Saturday 10th, May 2025
canara news

ಭಾವೀ ಉಡುಪಿ ಪರ್ಯಾಯಧಿಪತಿ ಪಲಿಮಾರುಶ್ರೀಗಳಿಂದ ಬಿಲ್ಲವರ ಭವನಕ್ಕೆ ಭೇಟಿ

Published On : 22 Sep 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.22: ಮುಂಬರುವ 2018-2020ರ ಉಡುಪಿ ಪರ್ಯಾಯ ಪೀಠವನ್ನೇರಲಿದ್ದು, ಪರ್ಯಾಯ ಸಂಚಾರಕ್ಕೆ ಮುಂಬಯಿ ಮಹಾನಗರಕ್ಕಾಗಮಿಸಿದ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ಇಂದಿಲ್ಲಿ ಸಂಜೆ ಇಲ್ಲಿನ ಬಿಲ್ಲವರ ಭವನದಲ್ಲಿನ ಶ್ರೀ ನಾರಾಯಣಗುರು ಮಂದಿರಕ್ಕೆ ಪಾದಾರ್ಪಣೆಗೈದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಶ್ರೀಪಾದರಿಗೆ ಪುಷ್ಪಾರ್ಚನೆಗೈದು ಭಕ್ತಿಪೂರ್ವಕ ಸುಖಾಗಮನ ಬಯಸಿದರು. ಶ್ರೀಗಳು ಭವನದ ಮಂದಿರದಲ್ಲಿ ಪ್ರತಿಷ್ಠಾಪಿತ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ರವೀಂದ್ರ ಶಾಂತಿ ಪೂಜೆ ನೆರವೇರಿಸಿ ಆರತಿಗೈದರು. ಕೋಟಿಚೆನ್ನಯ ಮತ್ತು ಕಾಂತಬಾರೆ ಬೂದಬಾರೆ ಅವರ ಭಾವಚಿತ್ರಕ್ಕೆ ಸಂತೋಷ್ ಕೆ.ಪೂಜಾರಿ ಪುಷ್ಪಾರ್ಚನೆಗೈದು ನಮಿಸಿ ತೀರ್ಥ ಪ್ರಸಾದ ವಿತರಿಸಿದರು.

ಈ ಶುಭಾವಸರದಲ್ಲಿ ಅಸೋಸಿಯೇಶನ್‍ನ ಗೌ| ಜೊತೆ ಕಾರ್ಯದರ್ಶಿಗಳಾದ ಹರೀಶ್ ಜಿ.ಸಾಲ್ಯಾನ್, ಆಶಾಲತಾ ಕೋಟ್ಯಾನ್, ದೇವೇಂದ್ರ ಬಂಗೇರ ಖಾರ್, ಭವನದ ವ್ಯವಸ್ಥಾಪಕ ಭಾಸ್ಕರ್ ಟಿ.ಪೂಜಾರಿ ಮತ್ತಿತರರು ಉಪಸ್ಥಿತರಿದ್ದು ಶ್ರೀಗಳಿಗೆ ಸಾಂಪ್ರದಾಯಿಕ ಗೌರವವನ್ನೀಡಿದರು.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here