Saturday 10th, May 2025
canara news

ನಾಡೋಜ Prof| ಕೆ.ಎಸ್ ನಿಸಾರ್‍ಅಹಮ್ಮದ್ ಇವರಿಗೆ ‘ಕಾರಂತ ಪುರಸ್ಕಾರ’

Published On : 06 Oct 2017   |  Reported By : Rons Bantwal


ಅ.10 ರಂದು ಮಂಗಳೂರಿನ ಪುರಭವನದಲ್ಲಿ ಪ್ರದಾನ

ಮುಂಬಯಿ, ಅ.05: ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಲ್ಕೂರ ಪ್ರತಿಷ್ಠಾನದ ಸಹಯೋಗದಲ್ಲಿ ಜರಗಲಿರುವ ಡಾ| ಕೋಟ ಶಿವರಾಮ ಕಾರಂತರ 116ನೆಯ ಹುಟ್ಟುಹಬ್ಬ ಆಚರಣೆಯ ಸಮಾರಂಭದಲ್ಲಿ, ಖ್ಯಾತ ಕವಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಲವಾರು ಮಹೋನ್ನತ ಕೃತಿ ರಚನಕಾರ, ಪ್ರಾಧ್ಯಾಪಕ ವಿಮರ್ಶಕ, ವೈಚಾರಿಕ ಬರಹಗಾರ ಪ್ರತಿಷ್ಠಿತ ಮೈಸೂರು ದಸರಾ ಉತ್ಸವವನ್ನು ಉದ್ಘಾಟಿಸಿದ ನಿತ್ಯೋತ್ಸವ ಕವಿ ನಾಡೋಜ Prof| ಕೆ.ಎಸ್. ನಿಸಾರ್ ಅಹಮ್ಮದ್ ಇವರಿಗೆ ‘ಕಾರಂತ ಪುರಸ್ಕಾರ” ನೀಡಿ ಗೌರವಿಸಲಾಗುವುದು.

ಇದೇ ಅ.10ರ ಮಂಗಳವಾರ ಸಂಜೆ 4.00ಕ್ಕೆ ಮಂಗಳೂರು ಅಲ್ಲಿನ ಪುರಭವನದಲ್ಲಿ ಗೌರವ ಪ್ರದಾನ ಮಾಡಲಾಗುವುದು ಎಂಬುದಾಗಿ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತ್‍ನ ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here