Saturday 10th, May 2025
canara news

ಜಿಎಸ್‍ಬಿ ಸಾರಸ್ವತ ಕಲ್ಚರಲ್‍ನಿಂದ ಜರುಗಿದ ದಶವಾರ್ಷಿಕ `ದಹಿಸರ್ ದಸರಾ'ದಲ್ಲಿ ತುಲಭಾರ ಸೇವೆಗೈದ ತೆನಾಲಿರಾಮ ಧಾರಾವಾಹಿಯ ನಟ ಕೃಷ್ಣ ಭರದ್ವಾಜ್

Published On : 06 Oct 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.06: ಜಿಎಸ್‍ಬಿ ಸಭಾ ದಹಿಸರ್ ಬೊರಿವಲಿ ಸಂಸ್ಥೆಯು ದಶವಾರ್ಷಿಕವಾಗಿ ಆಚರಿಸಿದ ನವರಾತ್ರಿ ಉತ್ಸವ 2017 ಸಂಭ್ರಮದಲ್ಲಿ ಹಿಂದಿ ತೆನಾಲಿರಾಮ ಧಾರಾವಾಹಿಯ ಕಿರುತೆರೆ ನಟ ಕೃಷ್ಣ ಭರದ್ವಾಜ್ ಮತ್ತು ಪ್ರಿಯಂವದಾ ಕಾಂತ್, ಪಟೇಲ್ ಕೀ ಪಂಜಾಬಿ ಶ್ಹಾದಿ ಹಿಂದಿ ಚಲನಚಿತ್ರದ ಅಭಿನೇತ್ರಿ ಪಾಯಲ್ ಗೋಶ್, ನಟಿ ಶರ್ಮಿಳಾ ಶಿಂಧೆ (ರಾಜರಾಮ್) ಮತ್ತಿತರರು ಆಗಮಿಸಿ ಶ್ರೀದೇವಿ ದರ್ಶನ ಪಡೆದು ತುಲಭಾರ ಸೇವೆಗೈದರು.

 

ದಹಿಸರ್ ಪೂರ್ವದ ಎನ್.ಎಲ್ ಕಾಂಪ್ಲೆಕ್ಸ್‍ನ ಸಾರಸ್ವತ ಕಲ್ಚರಲ್ ಎಂಡ್ ರಿಕ್ರಿಯೇಷನ್ ಸೆಂಟರ್ ಮೈದಾನದ ಮಾಧವೇಂದ್ರ ಸಭಾಗೃಹದಲ್ಲಿನ ಭವ್ಯ ಅಲಂಕೃತ ಮಂಟಪದಲ್ಲಿ ನವರೂಪಗಳಿಂದ ಪುಷ್ಪಾಲಂಕೃತವಾಗಿ ಶೃಂಗಾರಿಸಿ ರಜತ ಪ್ರಭಾವಳಿಯೊಂದಿಗೆ ಸ್ವರ್ಣಮುಕುಟ, ವಜ್ರ, ಚಿನ್ನಾಭರಣ, ಶ್ರೀಸರಸ್ವತಿ ದೇವಿಯ ಆರಾಧನೆಯನ್ನು ಗಣ್ಯರು ಮುಕ್ತ ಕಂಠದಿಂದ ಪ್ರಶಂಸಿದರು. ಮಹಾಲಕ್ಷ್ಮೀ ಪೂಜೆ, ದಿನ 12 ಅಡಿ ಎತ್ತರದ ಬಾಲಾಜಿ (ವೆಂಕಟೇಶ)ಯೊಂದಿಗೆ ಮಹಾಲಕ್ಷ್ಮೀ ರಾರಜಿಸಿದ್ದು ಅಂದು ವಿಘ್ನಾರ್ಥ ಭಜನಾ ಮಂಡಳಿ ಭಜನೆ ನಡೆಸಿದ್ದು ಸಂಜೆ ಹಳದಿ ಕುಂಕುಮ ಕಾರ್ಯಕ್ರಮ ನೆರವೇರಿತ್ತು.

ವೇದಮೂರ್ತಿ ಲಕ್ಷಿ ್ಮೀ ನಾರಾಯಣ ಭಟ್, ವೇ| ಮೂ| ಉಲ್ಲಾಸ್ ಭಟ್, ವೇ| ಮೂ| ಮಂಜುನಾಥ್ ಪುರಾಣಿಕ್, ವೇ| ಮೂ| ಪ್ರಶಾಂತ್ ಪುರಾಣಿಕ್, ವೇ| ಮೂ| ವಿನಾಯಕ ಪುರಾಣಿಕ್ ಮತ್ತಿತರ ವಿದ್ವಾನರು ವಿವಿಧ ಪೂಜಾಧಿಗಳನ್ನು ನೆರವೇರಿಸಿ ಆಗಮಿಸಿದ್ದ ಸರ್ವ ಸದ್ಭಕ್ತರಿಗೆ ಪ್ರಸಾದ ವಿತರಿಸಿ ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಕುಂದಾಪುರ ಶ್ರೀನಿವಾಸ ಪ್ರಭು, ಜಿ.ಡಿ ರಾವ್, ಸಿ.ಎಂ.ಎಸ್ ರಾವ್, ಶೋಭಾ ವಿ.ಕುಲ್ಕರ್ಣಿ, ಸುಗುಣಾ ಕೆ. ಕಾಮತ್, ಅಧ್ಯಕ್ಷ ಕೆ.ಆರ್.ಮಲ್ಯ, ಗೌ| ಪ್ರ| ಕಾರ್ಯದರ್ಶಿ ಎಂ.ಉದಯ ಪಡಿಯಾರ್, ಗೌ| ಕೋಶಾಧಿಕಾರಿ ಮೋಹನ್ ಎ.ಕಾಮತ್, ಜತೆ ಕಾರ್ಯದರ್ಶಿಗಳಾದ ಸಾಣೂರು ಮನೋಹರ್ ವಿ.ಕಾಮತ್, ವಿನೋದ್ ಕೆ.ಪ್ರಭು ಸೇರಿದಂತೆ ಸೇವಾಕರ್ತರನೇಕರು ಉಪಸ್ಥಿತರಿದ್ದು ವಿಜಯದಶಮಿ ದಿನ ಶಾರದಾದೇವಿಗೆ ಮಹಾಪೂಜೆ ನೆರವೇರಿಸಿ ಸಂಜೆ ವಿಸರ್ಜಿಸಿ ವಾರ್ಷಿಕ ಶರನ್ನವರಾತ್ರಿಗೆ ಅಂತ್ಯವಾಡಲಾಯಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here