Saturday 10th, May 2025
canara news

ಬಿ.ವಿ ಕಾರಂತ ಯುವ ಪ್ರಶಸ್ತಿಗೆ ಭಾಜನರಾದ ಮುಂಬಯಿಯ ರಂಗನಟ ನಿರ್ದೇಶಕ ಲತೇಶ್ ಮೋಹನದಾಸ್ ಪೂಜಾರಿ

Published On : 18 Sep 2017   |  Reported By : Rons Bantwal


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.18: ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆ ನಾಟ್ಕ ಮುದ್ರಾಡಿ ಇದರ 32ನೇ ವಾರ್ಷಿಕ ಸಂಭ್ರಮದಲ್ಲಿ 17ನೇ ವರ್ಷದ ನವರಂಗೋತ್ಸವ ನೀಡುವ ಬಿ.ವಿ.ಕಾರಂತ ಯುವ ಪ್ರಶಸ್ತಿಗೆ ಅಪ್ರತಿಮ ನಾಟಕಕಾರ, ರಂಗ ನಿರ್ದೇಶಕ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಯುವಾಭ್ಯುದಯ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ, ಹಲವಾರು ಪ್ರಶಸ್ತಿ ವಿಜೇತ ಪ್ರತಿಭಾನ್ವಿತ ಕಲಾವಿದ, ಚಿತ್ರನಟ ಲತೇಶ್ ಮೋಹನದಾಸ್ ಪೂಜಾರಿ ಮುಂಬಯಿ ಆಯ್ಕೆಯಾಗಿದ್ದಾರೆ.

ಲತೇಶ್ ಪೂಜಾರಿ ನಿರ್ಮಿಸಿರುವ ಎರಡು ಕಿರು ಚಿತ್ರಗಳಿಗೆ ಈ ಪ್ರಶಸ್ತಿ ಸಂದಿವೆ. ಕಳೆದ ಸುಮಾರು ಎರಡು ದಶಕಗಳಿಂದ ರಂಗಭೂಮಿ, ಚಲನಚಿತ್ರ, ಕಿರುತೆರೆಯಲ್ಲಿ ಕಲಾಸೇವೆ ಮಾಡುತ್ತಿರುವ ಬೇರೆ ಬೇರೆ ಭಾಷೆಗಳ 70 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಲತೇಶ್ ತುಳು ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕಲಾ ಜಗತ್ತು ಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳು ಹರಸಿಕೊಂಡು ಬಂದಿವೆ. ದುಬಾಯಿ, ಬಾರೇಯ್ನ್ ಸಹಿತ ದೇಶ ವಿದೇಶಗಳಲ್ಲೂ ಕಲಾ ಪ್ರದರ್ಶನ ನೀಡಿದ ಹೆಗ್ಗಳಿಕೆ ಲತೇಶ್ ಅವರದ್ದು. ಚಿತ್ರ ರಚನೆ, ನಟನೆ, ಸಂಗೀತ, ರಂಗನಿರ್ದೇಶನದಲ್ಲೂ ಪಳಗಿದ ಇವರ `ಲಗೋರಿ' ನಾಟಕ ನೂತನ ಪ್ರಯೋಗವೇ ಸರಿ.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಂಸ್ಕøತಿಕ ಉಪಸಮಿತಿ ಅಸೋಸಿಯೇಶನ್‍ನ ಸ್ಥಳೀಯ ಸಮಿತಿಗಳಿಗೆ ಆಯೋಜಿಸಿದ್ದ 2016ರ ನಾಟಕೋತ್ಸವದಲ್ಲಿ `ಮಣ್ಣಿ' ತುಳು ನಾಟಕ ಪ್ರಥಮ ಬಹುಮಾನ ಪಡೆದರೆ ಈ ಬಾರಿಯೂ ಗೋರೆಗಾಂ ಸ್ಥಳೀಯ ಸಮಿತಿ ತಂಡದ ಮೂಲಕ ಸ್ಪರ್ಧಿಸಿದ `ಗೌಜಿ' ನಾಟಕಕ್ಕೂ ನಾಟಕದ ಕಥೆ, ಸಂಭಾಷಣೆÉ, ನಿರ್ದೇಶನ ನೀಡಿದ ಲತೇಶ್ ಪೂಜಾರಿ ಬಹುಮಾನ ಪಡೆದಿರುವರು.

ಉದಯೋನ್ಮುಖ ಯುವ ಕಲಾವಿದ ಲತೇಶ್ ಇವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ನಕ್ರೆ ಮೂಲದ ಮೋಹನ್‍ದಾಸ್ ಗಿರಿಯ ಪೂಜಾರಿ (ಭಾರತ್ ಬ್ಯಾಂಕ್‍ನ ಮಾಜಿ ನಿರ್ದೇಶಕ, ಬಿಲ್ಲವರ ಅಸೋಸಿಯೇಶನ್‍ನ ಸಾಮಾಜಿಕ ಮತ್ತು ಸಾಂಸ್ಕೃತಿಕ ಉಪಸಮಿತಿಯ ಕಾರ್ಯಾಧ್ಯಕ್ಷ) ಮತ್ತು ಬಂಟ್ವಾಳ ಕಜೆಕಾರು ಮೂಲದ ಚಂದ್ರಿಕಾ ಎಂ.ಪೂಜಾರಿ ಸುಪುತ್ರ ಓರ್ವ ಹುಟ್ಟುಕಲಾವಿದನಾಗಿದ್ದಾರೆ.

ಪ್ರಶಸ್ತಿಗೆ ಭಾಜನರಾದ ಲತೇಶ್ ಎಂ.ಪೂಜಾರಿ ಅವರಿಗೆ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷರಾದ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಪದಾಧಿಕಾರಿಗಳು, ನಿಕಟಪೂರ್ವಾಧ್ಯಕ್ಷ ಎಲ್.ವಿ ಅವಿೂನ್, ಭಾರತ್ ಬ್ಯಾಂಕ್‍ನ ಮಾಜಿ ಕಾರ್ಯಾಧ್ಯಕ್ಷ ವಿ.ಆರ್ ಕೋಟ್ಯಾನ್, ಬಿಸಿಸಿಐ ಅಧ್ಯಕ್ಷ ಎನ್.ಟಿ ಪೂಜಾರಿ, ಜಗನ್ನಾಥ್ ವಿ.ಕೋಟ್ಯಾನ್ ಗೋರೆಗಾಂ ಮತ್ತಿತರ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here