Saturday 10th, May 2025
canara news

ಆಳ್ವಾಸ್ ನಲ್ಲಿ ವರಿಷ್ಠ ಕ್ರೀಡಾಕೂಟ 2017

Published On : 08 Oct 2017   |  Reported By : Gurudatt Somayaji


ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರಾಮೀಣ ಜಾನಪದ ಕ್ರೀಡೆಗಳ ಅನನ್ಯ ಲೋಕವನ್ನು ತೆರೆದಿಡುವ ವರಿಷ್ಠ ಕ್ರೀಡಾಕೂಟ-2017 ನ್ನು ಮೂಡಬಿದ್ರೆಯ ಉದ್ಯಮಿ ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು .

ಅವರು ಈ ಸಂದರ್ಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯನ್ನು ವಿದ್ಯಾಭ್ಯಾಸಕ್ಕೆ ಪೂರಕವಾಗಿ ರೂಪಿಸಿಕೊಳ್ಳಬೇಕು . ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಗ್ರಾಮೀಣ ಕ್ರೀಡೆಗಳು ಮಹತ್ತರ ಪಾತ್ರ ವಹಿಸುತ್ತವೆ . ಕ್ರೀಡಾಲೋಕಕ್ಕೆ ಭಾರತದ ಕೊಡುಗೆ ಅಪಾರ. ಹಿರಿಯರು ಬಿಟ್ಟುಹೋದ ಈ ಸಂಸ್ಕೃತಿಯನ್ನು ನಾವು ಉಳಿಸಿ ಬೆಳೆಸಿಕೊಳ್ಳಬೇಕು . ಆಧುನಿಕ ಕ್ರೀಡೆಯ ಜೊತೆಗೆ ವರಿಷ್ಠ ಕ್ರೀಡಾಕೂಟ ಆಯೋಜಿಸುವ ಮೂಲಕ ಆಳ್ವಾಸ್ ಸಂಸ್ಥೆ ಜಾನಪದ ಕ್ರೀಡೆಗೂ ಪ್ರೋತ್ಸಾಹ ನೀಡುತ್ತಿರುವುದು ಗ್ರಾಮೀಣ ಜಾನಪದ ಕ್ರೀಡೆಗಳನ್ನು ಉಳಿಸಿ ಬೆಳೆಸುವುದಕ್ಕೆ ದಿಟ್ಟ ಹೆಜ್ಜೆ ಎಂದರು.

ಕ್ರಿಕೆಟ್, ಫುಟ್ಬಾಲ್ ಮತ್ತು ಆಧುನಿಕ ಕ್ರೀಡೆಗಳು ಗ್ರಾಮೀಣ ಕ್ರೀಡೆಗಳನ್ನು ಮಸುಕಾಗಲು ಬಿಡಬಾರದು . ಬುದ್ಧಿಶಕ್ತಿ , ನಾಯಕತ್ವ ಗುಣಗಳು ಮತ್ತು ಏಕಾಗ್ರತೆಯ ಬೆಳವಣಿಗೆಗೂ ಚನ್ನೆಮಣೆ, ಕುಟ್ಟಿದೊಣ್ಣೆ ಯಂತಹ ಕ್ರೀಡೆಗಳು ಸಹಕಾರಿ ಎಂದು ಅವರು ತಿಳಿಸಿದರು .

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ . ಪೀಟರ್ ಫೆರ್ನಾಂಡಿಸ್ ಅತಿಥಿಗಳನ್ನು ಗೌರವಿಸಿದರು .

ಗ್ರೀಷ್ಮ ಕಾರ್ಯಕ್ರಮ ನಿರೂಪಿಸಿದರು . ಸುಹಾಸ್ ವಂದಿಸಿದರು. ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಕಾರ್ಯಕ್ರಮ ಸಂಯೋಜಕ ಸುರೇಶ ಕೆ.ವಿ., ಡಾ. ಸತ್ಯನಾರಾಯಣ ಉಪಸ್ಥಿತರಿದ್ದರು .

ಎರಡು ದಿನಗಳ ಕ್ರೀಡಾಕೂಟದಲ್ಲಿ ಕುಂಟೆಬಿಲ್ಲೆ, ಬುಗುರಿ , ಕುಟ್ಟಿದೊಣ್ಣೆ , ಲಗೋರಿ , ಕೊತ್ತಳಿಗೆ ಕ್ರಿಕೆಟ್, ಗಿಲ್ಲಿದಾಂಡು, ಅಕ್ಕಿಮುಡಿ ಸ್ಪರ್ಧೆ ಮತ್ತು ಚೌಕಾಬಾರ ಮುಂತಾದ 25 ಕ್ಕೂ ಹೆಚ್ಚಿನ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದೆ .




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here