Saturday 10th, May 2025
canara news

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗದಿಂದ ಲಲಿತ ಸಹಸ್ರ-ಕುಂಕುಮಾರ್ಚನೆ `ದಾಂಡಿಯಾ ರಾಸ್' ಸಂಭ್ರಮ

Published On : 24 Sep 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.23: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗವು ವಾರ್ಷಿಕವಾಗಿ ಆಚರಿಸುವ ಲಲಿತ ಸಹಸ್ರ-ಕುಂಕುಮಾರ್ಚನೆ, `ದಾಂಡಿಯಾ ರಾಸ್' ಕಾರ್ಯಕ್ರಮ ಇಂದಿಲ್ಲಿ ಶನಿವಾರ ಅಪರಾಹ್ನ ಶಾಸ್ತ್ರೋಕ್ತವಾಗಿ ನಡೆಸಲ್ಪಟ್ಟಿತು. ವಿಶೇಷ ಆಂತ್ರಿತರಾಗಿ ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅವರ ಅಧ್ಯಕ್ಷತೆ ಹಾಗೂ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣರ ಮಾರ್ಗದರ್ಶನ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್ ಸಾರಥ್ಯದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮಕ್ಕೆ ಉದ್ಯಮಿ ಹಾಗೂ ಹಿರಿಯ ಬಿಲ್ಲವ ಧುರೀಣೆ ಶಾರದಾ ಸೂರು ಕರ್ಕೇರ ಮತ್ತ್ ಭಾರತ್ ಬ್ಯಾಂಕ್‍ನ ಉಪ ಕಾರ್ಯಧ್ಯಕ್ಷೆ ನ್ಯಾ| ರೋಹಿಣಿ ಜೆ. ಸಾಲ್ಯಾನ್ ದೀಪ ಬೆಳಗಿಸಿ ತ್ರಿಉತ್ಸವ ಉದ್ಘಾಟಿಸಿದರು.

ಅಸೋಸಿಯೇಶನ್‍ನ ಉಪಾಧ್ಯಕ್ಷರಾದ ಭಾಸ್ಕರ ವಿ.ಬಂಗೇರ, ಡಾ| ಯು.ಧನಂಜಯ ಕುಮಾರ್, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಯುವಾಭ್ಯುದಯ ಸಮಿತಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರ್, ಹಿರಿಯ ಮುಂದಾಳು ಶ್ರೀನಿವಾಸ ಆರ್.ಕರ್ಕೇರ ವಿಶೇಷವಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಶಿ ನಿತ್ಯಾನಂದ್, ಸುಧಾ ಎಲ್.ವಿ ಅವಿೂನ್, ಜಯಂತಿ ವಿ.ಉಳ್ಳಾಲ್, ಅಸೋಸಿಯೇ ಶನ್‍ನ ಗೌ| ಜೊತೆ ಕಾರ್ಯದರ್ಶಿಗಳಾದ ಹರೀಶ್ ಜಿ.ಸಾಲ್ಯಾನ್, ಆಶಾಲತಾ ಕೋಟ್ಯಾನ್, ಮಹಿಳಾ ವಿಭಾಗದ ಮಹಿಳಾ ವಿಭಾಗದ ಉಪಾಧ್ಯಕ್ಷೆಯರಾದ ಪ್ರಭಾ ಕೆ.ಬಂಗೇರ, ವಿಲಾಸಿನಿ ಕೆ.ಸಾಲ್ಯಾನ್, ಯಶೋಧಾ ಎನ್.ಟಿ ಪೂಜಾರಿ, ಜತೆ ಕಾರ್ಯದರ್ಶಿಗಳಾದ ಡಾ| ಗೀತಾಂಜಲಿ ಎಲ್.ಸಾಲ್ಯಾನ್, ಲಕ್ಷ್ಮೀ ಎಸ್.ಪೂಜಾರಿ, ವಿಶೇಷ ಆಮಂತ್ರಿತ ಸದಸ್ಯೆಯರಾದ ಭವಾನಿ ಸಿ.ಕೋಟ್ಯಾನ್, ವನಿತಾ ಎ.ಪೂಜಾರಿ, ಪೂಜಾ ಪುರುಷೋತ್ತಮ್, ಪ್ರಭಾ ಎನ್.ಪಿ ಸುವರ್ಣ ಮತ್ತಿತರರು ವಿಶೇಷವಾಗಿ ಹಾಜರಿದ್ದರು.

ರಾಘವ ಅವಿೂನ್ ಮತ್ತು ತಂಡವು ಭಜನೆ ನಡೆಸಿತು. ಅಸೋಸಿಯೇಶನ್‍ನ ಕಾರ್ಯಕಾರಿ ಸಮಿತಿ ಸದಸ್ಯರು, ಸ್ಥಳೀಯ ಸಮಿತಿಗಳ ಮುಖ್ಯಸ್ಥರು, ಸದಸ್ಯರನೇಕರು, ಮಹಿಳಾ ಸಮಿತಿ ಸದಸ್ಯೆಯರು ಸೇರಿದಂತೆ ನೂರಾರು ಮಹಿಳೆಯರು, ಹಾಜರಿದ್ದು ನಡೆಸಲ್ಪಟ್ಟ ದಾಂಡಿಯಾ ರಾಸ್ ಕಾರ್ಯಕ್ರಮ, ಗಾರ್ಭಾರಾಸ್ ನೃತ್ಯಾವಳಿಯಲ್ಲಿ ಪಾಲ್ಗೊಂಡರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here