Saturday 10th, May 2025
canara news

ತುಳುನಾಡಿನ ಇತಿಹಾಸ ಸಾರುವ ಅಪೂರ್ವ ಶಾಸನ ಪತ್ತೆ

Published On : 19 Sep 2017   |  Reported By : canaranews network


ಮಂಗಳೂರು: ತುಳುನಾಡಿನ ಇತಿಹಾಸ ಸಾರುವ ಅಪೂರ್ವ ಶಾಸನವೊಂದು ಪತ್ತೆಯಾಗಿದೆ. ಶ್ರೀ ಕ್ಷೇತ್ರ ಪೊಳಲಿ ದೇಗುಲದ ಜೀರ್ಣೋದ್ಧಾರ ಕಾಮಗಾರಿ ಸಂದರ್ಭದಲ್ಲಿ ಈ ಶಾಸನ ಪತ್ತೆಯಾಗಿದೆ.

ಬಂಟ್ವಾಳದ ಪುರಾಣ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ತ್ವರಿತಗತಿಯಿಂದ ಸಾಗುತ್ತಿದ್ದು ಈ ಸಂದರ್ಭದಲ್ಲಿ ನಡೆಯುತ್ತಿದ್ದ ಕಾಮಗಾರಿ ವೇಳೆ ಈ ಅಪೂರ್ವ ಶಿಲಾಶಾಸನ ಪತ್ತೆಯಾಗಿದೆ. ಈ ಶಾಸನ ಅಳುಪ ವಂಶದ ಅರಸ ಕುಲಶೇಖರನ ಆಳ್ವಿಕೆಯ ಕಾಲದ್ದು ಎಂದು ಹೇಳಲಾಗಿದೆ.

ಈ ಶಾಸನ ಸುಮಾರು 28 ಇಂಚು ಎತ್ತರ ಹಾಗೂ ಮೇಲ್ಭಾಗದಲ್ಲಿ ಸುಮಾರು 24 ಇಂಚು ಅಗಲವಿದ್ದು, ನೋಡಲು ಸುಂದರವಾಗಿದೆ. ಈ ಶಿಲಾ ಫಲಕದಲ್ಲಿ ಅಕ್ಷರಗಳನ್ನು ಇಪ್ಪತ್ತು ಸಾಲುಗಳಲ್ಲಿ ಅತ್ಯಂತ ಸ್ಫುಟವಾಗಿ ಕೆತ್ತಲಾಗಿದೆ. ಶಾಸನ ಫಲಕದ ತಳಭಾಗದಲ್ಲಿ ಎರಡು ಸಿಂಹಗಳ ಮಧ್ಯೆ ಒಬ್ಬ ವ್ಯಕ್ತಿಯು ರಾಜ ಭಂಗಿಯಲ್ಲಿ ಸ್ತ್ರೀಯೊಂದಿಗೆ ಆಸೀನರಾಗಿರುವ ಚಿತ್ರವಿದೆ.

ಈ ಶಾಸನವನ್ನು ಪರಿಶೀಲಿಸಿ ಅಧ್ಯಯನ ಮಾಡಿದ ಇತಿಹಾಸ ಸಂಶೋಧಕ ಡಾ. ಗಣಪಯ್ಯ ಭಟ್ ಇದರ ಕುರಿತು ವಿವರಣೆ ನೀಡಿದ್ದಾರೆ. "ಅಳುಪ ವಂಶದ ಅರಸನಾದ ಕುಲಶೇಖರ ವೀರ ಸಾಹಸ ಮೆರೆದ ವಿಚಾರವನ್ನು ಈ ಶಾಸನದಲ್ಲಿ ವಿವರಿಸುತ್ತದೆ" ಎಂದಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here