Saturday 10th, May 2025
canara news

ತ್ರಾಸಿಯಲ್ಲಿ ಭೀಕರ ಬೈಕ್ ಅಪಘಾತ - ತಲ್ಲೂರಿನ ಯುವಕನ ದುರ್ಮರಣ

Published On : 25 Sep 2017   |  Reported By : Bernard J Costa


ಕುಂದಾಪುರ: ಕುಂದಾಪುರ ಸಮೀಪದ ತಲ್ಲೂರಿನ ತರುಣ ಪ್ಲೈಮಿಂಗ್ ಮೆಂಡೊನ್ಸಾ ಮತ್ತು ಗೆಳೆಯ ಮೆಂಡೋನ್ಸಾ ಬೈಕನಲ್ಲಿ ವೇಗವಾಗಿ ಧಾವಿಸುತ್ತಿರುವಾಗ ಸವಾರನ ನಿಯಂತ್ರಣ ತಪ್ಪಿ ರಾಷ್ಡ್ರೀಯ ಹೆದ್ದಾರಿಯ ವಿಭಾಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ ಸವಾರ ಪ್ಲೈಮಿಂಗ್ ಮೆಂಡೊನ್ಸಾ ಸಾವನ್ನಪ್ಪಿದ್ದು, ಜೊತೆಗಾರ ಜೊಯಸ್ಟನ್ ಮೆಂಡೋನ್ಸಾ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ರಾತ್ರಿ ತ್ರಾಸಿ ಬೀಚ್ ಬಳಿ ಸಂಭವಿಸಿದೆ.

ತಲ್ಲೂರು ನಿವಾಸಿ ಫ್ರಾನ್ಸಿಸ್ ಮೆಂಡೋನ್ಸಾ ಎಂಬವರ ಪುತ್ರ ಪ್ಲೈಮಿಂಗ್ ಸೊನಾಲ್ ಮೆಂಡೋನ್ಸಾ(20) ಅಪಘಾತದಲ್ಲಿ ಸಾವನ್ನಪ್ಪಿದ ಯುವಕ. ಘಟನೆಯಲ್ಲಿ ಫ್ಲೆಮಿಂಗ್ ಸಹೋದರ ಸಂಬಂಧಿ ಜೊಯಸ್ಟನ್ (18) ಗಂಭೀರ ಗಾಯಗೊಂಡಿದ್ದಾರೆ.

ಈರ್ವರೂ ಭಾನುವಾರ ಸಂಜೆ ಕೆಟಿಎಂ ಡ್ಯೂಕ್ ಬೈಕ್ನಲ್ಲಿ ಜಾಲಿ ರೈಡ್ಗೆ ತೆರಳಿದ್ದ ವೇಳೆ ಈ ಅವಘಡ ನಡೆದಿದೆ ಎನ್ನಲಾಗಿದೆ.

