Saturday 10th, May 2025
canara news

ಮುಂಬಯಿ ವಿವಿ ಕನ್ನಡ ವಿಭಾಗದಿಂದ ವಾರ್ಷಿಕ ಕನ್ನಡ ಸರ್ಟಿಫಿಕೇಟ್ ಪದವಿ ಪ್ರದಾನ

Published On : 24 Sep 2017   |  Reported By : Rons Bantwal


ಸಹೃದಯತೆವುಳ್ಳವರಿಂದ ವಿಮರ್ಶೆ ಸಾಧ್ಯ- ಡಾ| ಈಶ್ವರ ಅಲೆವೂರು
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.23: ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ವಾರ್ಷಿಕವಾಗಿ ಪ್ರದಾನಿಸುವ ಕನ್ನಡ ಸರ್ಟಿಫಿಕೇಟ್ ಪದವಿ ಪ್ರದಾನ ಕಾರ್ಯಕ್ರಮ ಇಂದಿಲ್ಲಿ ಶನಿವಾರ ಅಪರಾಹ್ನ ಸಾಂತಾಕ್ರೂಜ್ ಕಲೀನಾ ಕ್ಯಾಂಪಸ್‍ನ ಲ್ಲಿನ ಲೆಕ್ಚರ್‍ಕಾಂಪ್ಲೆಕ್ಸ್‍ನಲ್ಲಿ ಕನ್ನಡ ವಿಭಾಗ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಜರುಗಿದ್ದು, ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತರಾಗಿ ಉಪಸ್ಥಿತ `ಅಕ್ಷಯ' ಮಾಸಿಕದ ಸಂಪಾದಕ, ಹೆಸರಾಂತ ವಿಮರ್ಶಕ ಡಾ| ಈಶ್ವರ ಅಲೆವೂರು ಉಪಸ್ಥಿತರಿದ್ದು `ಕೃತಿ ವಿಮರ್ಶೆ' ಬಗ್ಗೆ ಮಾರ್ಗದರ್ಶನ ಶಿಬಿರ ನೀಡಿದರು. ಮುಖ್ಯ ಅತಿಥಿüಯಾಗಿದ್ದ ಕರ್ನಾಟಕ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ, ರಂಗತಜ್ಞ ಡಾ| ಭರತ್‍ಕುಮಾರ್ ಪೆÇಲಿಪು ವಾರ್ಷಿಕ ಕನ್ನಡ ಸರ್ಟಿಫಿಕೇಟ್ ಪದವಿ ಪ್ರದಾನಿಸಿ ವಿದ್ಯಾಥಿರ್üಗಳಿಗೆ ಶುಭಾರೈಸಿದರು.

ವಿಮರ್ಶೆಯಲ್ಲಿ ಸ್ವಚ್ಛತೆ ಮೂಡಿರಬೇಕು. ಕೃತಿ ಬರವಣಿಗೆಯ ಕಾರಣಗಳನ್ನು ಕಂಡು ಹಿಡಿಯುವುದು ವಿಮರ್ಶೆಯ ಮೂಲವಾದರೆ, ಅಭಿಪ್ರಾಯಗಳನ್ನು ಮೂಡಿಸುವುದೇ ವಿಮರ್ಶೆಯ ಮೊದಲ ಹೆಜ್ಜೆಯಾಗಿದೆ. ಸಹೃದಯತೆ ಇಲ್ಲದವರು ಎಂದಿಗೂ ವಿಮರ್ಶಕವಾಗಲು ಸಾಧ್ಯವಿಲ್ಲ. ಕಾರಣ ಅವರ ದೃಷ್ಠಿಕೋನಗಳಿಂದ ಕೃತಿ, ಬರವಣಿಗೆ, ನಾಟಕ ಇತ್ಯಾದಿಗಳ ಹೊರಒಳ ನೋಟಗಳನ್ನು ಸೃಷ್ಠಿಸ ಬಲ್ಲವರಿಂದ ಸೂಕ್ತ ವಿಮರ್ಶಕತೆ ಸಾಧ್ಯ. ನೈಜ್ಯತೆ ತೋರ್ಪಡಿಸುವವನೇ ನಿಜವಾದ ವಿಮರ್ಶಕ ಆಗಬಲ್ಲನು ಎಂದು ಡಾ| ಅಲೆವೂರು ಮಾಹಿತಿಯನ್ನಿತ್ತು ಅಕ್ಷಯ ಮಾಸಿಕದಲ್ಲಿ ಬಂದಂತಹ ವಿಮರ್ಶೆಗಳು ಮತ್ತೆ ಎಲ್ಲೂ ಕಾಣುವಂತಿಲ್ಲ ಎಂದು ತಮ್ಮ ಮೂರ್ನಾಲ್ಕು ದಶಕಗಳ ಕೃತಿ ವಿಮರ್ಶೆಯ ಅನುಭವಗಳನ್ನು ಹಂಚಿಕೊಂಡರು.

