Saturday 10th, May 2025
canara news

ಚಾರ್‍ಕೋಪ್ ಕನ್ನಡಿಗರ ಬಳಗ ಸಂಭ್ರಮಿಸಿದ 18ನೇ ವಾರ್ಷಿಕೋತ್ಸವ ಶ್ರೀ ಶಾರದಾ ಪೂಜೆ-ವಾರ್ಷಿಕ ಪ್ರಶಸ್ತಿ ಪ್ರದಾನ-ಸಂಘಸಂಸ್ಥೆ,ಸಾಧಕರಿಗೆ ಗೌರವಾರ್ಪಣೆ

Published On : 25 Sep 2017   |  Reported By : Rons Bantwal


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.24: ಚಾರ್‍ಕೋಪ್ ಕನ್ನಡಿಗರ ಬಳಗ ಕಾಂದಿವಿಲಿ ಸಂಸ್ಥೆಯು ತನ್ನ 18ನೇ ವಾರ್ಷಿಕೋತ್ಸವವನ್ನು ವಾರ್ಷಿಕ ಶಾರದಾ ಪೂಜೆಯೊಂದಿಗೆ ಇಂದಿಲ್ಲಿ ಆದಿತ್ಯವಾರ ದಿನಪೂರ್ತಿಯಾಗಿಸಿ ಕಾಂದಿವಲಿ ಪಶ್ಚಿಮದ ಚಾರ್‍ಕೋಪ್ ಅಲ್ಲಿನ ಹರಿಯಾಣ ಭವನದಲ್ಲಿ ವಿಜೃಂಭನೆದಿಂದ ನೇರವೇರಿಸಿತು.

