Friday 4th, July 2025
canara news

ಬಿಲ್ಲವರ ರತ್ನ ಡಾ| ರಾಜಶೇಖರ ಆರ್.ಕೋಟ್ಯಾನ್ ಬೆಂಗಳೂರುನಲ್ಲಿ ಕಾಂಗ್ರೇಸ್ (ಐ) ಪಕ್ಷಕ್ಕೆ ಸೇರ್ಪಡೆ

Published On : 28 Sep 2017   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಸೆ.27: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕಾರ್ಯಕಾರಿ ಸಮಿತಿ ಸದಸ್ಯ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಟ, ನಿರ್ಮಾಪಕÀ, ನಿರ್ದೇಶಕ, ಸ್ಯಾಂಡಲ್‍ವುಡ್ ನಟ, ಮುಂಬಯಿಯ ಹೊಟೇಲು ಉದ್ಯಮಿ ಡಾ| ರಾಜಶೇಖರ ಆರ್.ಕೋಟ್ಯಾನ್ ಅವರು ರಾಜಕೀಯ ರಂಗಕ್ಕೆ ಪ್ರವೇಶಿಸಿದ್ದು, ಇಂದಿಲ್ಲಿ ಬುಧವಾರ ಪೂರ್ವಾಹ್ನ ಬೆಂಗಳೂರುನಲ್ಲಿ ರಾಷ್ಟ್ರೀಯ ಕಾಂಗ್ರೇಸ್ (ಐ) ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಗೊಂಡರು.

ಬೆಂಗಳೂರು ಕ್ವೀನ್ಸ್ ಅಲ್ಲಿನ ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಮಿಟಿ ಕಛೇರಿಯಲ್ಲಿ ಇಂದಿಲ್ಲಿ ನಡೆದ ಸಭೆಯಲ್ಲಿ ಕಾಂಗ್ರೇಸ್ ಪಕ್ಷದ ಕರ್ನಾಟಕ ರಾಜ್ಯಧ್ಯಕ್ಷ ಡಾ| ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ತನ್ನ ಸದಸ್ಯತ್ವವನ್ನು ನೊಂದಾಯಿಸಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಪಕ್ಷದ ಬಾವುಟವನ್ನಿತ್ತು ರಾಜಶೇಖರ್ ಅವರಿಗೆ ರಾಜ್ಯಧ್ಯಕ್ಷ ಅಧಿಕೃತವಾಗಿ ಬರಮಾಡಿಕೊಂಡರು.

ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮುನ್ನ ಪೂರ್ವತಯಾರಿ ಆಗಿಸಿ ರಾಜಶೇಖರ ಅಭಿಮಾನಿ ಬಳಗ, ಹಿತೈಷಿಗಳು ಇತ್ತೀಚೆಗೆ ನಗರದ ಅಂಧೇರಿಯಲ್ಲಿ ಮಹತ್ವದ ಸಭೆಯೊಂದನ್ನು ಆಯೋಜಿಸಿದ್ದರು. ಸಭೆಯಲ್ಲಿ ಸ್ವಸಮುದಾ ಯದ ಮುಂದಾಳುಗಳುಗಳು ಉಪಸ್ಥಿತರಿದ್ದು ಅವರಿಂದ ಸೂಕ್ತ ಸಲಹೆ, ಮಾರ್ಗದರ್ಶನ ಪಡೆದ ರಾಜಶೇಖರ್ ನಂತರ ದೆಹಲಿಗೆ ತೆರಳಿ ಕಾಂಗ್ರೇಸ್ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ ಬಳಿಕವಷ್ಟೇ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳುವ ಬಗ್ಗೆ ನಿರ್ಧಾರ ಕೈಗೊಂಡಿದ್ದರು.

ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮುನ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿ ಹಾಗೂ ಪಕ್ಷದ ಕರ್ನಾಟಕ ರಾಜ್ಯ ಉಸ್ತುವರಿ ಕೆ.ಸಿ ವೇಣುಗೋಪಾಲ್, ಕರ್ನಾಟಕ ರಾಜ್ಯಧ್ಯಕ್ಷ ಡಾ| ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೇಸ್ ಪಕ್ಷದ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್, ಕೇಂದ್ರ ಸರಕಾರದ ವಿಪಕ್ಷ ನಾಯಕ ಮಲಿಕಾರ್ಜುನ ಖಾರ್ಗೆ, ಬಿಲ್ಲವ ಧುರೀಣ, ಮಾಜಿ ಕೇಂದ್ರ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ, ಎಂ. ವೀರಪ್ಪ ಮೊೈಲಿ, ಸಚಿವರುಗಳಾದ ಬಿ.ರಮನಾಥ ರೈ, ಯು.ಟಿ ಖಾದರ್, ಪ್ರಮೋದ್ ಮಧ್ವರಾಜ್, ಮಾಜಿ ಸಚಿವರುಗಳಾದ ಆಸ್ಕರ್ ಫೆರ್ನಾಂಡಿಸ್, ವಿನಯಕುಮಾರ್ ಸೊರಕೆ, ಕೆ.ಅಭಯಚಂದ್ರ ಜೈನ್, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಶಾಸಕರಾದ ಜೆ.ಆರ್ ಲೋಬೊ, ಬಿ.ಮೊೈದೀನ್ ಬಾವ, ಶಕುಂತಳಾ ಟಿ.ಶೆಟ್ಟಿ, ಕೆ.ಗೋಪಾಲ್ ಪೂಜಾರಿ, ಐವಾನ್ ಡಿ'ಸೋಜಾ, ಸೇರಿದಂತೆ ಅನೇಕ ರಾಜಕೀಯ ಧುರೀಣರ, ಸಮುದಾಯದ ಗಣ್ಯರ, ಉಡುಪಿ ಜಿಲ್ಲೆಯ ಮುದರಂಗಡಿ ಸಾಂತೂರು ಗರಡಿಯ ಕಲ್ಯಾಣಿ ರಾಘವೇಂದ್ರ ಕೋಟ್ಯಾನ್ (ತಾಯಿ), ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ಮತ್ತಿತರ ಆಶೀರ್ವಾದ ಪಡೆದು ರಾಜಕೀಯವಾಗಿ ಮುನ್ನಡೆಯಲು ಸಕಲ ಸಿದ್ಧತೆಗಳನ್ನು ನಡೆಸಿ ಇಂದಿಲ್ಲಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಬಿ.ಕೆ ಹರಿಪ್ರಸಾದ್, ಹರೀಶ್ ಕುಮಾರ್, ಜಯಮಾಲ, ನಿಲೇಶ್ ಪೂಜಾರಿ ಪಲಿಮಾರ್, ಸಹವರ್ತಿಗಳಾದ ದೀಪಕ್ ಕೋಟ್ಯಾನ್, ಪಿತಂಬರ್ ಹೆರಾಜೆ, ರವಿ ಪೂಜಾರಿ ಮಂಗಳೂರು, ಯುವವಾಹಿನಿ ಅಧ್ಯಕ್ಷ, ಯಶವಂತ್ ಪೂಜಾರಿ, ಸುರೇಶ್ ಪೂಜಾರಿ ವಾಶಿ, ದಯಾನಂದ ಆರ್.ಪೂಜಾರಿ ಕಲ್ಯ (ಕಲ್ವಾ), ಹರೀಶ್ ಡಿ.ಸಾಲ್ಯಾನ್ ಬಜೆಗೋಳಿ, ರತ್ನಾಕರ ಜಿ.ಸಾಲ್ಯಾನ್, ಮೋಹನದಾಸ್ ಸಾಲ್ಯಾನ್ ಭಿವಂಡಿ, ಪರಮೇಶ್ವರ ಪೂಜಾರಿ ಬಿಜೂರು, ಸುರೇಶ್ ಪೂಜಾರಿ ಅಳದಂಗಡಿ, ಪಕ್ಷದ ನೇತಾರರುಗಳಾದ ಡಿ.ಸಿ ರಮೇಶ್, ರಕ್ಷಿತ್ ಶಿವರಾಮ್, ಪಿ.ಅಭಿಷೇಕ್ ಸೇರಿದಂತೆ ಸುಮಾರು ಮತ್ತಿತರರು ಉಪಸ್ಥಿತರಿದ್ದು ಶುಭಾರೈಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here