Thursday 18th, April 2024
canara news

ಧರ್ಮಸ್ಥಳದಲ್ಲಿ ಖ್ಯಾತ ವಿಜ್ಞಾನಿ Prof| ಸಿ.ಎನ್ ಆರ್ ರಾವ್; ವಿಜ್ಞಾನ ಮತ್ತು ತಂತ್ರಜ್ಞಾನದಿಂದ ದೇಶದ ಪ್ರಗತಿ

Published On : 20 Sep 2017   |  Reported By : Rons Bantwal


ಮುಂಬಯಿ, ಸೆ.20: ನಿರ್ಧಿಷ್ಟ ಗುರಿಯೊಂದಿಗೆ ತಾಳ್ಮೆಯಿಂದ, ದೃಢ ಸಂಕಲ್ಪದಿಂದ ನಿರಂತರ ಪರಿಶ್ರಮ ಹಾಗೂ ಪ್ರಯತ್ನ ಮಾಡಿದರೆ ಜೀವನದಲ್ಲಿ ಉನ್ನತ ಸಾಧನೆ ಮಾಡಬಹುದು. ಅಮೇರಿಕಾ, ಕೊರಿಯಾ, ಜಪಾನ್, ಚೀನಾದಂತೆ ಭಾರತ ಕೂಡಾ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಉನ್ನತ ಸಾಧನೆ ಮಾಡಿದರೆ ಮಾತ್ರ ದೇಶದ ಪ್ರಗತಿ ಸಾಧ್ಯವಾಗುತ್ತದೆ ಎಂದು ಖ್ಯಾತ ವಿಜ್ಞಾನಿ Prof| ಸಿ.ಎನ್. ಆರ್. ರಾವ್ ಹೇಳಿದರು.

ಮಂಗಳವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ರಾಜ್ಯದ ಸ್ವ-ಸಹಾಯ ಸಂಘಗಳ ಸದಸ್ಯರ ಮಕ್ಕಳಿಗೆ `ಸುಜ್ಞಾನ ನಿಧಿ ವಿದ್ಯಾಥಿರ್ü ವೇತನ ವಿತರಿಸಿ ಸಿಎನ್‍ಆರ್ ಮಾತನಾಡಿದರು.

ಭಾರತೀಯರು ಸೋಮಾರಿಗಳು. ಹರಟೆ ಹೊಡೆಯುವುದರಲ್ಲಿ ನಿಪುಣರು ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಸರ್ಕಾರವು, ಆರೋಗ್ಯ, ಶಿಕ್ಷಣ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಇರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಭಾರತದ ಭವಿಷ್ಯ ಹಳ್ಳಿಗಳ ಮಕ್ಕಳಲ್ಲಿ ಅಡಗಿದೆ. ಅವರಲ್ಲಿ ಒಬ್ಬ ಐನ್‍ಸ್ಟಿನ್, ನ್ಯೂಟನ್, ಮೈಕೆಲ್ ಫ್ಯಾರಡೆ ಮೂಡಿ ಬಂದರೆ ಸಾಕು. ಇದಕ್ಕೆ ಶಿಕ್ಷಕರು ಮತ್ತು ಪೋಷಕರು ಪ್ರೋತ್ಸಾಹ ಹಾಗೂ ಸಕಾಲಿಕ ಮಾರ್ಗದರ್ಶನ ನೀಡಬೇಕು.