ಬಳಗದ ಅಧ್ಯಕ್ಷ ಮಂಜುನಾಥ ಜಿ.ಬನ್ನೂರು ಅವರ ಅಧ್ಯಕ್ಷತೆ ಸಭಾಧ್ಯಕ್ಷತೆಯಲ್ಲಿ ನೆರವೇರಿದ ವಾರ್ಷಿಕೋತ್ಸವ ಸಮಾರಂಭಕ್ಕೆ ಉಪಸ್ಥಿತ ಅತಿಥಿüಗಣ್ಯರುಗಳಾಗಿ ಉಪಸ್ಥಿತ ಸಮಾಜ ಸೇವಕರುಗಳಾದ ಇಂದ್ರಾಳಿ ದಿವಾಕರ್ ಶೆಟ್ಟಿ, ನಿತ್ಯಾನಂದ ಡಿ.ಕೋಟ್ಯಾನ್, ಮನೋಹರ್ ಎನ್.ಶೆಟ್ಟಿ, ಸದಾನಂದ ಕೋಟ್ಯಾನ್ ಮತ್ತು ರಾಮಣ್ಣ ಬಿ.ದೇವಾಡಿಗ ಮತ್ತು ಬಳಗದ ಮಹಿಳಾ ವಿಭಾಗಧ್ಯಕ್ಷೆ ಪದ್ಮಾವತಿ ಭಾಸ್ಕರ್ ಶೆಟ್ಟಿ, ಸಲಹಾಗಾರರಾದ ತೋನ್ಸೆ ವಿಜಯ ಕುಮಾರ್ ಶೆಟ್ಟಿ, ನ್ಯಾ| ಎಸ್. ಬಿ ಅವಿೂನ್, ರಮೇಶ್ ಶೆಟ್ಟಿ ಪಯ್ಯಾರ್ ವೇದಿಕೆಯಲ್ಲಿದ್ದು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ನೆರವೇರಿಸಲ್ಪಟ್ಟ ಸಭಾ ಕಾರ್ಯಕ್ರಮದಲ್ಲಿ ಸಂಘವು ವಾರ್ಷಿಕವಾಗಿ ಕೊಡಮಾಡುವ ಶ್ರೀ ಅಡ್ಯಾರು ನಡಿಗುತ್ತು ತಿಮ್ಮಪ್ಪ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಯನ್ನು ಕನ್ನಡ ಸಂಘ ಸಾಂತಾಕ್ರೂಜ್ ಇದರ ಅಧ್ಯಕ್ಷರಾಗಿ ಏಳನೇ ಬಾರಿಗೆ ಪುನಾರಾಯ್ಕೆಗೊಂಡ ಎಲ್.ವಿ ಅವಿೂನ್ ಅವರಿಗೆ, ಹಿರಿಯ ಕಲಾವಿದೆ ಹಾಗೂ ಕಿರುತೆರೆ ನಟಿ ಶ್ರೀಮತಿ ಭಾರತಿ ಕೊಡ್ಲೇಕರ್ ಸ್ಮರಣಾರ್ಥ ಪ್ರಶಸ್ತಿಯನ್ನು ನಗರದ ಹೆಸರಾಂತ ಕಲಾವಿದೆ ರೂಪ ಭಟ್ ಅವರಿಗೆ ಮತ್ತು ಶ್ರೀ ಕೆ.ಕೆ.ಸುವರ್ಣ ಪ್ರಶಸ್ತಿಯನ್ನು ಹಿರಿಯ ನಾಟಕ ಕಲಾವಿದ ಮತ್ತು ನಿರ್ದೇಶಕ ಸುಂದರ ಮೂಡಬಿದ್ರೆ ಅವರಿಗೆ ಪ್ರದಾನಿಸಿದರು ಅಂತೆಯೇ ಸಂಘಸಂಸ್ಥೆಗಳ ಅನನ್ಯ ಸೇವೆಗಾಗಿ ಕರ್ನಾಟಕ ಸಂಘ ವಿೂರಾರೋಡ್ ಇದರ ಅಧ್ಯಕ್ಷ ಉದಯ ಹೆಗ್ಡೆ ಎಳಿಯಾಳ, ವಸಾಯಿ ಕರ್ನಾಟಕ ಸಂಘ ಇದರ ಅಧ್ಯಕ್ಷ ಒ.ಪಿ ಪೂಜಾರಿ ಇವರನ್ನು ಸನ್ಮಾನಿಸಿದರು. ಅಂತೆಯೇ ಬಳಗದ ಸದಸ್ಯರೂ ಹಾಗೂ ಹಿತೈಷಿಗಳಾದ ಹೆಸರಾಂತ ಪುರೋಹಿತ ಧನಂಜಯ ಶಾಂತಿ, ಪತ್ತನಾಜೆ ತುಳು ಚಲನಚಿತ್ರದ ಅಭಿನೇತ್ರರಾದ ರೇಶ್ಮಾ ಶೆಟ್ಟಿ ಅವರಿಗೆ ವಿಶೇಷ ಗೌರವ ಪ್ರದಾನಿಸಿ ಅಭಿನಂದಿಸಿದರು. ಪುರಸ್ಕೃತರು ಗೌರವಕ್ಕೆ ಉತ್ತರಿಸಿ ಅಭಿವಂದಿಸಿದರು. ಅತಿಥಿüವರ್ಯರು ಬಳಗದ ನಿಸ್ವಾರ್ಥ ಸೇವೆಯನ್ನು ಕೊಂಡಾಡಿ ಈ ಸಂಸ್ಥೆಯು ಎಲ್ಲರಿಗೂ ಮಾರಿ ಎಂದು ಪ್ರಶಂಸಿಸಿದರು.

ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಬೆಳಿಗ್ಗೆಯಿಂದ ಭಜನೆ, ಶಾರದಾ ಪೂಜೆ ನಡೆಸಲಾಗಿದ್ದು, ನಾಗೇಶ್ ಭಟ್ ಚಾರ್‍ಕೋಪ್ ತಮ್ಮ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಉಪಾಧ್ಯಕ್ಷ ಮೂಡುಬೆಳ್ಳ್ಳೆ ಕೃಷ್ಣ ಎನ್.ಶೆಟ್ಟಿ ಮತ್ತು ಶೊಭಾ ಕೆ.ಶೆಟ್ಟಿ ದಂಪತಿ ಪೂಜಾಧಿಗಳಲ್ಲಿ ಸಹಭಾಗಿತ್ವ ವಹಿಸಿದ್ದರು.

