Saturday 10th, May 2025
canara news

ಭಾರತ್ ಬ್ಯಾಂಕ್‍ನಿಂದ `ಬಿಲ್ ಪೇಮೆಂಟ್ ಎಕ್ರಾಸ್ ಕೌಂಟರ್' ಸೇವಾರಂಭ

Published On : 26 Sep 2017   |  Reported By : Rons Bantwal


ಮುಂಬಯಿ, ಸೆ.25: ದಿ.ಭಾರತ್ ಬ್ಯಾಂಕ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್ ಸಂಸ್ಥೆಯು ತನ್ನ ಗ್ರಾಹಕರ ಹೆಚ್ಚುವರಿ ಸೇವೆಗಾಗಿ `ಬಿಲ್ ಪೇಮೆಂಟ್ ಎಕ್ರಾಸ್ ಕೌಂಟರ್' (ಬಿಬಿಪಿಎಸ್) ಉಪಯೋ ಗಿತ ಸೇವೆ ಆರಂಭಿಸಿತು. ಇತ್ತೀಚೆಗೆ ಗೋರೆಗಾಂ ಪೂರ್ವದ ಮಾರುತಿಗಿರಿ ಸ್ವಕಟ್ಟಡದಲ್ಲಿನ ಕೇಂದ್ರ ಕಚೇರಿಯಲ್ಲಿ ನಡೆದ ಬ್ಯಾಂಕ್ ಮಂಡಳಿ ಸಭೆಯಲ್ಲಿ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಈ ಸೇವೆಗೆ ಚಾಲನೆಯನ್ನೀಡಿದರು.

ಬ್ಯಾಂಕ್‍ನ ಗ್ರಾಹಕರು ಸೇರಿದಂತೆ ರಾಷ್ಟ್ರದ ಯಾವುದೇ ವ್ಯಕ್ತಿಗಳು ತಮ್ಮ ವಿದ್ಯುಚ್ಛಕ್ತಿ ಬಿಲ್, ದೂರವಾಣಿ, ಗ್ಯಾಸ್, ಡಿಟಿಹೆಚ್ ಬಿಲ್‍ಗಳ ಹಣ ಸಂದಾಯವನ್ನು ಭಾರತ್ ಬ್ಯಾಂಕ್‍ನ ಯಾವುದೇ ಶಾಖೆಗಳಿಂದ ಉಚಿತ ಸೇವೆಯಾಗಿಸಿ `ಬಿಲ್ ಪೇಮೆಂಟ್ ಎಕ್ರಾಸ್ ಕೌಂಟರ್' (ಬಿಬಿಪಿಎಸ್) ಉಪಯೋಸಿ ಆಯಾ ಸಂಸ್ಥೆಗಳಿಗೆ ನಗದು ಅಥವಾ ಚೆಕ್ ಮೂಲಕವೂ ನೇರವಾಗಿ ಬಟವಾಡೆ ಮಾಡಬಹುದಾಗಿದೆ.

ಈ ಸಂದರ್ಭದಲ್ಲಿ ಬ್ಯಾಂಕ್‍ನ ನಿರ್ದೇಶಕರುಗಳಾದ ಪುಷ್ಫಲತಾ ಎನ್.ಸಾಲ್ಯಾನ್, ಕೆ.ಎನ್ ಸುವರ್ಣ, ಜೆ.ಎ ಕೋಟ್ಯಾನ್, ಯು.ಎಸ್ ಪೂಜಾರಿ, ಭಾಸ್ಕರ್ ಎಂ.ಸಾಲ್ಯಾನ್, ನ್ಯಾ| ಎಸ್.ಬಿ ಅವಿೂನ್, ಚಂದ್ರಶೇಖರ ಎಸ್.ಪೂಜಾರಿ, ರೋಹಿತ್ ಎಂ.ಸುವರ್ಣ, ಹರೀಶ್ಚಂದ್ರ ಜಿ.ಮೂಲ್ಕಿ, ದಾಮೋದರ ಸಿ. ಕುಂದರ್, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಅಶೋಕ್ ಎಂ. ಕೋಟ್ಯಾನ್, ಅನ್ಬಲಗನ್ ಸಿ.ಹರಿಜನ, ಸಿ.ಟಿ ಸಾಲ್ಯಾನ್ ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹ ಕ ಅಧಿಕಾರಿ ಸಿ.ಆರ್ ಮೂಲ್ಕಿ, ಪ್ರಧಾನ ಪ್ರಬಂಧಕ ವಿದ್ಯಾನಂದ ಎಸ್.ಕರ್ಕೇರಾ, ನವೀನ್‍ಚಂದ್ರ ಎಸ್.ಬಂಗೇರಾ, ದಿನೇಶ್ ಬಿ.ಸಾಲ್ಯಾನ್, ನಿತ್ಯಾನಂದ ಎಸ್.ಕಿರೋಡಿಯನ್ (ಮುಖ್ಯ ಮಾಹಿತಿ ಅಧಿಕಾರಿ), ಮಾಹಿತಿ ತಂತ್ರಜ್ಞಾನ ಇಲಾಖೆಯ ಉನ್ನತಾಧಿಕಾರಿಗಳಾದ ರಾಜೇಶ್ ಅವಿೂನ್, ಪೂಜಾ ರಾಣೆ ಮತ್ತಿತರರು ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here