ಬೈಂದೂರು ಕಡೆಯಿಂದ ಶರವೇಗದಲ್ಲಿ ಧಾವಿಸುತ್ತಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯ ವಿಭಾಜಕಕ್ಕೆ ಅಪ್ಪಳಿಸಿ ಬೈಕ್ ಪಲ್ಟಿ ಹೊಡೆದ ಪರಿಣಾಮ ಇಬ್ಬರೂ ರಸ್ತೆಗಪ್ಪಳಿಸಿದ್ದರಿಂದ ಇಬ್ಬರಿಗೂ ತಲೆ ಭಾಗಗಳಿಗೆ ಗಂಭೀರವಾದ ಎಟಾಗಿತ್ತು. ಕೂಡಲೇ ಸ್ಥಳೀಯರಿಂದ ಸುದ್ದಿ ತಿಳಿದ ಗಂಗೊಳ್ಳಿಯ ಆಪತ್ಬಾಂಧವ 24x7 ಆಂಬುಲೆನ್ಸ್ ಸೇರಿದಂತೆ ಎರಡು ಆಂಬುಲೆನ್ಸ್ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಪ್ಲೈಮಿಂಗ್ ತಲೆ ಹಾಗೂ ಮುಖಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಜೊಯಸ್ಟನ್ ತಲೆಗೂ ಗಂಭೀರ ಗಾಯಗಳಾಗಿದ್ದು, ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಸಾವನ್ನಪ್ಪಿದ ಫ್ಲೆಮಿಂಗ್ ತಂದೆ ಫ್ರಾನ್ಸಿಸ್ ಈ ಹಿಂದೆ ವಿದೇಶದಲ್ಲಿ ಉದ್ಯೋಗಲ್ಲಿದ್ದು ಇದೀಗ ನಿವೃತ್ತಿ ಹೊಂದಿ ತಲ್ಲೂರಿನ ತಮ್ಮ ಮನೆಯಲ್ಲಿ ವಾಸವಾಗಿದ್ದಾರೆ. ನೂತನ ಬೈಕ್ ಇಗಸ್ಟೇ, ಕೊಂಡಿದ್ದು, ಪ್ಲೈಮಿಂಗ್ ತಾಯಿ ಇಸ್ರೇಲ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪ್ಲೈಮಿಂಗ್ಮತ್ತು ಜೊಯಸ್ಟನ್ ಮಣಿಪಾಲದ ಡಾ. ಟಿಎಮ್ಎ ಪೈ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಫ್ಲೇಮಿಂಗ್ ವಿದ್ಯಾಭ್ಯಾಸ ನಡೆಸುತ್ತಿದ್ದರು.


ಪ್ಲೈಮಿಂಗ್ ಹಾಗೂ ಜೊಯಸ್ಟನ್ ಇಬ್ಬರು ಸಹೋದರ ಸಂಬಂಧಿಗಳಾಗಿದ್ದು, ಅಕ್ಕಪಕ್ಕದವರಾಗಿದ್ದರು. ಈರ್ವರು ಒಬ್ಬರನ್ನೊಬ್ಬರು ಉತ್ತಮ ಸ್ನೇಹಿತರಾಗಿದ್ದರು. ಅಲ್ಲದೇ ಇಬ್ಬರೂ ಕೂಡ ಮಣಿಪಾಲ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜೊತೆಯಾಗಿ ವಿದ್ಯಾಭ್ಯಾಸ ನಡೆಸುತ್ತಿದ್ದರು ತಿಳಿದು ಬಂದಿದೆ.

ಮುಗಿಲು ಮುಟ್ಟಿದ ಹೆತ್ತವರ ರೋಧನ
ಅಪಘಾತದ ಅಘಾತಕ್ಕೆ ಒಳಪಟ್ಟ ಪ್ಲೈಮಿಂಗ್ ತಂದೆ ಫ್ರಾನ್ಸಿಸ್ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಧಾವಿಸಿದ್ದರು. ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದ ಮಗನ ಶವ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ನೆರೆದವವರ ಕಣ್ಣಲ್ಲಿ ನೀರು ಬರುವಂತಿತ್ತು. ಇಸ್ರೇಲನಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ಲೈಮಿಂಗ್ ತಾಯಿ ಇಸ್ರೇಲನಲ್ಲಿ ಗೋಳಿಡುತಿದ್ದರು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಮತ್ತು ಕೇಸನ್ನು ದಾಖಲಿಸಿಕೊಂಡಿದ್ದಾರೆ

ಪ್ಲೈಮಿಂಗ್ ವರದಿಗಾರನಾದ ನನ್ನ ಫೆಸ್ ಬುಕ್ ಮಿತ್ರನಾಗಿದ್ದು, ಅವನ ಸಾವು ಬಹಳ ದುಖದ ವಿಚಾರವಾಗಿದ್ದು, ಆತನ ಸಾವಿಗೆ ಕೆನರಾನ್ಯೂಸ್.ಕಾಮ್ ಅತೀವ ದುಖ ವ್ಯಕ್ತಪಡಿಸುತ್ತದೆ. ಹಾಗೂ ಅವನ ಆತ್ಮಕ್ಕೆ ದೇವರು ಚೀರ ಶಾಂತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇವೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here