ಬಳಗದ ವಿಶ್ವಸ್ಥರುಗಳಾದ ಜಯ ಸಿ.ಶೆಟ್ಟಿ (ಸಂಸ್ಥಾಪಕ), ಭಾಸ್ಕರ ಬಿ.ಸರಪಾಡಿ (ಮಾಜಿ ಅಧ್ಯಕ್ಷ), ಎಂ.ಎಸ್.ರಾವ್ (ಮಾಜಿ ಗೌ| ಪ್ರ| ಕಾರ್ಯದರ್ಶಿ), ಬಳಗದ ಉಪಾಧ್ಯಕ್ಷರುಗಳಾದ ಕೃಷ್ಣ ಟಿ.ಅವಿೂನ್, ಗೌರವ ಕೋಶಾಧಿಕಾರಿ ಗೌರಿ ಡಿ.ಪಣಿಯಾಡಿ, ಜೊತೆ ಕಾರ್ಯದರ್ಶಿ ವಸಂತಿ ಯು.ಸಾಲ್ಯಾನ್, ಜೊತೆ ಕೋಶಾಧಿಕಾರಿಗಳಾದ ಸದಾಶಿವ ಸಿ.ಪೂಜಾರಿ, ಲತಾ ವಿ.ಬಂಗೇರ, ವಾರ್ಷಿಕೋತ್ಸವ ಸಮಿತಿ ಸಂಚಾಲಕ ರಮೇಶ್ ಸಿ.ಕೋಟ್ಯಾನ್, ಕಾರ್ಯದರ್ಶಿ ರಮೇಶ್ ಪಿ.ಬಂಗೇರ, ಕೋಶಾಧಿಕಾರಿ ಹೆಚ್.ಜಯ ದೇವಾಡಿಗ, ಮಹಾಬಲ ಪೂಜಾರಿ, ಸುಂದರ ಪೂಜಾರಿ, ದಾಸು ಸುವರ್ಣ, ಸುರೇಶ್ ಸನಿಲ್ ಮತ್ತು ಸದಸ್ಯರನೇಕರು ಉಪಸ್ಥಿತರಿದ್ದರು.

ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ ಎನ್.ಶೆಟ್ಟಿ ಸ್ವಾಗತಿಸಿ ಅತಿಥಿüಗಳನ್ನು ಪರಿಚಯಿಸಿದರು. ಹರೀಶ್ ಚೇವಾರ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಚಂದ್ರಶೇಖರ್ ಎಸ್.ಶೆಟ್ಟಿ, ಕಾರ್ಯದರ್ಶಿ ತನುಜಾ ಎಂ.ಭಟ್ ಪುರಸ್ಕೃತರನ್ನು ಪರಿಚಯಿಸಿ ಅಭಿನಂದಿಸಿದರು. ಜೊತೆ ಕಾರ್ಯದರ್ಶಿ ವಿಜಯ ಡಿ.ಪೂಜಾರಿ ಸಭಾಕಾರ್ಯಕ್ರಮ ನಿರೂಪಿಸಿದರು. ಮೂಡುಬೆಳ್ಳ್ಳೆ ಕೃಷ್ಣ ಎನ್.ಶೆಟ್ಟಿ ಧನ್ಯವದಿಸಿದರು. ಬಳಗದ ಸದಸ್ಯರು, ಮಹಿಳೆಯರು ಮತ್ತು ಮಕ್ಕಳು ವಿವಿಧ ಸಾಂಸ್ಕೃತಿಕ ನೃತ್ಯ ವೈಭವದೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಪ್ರವೀಣ್ ಶೆಟ್ಟಿ ಬೋರಿವಿಲಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here