ವಿಮರ್ಶೆ ವಿಷಯ ನನ್ನ ಆಪ್ತ ವಿಷಯ. ತೀಕ್ಣ ವಿಮರ್ಶೆಯಿಂದ ಶತ್ರುತ್ವ ಕಟ್ಟಿ ಕೊಳ್ಳಬೇಕಾದುದು ಅನಿವಾರ್ಯ. ಒಳ್ಳೆಯ ವಿಮರ್ಶಕನು ಯಾವೊತ್ತೂ ಸಾಹಿತ್ಯ, ಬರವಣಿಗೆ, ನಾಟಕಗಳ ಅನುಭವಸ್ಥನಾಗಿ ವಿಮರ್ಶೆ ತಿಳಿಪಡಿಸಲು ಸಶಕ್ತನಾಗಿರುತ್ತಾನೆ. ಸಂವಾದ ಹುಟ್ಟುಹಾಕುವವನೇ ನಿಜವಾದ ವಿಮರ್ಶಕ ಆದುದರಿಂದ ವಿಮರ್ಶಕನಿಗೆ ಸೃಜನಾತ್ಮಕ ಶಕ್ತಿ ಅತ್ಯವಶ್ಯಕವಾಗಿದ್ದು, ಹೊಗಳಿಕೆ ಬೈಗಳು ಮೀರಿ ನಿಲ್ಲುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ವಿಮರ್ಶೆಯನ್ನು ವಿನಯಶೀಲತೆ ಸಂಯಮದಿಂದ ಸ್ವೀಕರಿಸಿ ವಸ್ತುಸ್ಥಿತಿ ತುಲನೆ ಮಾಡುವುದೇ ವಿಮರ್ಶಕರ ಕರ್ತವ್ಯ. ಎಂದು ಡಾ| ಪೆÇಲಿಪು ತಿಳಿಸಿದರು.

