Saturday 10th, May 2025
canara news

ಆಕಸ್ಮಿಕವಾಗಿ ಕುಸಿದು ಬಿದ್ದು ಕೃಷ್ಣ ಶೆಟ್ಟಿ ನಿಧನ

Published On : 30 Sep 2017   |  Reported By : Rons Bantwal


ಆಸ್ಪತ್ರೆಗೆ ದಾಖಲಿಸಿದ ಮಾಜಿ ಶಾಸಕ ಕೃಷ್ಣ ಎಸ್.ಹೆಗ್ಡೆ

ಮುಂಬಯಿ, ಸೆ.30: ಉಪನಗರ ವಿಲೇಪಾರ್ಲೆ ಪೂರ್ವದ ಪ್ರಬೋಧಣ್ಕರ್ ಠಾಕ್ರೆ ಸ್ಫೋರ್ಟ್ಸ್ ಕಾಂಪ್ಲೆಕ್ಸ್‍ನಲ್ಲಿ ಕೇರಂ ಆಟ ಪೂರೈಸಿ ಕೈತೊಳೆಯಲು ಹೋಗುತ್ತಿರುವಂತೆ ಏಕಾಏಕಿ ಕುಸಿದು ಬಿದ್ದ ಹಿರಿಯ ನಾಗರೀಕ ಕೃಷ್ಣ ಸಿದ್ಧು ಶೆಟ್ಟಿ (70.) ನಿಧನರಾದರು.

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಕುಕ್ಕುಂದೂರು ಮೂಲತ: ಕೃಷ್ಣ ಶೆಟ್ಟಿ ವಿಲೇಪಾರ್ಲೆ ಪೂರ್ವದ ನಿವಾಸಿ ಆಗಿದ್ದು ಮ್ಯಾಪೆÇ್ಕೀ ಸಂಸ್ಥೆಯಲ್ಲಿ ಉದ್ಯೋಗಿ ಆಗಿದ್ದು ನಿವೃತ್ತರಾಗಿದ್ದರು. ಎಂದಿಂತೆ ಒಳಾಂಗಣ ಆಟವಾಡಲು ಕಳೆದ ಬುಧವಾರ ಸಂಜೆ ಸ್ಫೋರ್ಟ್ಸ್ ಕಾಂಪ್ಲೆಕ್ಸ್‍ಗೆ ಆಗಮಿಸಿದ್ದು ಈ ವೇಳೆ ಸ್ಥಳೀಯ ಮಾಜಿ ಶಾಸಕ ಕೃಷ್ಣ ಎಸ್.ಹೆಗ್ಡೆ ಅಲ್ಲಿದ್ದು ತತ್‍ಕ್ಷಣವೇ ತನ್ನ ಕಾರನ್ನು ಹತ್ತಿಸಿ ಸ್ಥಳೀಯ ನಿತ್ಯಾನಂದ್ ಖಾಸಾಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಆಗದೆ ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ, ಮೂವರು ಗಂಡು ಮತ್ತು ಒಂದು ಹೆಣ್ಣು ಮತ್ತು ಬಂಧು-ಬಳಗವನ್ನು ಅಗಲಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here