕಂದಮ್ಮಗಳಿಂದ ತೊಡಗಿ 7ನೇ ತರಗತಿವರೆಗಿನ ಸಹಸ್ರಾರು ಮಕ್ಕಳು ಸ್ಪರ್ಧೆಗಳಲ್ಲಿ ಪಾಲ್ಗೂಂಡರು.

ಪಾರಂಪರಿಕ/ ಆಧುನಿಕ ಗೀತೆಗಳ ಪ್ರಸ್ತುತಿ ‘ಗಾನವೈಭವ’ ಸ್ಪರ್ಧೆ ಸಹಿತ ಕಂದಕೃಷ್ಣ, ಮುದ್ದುಕೃಷ್ಣ, ತುಂಟಕೃಷ್ಣ, ಬಾಲಕೃಷ್ಣ, ಕಿಶೋರಕೃಷ್ಣ, ಶ್ರೀಕೃಷ್ಣ, ಗೀತಾಕೃಷ್ಣ, ರಾಧಾಕೃಷ್ಣ, ದೇವಕಿಕೃಷ್ಣ, ಯಶೋದಕೃಷ್ಣ, ವಸುದೇವಕೃಷ್ಣ, ಯಕ್ಷಕೃಷ್ಣ, ಶಂಖನಾದ, ಶಂಖ ಉದ್ಘೋಷ, ನಂದಗೋಕುಲ, ಬಾಲಕೃಷ್ಣ ರಸಪ್ರಶ್ನೆ, ಶ್ರೀಕೃಷ್ಣ ರಸಪ್ರಶ್ನೆ, ಛಾಯಾಕೃಷ್ಣ, ವರ್ಣವೈಭವ, ಮೊದಲಾದ ವೈವಿಧ್ಯಮಯ ಸ್ಪರ್ಧೆಗಳು ವಿವಿಧ ವಿಭಾಗಗಳಲ್ಲಿ ನಡೆದವು. ದ.ಕ. ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ಈ ಸಂದರ್ಭದಲ್ಲಿ ಪಾಲ್ಗೂಂಡು ಇಷ್ಟೊಂದು ಬೃಹತ್ ಪ್ರ್ರಮಾಣದ ಸ್ಪರ್ಧ ಸಂಘಟನೆಯನ್ನು ತನೆಂದಿಗÀೂ ಕಂಡಿಲ್ಲ ಇದರ ಯಶಸ್ಸಿನ ಹಿಂದೆ ದುಡಿದ ಎಲ್ಲಾ ಕಾರ್ಯಕರ್ತರ ಮತ್ತು ಸಂಘಟಕರ ಶ್ರಮವನ್ನು ಕೊಂಡಾಡಿದರು.

ಶ್ರೀಗಳಾದ ಸಂಜಯ್ ರಾವ್, ತಾರನಾಥ್ ಶೆಟ್ಟಿ, ಪತ್ರಕರ್ತ ಮನೋಹರ್ ಪ್ರಸಾದ್ ಉಧ್ಯಮಿ ರತ್ನಾಕರ್ ಜೈನ್, ಹರಿಕೃಷ್ಣ ಪುನರೂರು, ಎಂ.ಬಿ. ಪುರಾಣಿಕ್, ಲೀಲಾಕ್ಷ ಕರ್ಕೇರ, ಮೊದಲಾದವರು ಉಪಸ್ಥಿತರಿದ್ದು ಬಹುಮಾನ ವಿತರಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು, ದಯಾನಂದ ಕಟೀಲು ವಂದನಾರ್ಪಣೆÉ ಗೈದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here