ವಿದ್ಯಾಥಿರ್üಗಳು ಬರೇ ತರಗತಿಯೊಳಗಿನ ಸೀಮಿತವಾದ ಚೌಕಟ್ಟು ದಾಟಿ ಇಂತಹ ಕೃತಿ ಸಮೀಕ್ಷೆ, ವಿಮರ್ಶೆಗಳ ಪರಿಕಲ್ಪನೆ ತಿಳಿಯುವ ಅಗತ್ಯವಿದೆ. ಕರ್ನಾಟಕದಲ್ಲಿ ವಿಮರ್ಶಿತ ಕೃತಿಗಳು ದೊಡ್ಡ ಪ್ರಮಾಣದಲ್ಲಿ ಪ್ರಕಟವಾಗುತ್ತಿವೆ. ಆದರೆ ವಿಮರ್ಶಕರ ಕೊರತೆ ಕಾಡುತ್ತಿದೆ. ಸಹೃದಯರಿಗೆ ಯಾ ಓದುಗರಿಗೆ ಒಳ್ಳೆಯ ಕೃತಿ ಪರಿಚಯಿಸುವ ಅಗತ್ಯ ವಿಮರ್ಶಕರಿಂದ ಸಾಧ್ಯವಾಗುತ್ತÉ. ಕವಿ, ಕೃತಿ ಮತ್ತು ಸಹೃದಯತೆ ತ್ರಿವಳಿಯನ್ನು ಬೆಸೆಯುವ ಕೆಲಸ ಒಬ್ಬ ವಿಮಶರ್Àಕ ಮಾತ್ರ ಮಾಡಬಲ್ಲನು. ಇಂತಹ ಸಾಧನೆಗೆ ಸಾಂಸ್ಕೃತಿಕ ರಾಯಭಾರಿಕ್ಕಿಂತ ಸಾಂಸ್ಕೃತಿಕ ನಾಯಕರ ಅವಶ್ಯಕವಿದೆ ಎಂದು ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷೀಯ ಭಾಷಣದಲ್ಲಿ ಅಭಿಪ್ರಾಯ ಪಟ್ಟರು.

ಕನ್ನಡ ವಿಭಾವು ಕಳೆದ ಅನೇಕ ವರ್ಷಗಳಿಂದ ಕನ್ನಡೇತರರಿಗೆ ಮತ್ತು ಕನ್ನಡ ಅಭ್ಯಾಸಿಸಲು ಕನ್ನಡ ಕೋರ್ಸ್ ನಡೆಸುತ್ತ ಬಂದಿದೆ. ಅಂತೆಯೇ ಕಳೆದ ಎಪ್ರಿಲ್‍ನಲ್ಲಿ ನಡೆದ ಸರ್ಟಿಫಿಕೇಟ್‍ಗಳನ್ನು ಇಂದು ಪ್ರದಾನಿಸಲಾಗುವುದು ಎಂದು ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ತಿಳಿಸಿ ಕಾರ್ಯಕ್ರಮ ನಿರೂಪಿಸಿದರು.

ಸರ್ಟಿಫಿಕೇಟ್ ಕೋರ್ಸ್‍ನ ಶಿಕ್ಷಕರಾದ ಶ್ರೀಪಾದ ಪತಕಿ, ಅನಿತಾ ಪಿ.ಪೂಜಾರಿ ತಾಕೋಡೆ, ಶಿವರಾಜ್ ಎಂ.ಜಿ, ಸುರೇಖಾ ಸುಂದರೇಶ್ ದೇವಾಡಿಗ, ಸುರೇಖಾ ಶೆಟ್ಟಿ, ಎಸ್.ನಳೀನಿ ಪ್ರಸಾದ್, ದಿನಕರ್ ಎನ್.ಚಂದನ್, ಸುಧೀರ್ ದೇವಾಡಿಗ, ಉದಯ ಬಿ.ಶೆಟ್ಟಿ, ಮುಕುಂದ ಎಸ್.ಶೆಟ್ಟಿ, ಲಕ್ಷಿ ್ಮೀ ಪೂಜಾರ್ತಿ, ಕೆ.ಗೋವಿಂದ ಭಟ್, ಜಯ ಪೂಜಾರಿ ಕೊಜಕೊಳ್ಳಿ, ಕರುಣಾಕರ ಹೆಜಮಾಡಿ ಮತ್ತಿತರÀರು ಉಪಸ್ಥಿತರಿದ್ದು, ಶ್ಯಾಮಲಾ ಪ್ರಕಾಶ್ ಸ್ವಾಗತಿಸಿ ಅತಿಥಿüಗಳನ್ನು ಪರಿಚಯಿಸಿದ ರು. ಗೀತಾ ಆರ್.ಎಸ್ ಸರ್ಟಿಫಿಕೇಟ್ ಫಲಾನುಭವಿಗಳ ಯಾದಿ ವಾಚಿಸಿ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here