ಪ್ರೌಢಶಾಲಾ ಹಂತದವರೆಗೆ ಇಂಗ್ಲೀಷ್ ಮಾಧ್ಯಮಕ್ಕಿಂತ ಕನ್ನಡ ಮಾಧ್ಯಮವೇ ಹೆಚ್ಚು ಪರಿಣಾಮಕಾರಿ ಹಾಗೂ ಪ್ರಯೋಜನಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ತಾನು 11 ವರ್ಷದ ಬಾಲಕನಿದ್ದಾಗ ಸಿ.ವಿ.ರಾಮನ್ ಅವರ ಭಾಷಣ ಕೇಳಿ ತಾನೂ ಅವರಂತಾಗಬೇಕು ಎಂದು ನಿರ್ಧಾರ ಮಾಡಿದೆ. ಹಾಗೆಯೇ ಇಂದಿನ ವಿದ್ಯಾರ್ಥಿಗಳು ಕೂಡಾ ತಮ್ಮ ಭವಿಷ್ಯದ ಬಗ್ಗೆ ಕನಸು ಕಂಡು ನನಸು ಮಾಡಬೇಕು. ಇನ್ನೊಬ್ಬರ ಪ್ರಗತಿ, ಸಾಧನೆ ಕಂಡು ಮತ್ಸರ ಪಡಬಾರದು. ನಾವೂ ತ್ಯಾಗದಿಂದ, ನಿಸ್ವಾರ್ಥ ಸೇವೆಯಿಂದ ಉನ್ನತ ಸಾಧನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಸುಂದರ ಪ್ರಕೃತಿ-ಪರಿಸರದ ಸೊಗಡನ್ನು ಅನುಭವಿಸಿ, ಸಂತೋಷದಿಂದ ಸಾರ್ಥಕ ಜೀವನ ನಡೆಸಬೇಕು. ಮೇಣದ ಬತ್ತಿಯಂತೆ ನಾವೂ ಬೆಳಗಿ, ಇತರರಿಗೂ ಬೆಳಕನ್ನು ನೀಡಬೇಕು ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವಿಜ್ಞಾನ ಮತ್ತು ಧರ್ಮ ಪರಸ್ಪರ ಪೂರಕವಾಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ನಾವು ಮಾನವೀಯತೆಯನ್ನು ಕಳೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ವಿದ್ಯೆಗಿಂತ ಮಿಗಿಲಾದ ಸಂಪತ್ತು ಇಲ್ಲ. ವಿದ್ಯಾವಂತರು ಮಾನವೀಯತೆ ಹಾಗೂ ಹೃದಯ ಶ್ರೀಮಂತಿಕೆಯೊಂದಿಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು. ವಿದ್ಯಾಥಿರ್üಗಳು ಪೋಷಕರ ಮತ್ತು ಸ್ನೇಹಿತರ ಒತ್ತಡಕ್ಕಾಗಿ ಅಧ್ಯಯನದ ವಿಷಯ ಆಯ್ಕೆ ಮಾಡಬಾರದು. ಪೆÇೀಷಕರು ಮಕ್ಕಳೊಂದಿಗೆ ಮುಕ್ತವಾಗಿ ಬೆರೆಯಬೇಕು. ತಮ್ಮ ಆಸಕ್ತಿಯ ವಿಷಯ ಆಯ್ಕೆ ಮಾಡಿ ಆದ್ಯಯನ ಮಾಡಿದರೆ ಉನ್ನತ ಸಾಧನೆ ಮಾಡಬಹುದು. ಇಲ್ಲವಾದರೆ ಶಿಕ್ಷಣವೇ ಶಿಕ್ಷೆ ಆಗುತ್ತದೆ. ವಿಜ್ಞಾನದ ಹೆಸರಿನಲ್ಲಿ ಧರ್ಮ ಮತ್ತು ಆಧ್ಯಾತ್ಮವನ್ನು ಕಡೆಗಣಿಸಬಾರದು. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಕುತೂಹಲದಿಂದ ಸುಂದರ ಕನಸು ಕಂಡು ದೃಢ ಸಂಕಲ್ಪದಿಂದ ಅಧ್ಯಯನ ಮಾಡಬೇಕು. ದುಶ್ಚಟಗಳಿಗೆ ಬಲಿಯಾಗಬಾರದು. ನಾವು ವಿಜ್ಞಾನದ ದಾಸರಾಗಬಾರದು. ನಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳದೆ ಜೀವನ ಪ್ರೀತಿ ಮತ್ತು ಜೀವನೋತ್ಸಾಹ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಹೇಮಾವತಿ ವಿ.ಹೆಗ್ಗಡೆ, ಇಂದುಮತಿ ರಾವ್, ಸಂಜಯ ರಾವ್, ಪ್ರೊ. ಎಸ್. ಪ್ರಭಾಕರ್ ಮತ್ತು ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ ಉಪಸ್ಥಿತರಿದ್ದರು.

Prof| ಸಿ.ಎನ್. ಆರ್. ರಾವ್ ಅವರನ್ನು ಹೆಗ್ಗಡೆಯವರು ಧರ್ಮಸ್ಥಳದ ವತಿಯಿಂದ ಗೌರವಿಸಿದರು. ವಿದ್ಯಾಥಿರ್üಗಳೊಂದಿಗೆ ಸಂವಾದ: ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಪ್ರೊ. ಸಿ.ಎನ್.ಆರ್. ರಾವ್ ಮಾಹಿತಿ, ಪರಿಹಾರ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಎಚ್. ಮಂಜುನಾಥ್ ಸ್ವಾಗತಿಸಿದರು. ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ ಧನ್ಯವಾವಿತ್ತರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here