Saturday 10th, May 2025
canara news

ಅ.28-29: ಉಡುಪಿಯ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಗೃಹದಲ್ಲಿ ಜೇಸಿಐ ವಲಯ ಸಮ್ಮೇಳನ ಕಲ್ಯಾಣ್ಪುರದಲ್ಲಿ ಜೇಸಿ ಕಾಸ್ಮೋ ಸಿಟಿ ಸಮ್ಮೇಳನ ಕಛೇರಿ ಉದ್ಘಾಟನೆ

Published On : 04 Oct 2017   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಅ.03: ಜೇಸಿಐ ವಲಯ 15ರ ವಲಯ ಸಮ್ಮೇಳನದ ಅತಿಥೇಯದಲ್ಲಿ ಇದೇ ಅ.28 ಮತ್ತು 29ರ ದ್ವಿದಿನಗಳಲ್ಲಿ ಉಡುಪಿ ಇಲ್ಲಿನ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಗೃಹದಲ್ಲಿ ನಡೆಸಲ್ಪಡುವ ವಲಯ ಸಮ್ಮೇಳನ-2017 `ನನಸು' ಇದರ ಅತಿಥೇಯರಾದ ಜೇಸಿಐ ಕಲ್ಯಾಣ್ಪುರ ಕಾಸ್ಮೋ ಸಿಟಿ ಇದರ ಸಮ್ಮೇಳನದ ಕಛೇರಿಯನ್ನು ಕಳೆದ ಸೋಮವಾರ ಗಾಂಧೀ ಜಯಂತಿಯ ಶುಭಾವಸರದಲ್ಲಿ ಕಲ್ಯಾಣ್ಪುರ ಸಂತೆಕಟ್ಟೆಯಲ್ಲಿ ಯುವ ಉದ್ಯಮಿ ಗ್ಲೋಬಲ್ ಎಕ್‍ಕ್ಲೇವ್ ಸಂಸ್ಥೆಯ ಆಡಳಿತ ನಿರ್ದೇಶಕ ಅಮಿತ್ ಪೂಜಾರಿ ಮತ್ತು ಜೇಸಿವಲಯಾದ್ಯಕ್ಷ ಜೆಎಫ್‍ಪಿ| ಸಂತೋಷ್ ಜಿ ಅವರು ಉದ್ಘಾಟಿಸಿ ಶುಭಾರೈಸಿದರು.

ಅತಿಥಿüಗಳಾಗಿ ರೊಟೇರಿಯನ್ ಎಲನ್ ಲೂವಿಸ್, ಸಂತೆಕಟ್ಟೆ ಬಿಲ್ಲವ ಸಂಘದ ಗೌರವಾದ್ಯಕ್ಷ ಭಾಸ್ಕರ ಜತ್ತನ್, ವಲಯಾಧಿಕಾರಿಗಳಾದ ಜೇಸಿ ರಾಕೇಶ್ ಕುಂಜೂರು, ಜೇಸಿ ರಾಘವೇಂದ್ರ ಪ್ರಭು ಕರ್ವಾಲು, ಜೇಸಿ ಮುರಳೀಧರ್ ಸುವರ್ಣ, ಜೇಸಿ ಶ್ರೀನಿವಾಸ್.ಜಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾಸ್ಮೋ ಸಿಟಿ ಸಂಸ್ಥಾಪಕ ಜೇಸಿ ಹೇಮಂತ್, ಜೇಸಿ ಶೇಕರ್ ಗುಜ್ಜರಬೆಟ್ಟು, ಜೇಸಿ ನಾಗರಾಜ್, ಜೇಸಿ ಸುರೇಶ್ ಜತ್ತನ್,ಜೇಸಿ ಸದನ್, ಜೇಸಿ ಭಾಸ್ಕರ ಸುವರ್ಣ, ಜೇಸಿ ಉಮೇಶ್ ಪೂಜಾರಿ, ವಲಯದ ಪ್ರಥಮ ಮಹಿಳೆ ಜೇಸಿ ಶೀತಲ್ ಸಂತೋಷ್ ಹಾಗೂ ಜೇಸಿ ಸಂಧ್ಯಾ, ಜೇಸಿ ಭವ್ಯ, ಜೇಸಿ ಶಕುಂತಳ, ಜೇಸಿ ದೀಪ್ತಿ, ಜೇಸಿ ಸುಬ್ರಹ್ಮಣ್ಯ, ಜೇಸಿ ಇರ್ಫಾನ್, ಜೇಸಿ ಸತೀಶ್, ಜೇಸಿ ಮಂಜುನಾಥ್, ಜೇಸಿ ದಿನೇಶ್ ಬಾಂಧವ್ಯ ಮತ್ತಿತರರು ಉಪಸ್ಥಿತರಿದ್ದರು. ಕಾಸ್ಮೋ ಸಿಟಿ ಅಧ್ಯಕ್ಷ ಜೇಸಿ ರಿತೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಜೇಸಿ ರೇವತಿ ಶ್ರೀನಿವಾಸ್ ಧನ್ಯವದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here