Saturday 10th, May 2025
canara news

ಗೌರಿಗೆ ಬಿದ್ದಂತೆ ನನಗೂ ಗುಂಡು ಬೀಳಬಹುದು: ದಿನೇಶ್ ಅಮೀನ್ ಮಟ್ಟು

Published On : 26 Sep 2017   |  Reported By : canaranews network


ಮಂಗಳೂರು: "ಗೌರಿಗೆ ಬಿದ್ದಂತೆ ನನಗೂ ಗುಂಡು ಬೀಳಬಹುದು, ನಿಮಗೂ ಬೀಳಬಹುದು. ಈ ಬಗ್ಗೆ ನನಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ" ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಮಾತನಾಡಿ, ನನಗೆ ಸಾವಿನ ಬಗ್ಗೆ ಭಯವಿಲ್ಲ. ಆದರೆ ಮಾಡಬೇಕಾದ ಕೆಲಸಗಳು ಬಾಕಿ ಉಳಿದು, ಅತೃಪ್ತ ಆತ್ಮವಾಗಿ ಪ್ರಾಣ ಬಿಡಬೇಕಲ್ಲ ಎಂಬುದೇ ಯೋಚನೆ ಎಂದು ಅವರು ಹೇಳಿದ್ದಾರೆ.ಇತ್ತೀಚೆಗೆ ಆರೆಸ್ಸೆಸ್ ನ ಹಲವು ಸಭೆಗಳು ನಡೆದಿವೆ. ಆ ವೇಳೆ "ಮಟ್ಟುವನ್ನು ಮಟ್ಟ ಹಾಕಬೇಕು" ಎಂಬ ಬಗ್ಗೆ ಚರ್ಚೆಗಳಾಗಿವೆ.

ಅಂದಹಾಗೆ ಈ ಸಭೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಕೂಡ ಇದ್ದರು ಎಂಬ ಮಾಹಿತಿ ಇದೆ ಎಂದು ದಿನೇಶ್ ಅಮಿನ್ ಮಟ್ಟು ಅವರು ಹೇಳಿದ್ದಾರೆ.ಕೆಲವು ಎಡಪಂಥೀಯ ಹಾಗೂ ಪ್ರಗತಿಪರ ಚಿಂತಕರಿಗೆ ರಾಜ್ಯ ಸರಕಾರದಿಂದಲೇ ರಕ್ಷಣೆ ಒದಗಿಸಲು ನಿರ್ಧರಿಸಲಾಗಿತ್ತು. ಸೆಪ್ಟೆಂಬರ್ ಐದರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿನ ಮನೆಯ ಮುಂದೆ ಪತ್ರಕರ್ತೆ ಗೌರಿಲಂಕೇಶ್ ಹತ್ಯೆಯಾದ ನಂತರ ಸರಕಾರ ಈ ನಿರ್ಧಾರಕ್ಕೆ ಬಂದಿತ್ತು.
ಇದೀಗ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಿಗೆ ಜೀವ ಬೆದರಿಕೆ ಇದೆ ಎಂಬುದನ್ನು ಬಹಿರಂಗ ಮಾಡಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here