Friday 19th, April 2024
canara news

ವೈವಾಹಿಕ ದಿನದಂದು ಸಿ.ಐ.ಇಸ್ಹಾಖ್ ಫಜೀರ್ ಅವರ ಕೃತಿ ಬಿಡುಗಡೆ `ಉಮರ್ ಮತ್ತು ಇಬ್ನು ಉಮೈರ್' ಕೃತಿ ಲೋಕಾರ್ಪಣೆ

Published On : 20 Sep 2017   |  Reported By : Rons Bantwal


ಉಳ್ಳಾಲ. ಯುವ ಬರಹಗಾರ ಸಿ.ಐ ಇಸ್ಹಾಖ್ ಫಜೀರ್ ಅವರು ಬರೆದ ಉಮರ್ ಮತ್ತು ಸಿಬ್ನು ಉಮೈರ್ ಕೃತಿಯನ್ನು ಪಜೀರಿನಲ್ಲಿ ಭಾನುವಾರ ನಡೆದ ಅವರ ವಿವಾಹ ಸಮಾಂಭದಲ್ಲಿ ಬಿಡುಗಡೆಗೊಳಿಸಲಾಯಿತು.

ಸಯ್ಯದ್ ಅಬೂಬಕ್ಕರ್ ಚೆರುಕುಂಞÂ ತಂಙಳ್ ಉಳ್ಳಾಲ ಅವರು ಕೃತಿಯನ್ನು ಲೋಕಾರ್ಪಣೆಗೊಳಿಸಿ, ಇಸ್ಹಾಖ್ ಫಜೀರ್ ಅವರು ಯುವ ಬರಹಗಾರರಾಗಿದ್ದು ಅವರ ಇನ್ನಷ್ಟು ಕೃತಿಗಳು ಸಮಾಜಕ್ಕೆ ಅರ್ಪಣೆಯಾಗಲಿ ಎಂದು ಶುಭಹಾರೈಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಾಹಿತಿ ಭೀಮರಾವ್ ಸುಳ್ಯ ಅವರು, ಯುವ ಬರಹಗಾರರಾದ ಇಸ್ಹಾಖ್ ಪಜೀರ್ ಅವರು ಉತ್ತಮ ಬರಹಗಾರರಾಗಿದ್ದು ಇಂದು ಅವರ ವಿವಾಹ ದಿನದಂದೇ ಕೃತಿಯನ್ನು ಲೋಕಾರ್ಪಣೆಗೊಳಿಸಿರುವುದು ಅವರ ಬರವಣಿಗೆಯ ಪ್ರೀತಿಯನ್ನು ತೋರಿಸುತ್ತದೆ. ಸಮಾಜ ಮುಖಿ ಚಿಂತನೆಯ ಅವರಿಂದ ಇನ್ನಷ್ಟು ಕೃತಿಗಳು ಹೊರಬಂದು ಸಮಾಜಕ್ಕೆ ಕೊಡುಗೆಯಾಗಲಿ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ಅನ್ಸಾರ್ ಪತ್ರಿಕೆಯ ಸಂಪಾದಕ ಕೆ.ಎಂ.ಅಬೂಬಕ್ಕರ್ ಸಿದ್ಧೀಖ್ ಅವರು ವಹಿಸಿದ್ದರು.

ಸಮಾರಂಭದಲ್ಲಿ ಸೌದಿ ಅರೇಬಿಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್‍ನ ಕಾರ್ಯದರ್ಶಿ ಸಲೀಂ ಕನ್ಯಾಡಿ, ದುಬಾಯಿ ಕೆಸಿಎಫ್‍ನ ಇಬ್ರಾಹಿಂ ಸಖಾಫಿ, ದಕ್ಷಿಣ ಕನ್ನಡ ಎಸ್‍ವೈಎಸ್ ಜಿಲ್ಲಾಧ್ಯಕ್ಷ ಎಂ.ಎ.ಸಿದ್ದೀಖದ ಸಖಾಫಿ, ಸೌಹಾರ್ದ ವೇದಿಕೆಯ ಕಾರ್ಯದರ್ಶಿ ಅಝೀಝ್ ಝುಹ್ರಿ ಪುಣಚ, ಕವಿ ಯಂಶ ಬೇಂಕಿಲ, ಎಸ್‍ಎಸ್‍ಎಫ್ ಉಳ್ಳಾಲ ವಲಯಾಧ್ಯಕ್ಷ ಮುನೀರ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here