Saturday 20th, April 2024
canara news

ಸಾಮಾನ್ಯ ತರಬೇತಿ ಕಾರ್ಯಾಗಾರದಲ್ಲಿ ಸತತ ಎರಡು ದಿನ ರಾಯೀ ರಾಜ ಕುಮಾರರ ಮಾಹಿತಿ ಕಾರ್ಯಕ್ರಮ

Published On : 12 Oct 2017   |  Reported By : Canaranews network


ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಯುಕ್ತ ಸಹಭಾಗಿತ್ವದಲ್ಲಿ ಮೂಡುಬಿದಿರೆ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಮೂಡುಬಿದಿರೆ ವಲಯದ ಸುಮಾರು50 ಮಂದಿ ಶಿಕ್ಷಕರಿಗೆ ನೀಡಿದ 5 ದಿನಗಳ ಸಾಮಾನ್ಯ ತರಬೇತಿ ಕಾರ್ಯಾಗಾರದಲ್ಲಿ ದಿನಾಂಕ 11-10-17 ರಂದು ಹದಿಹರೆಯದ ಅರ್ಥ, ವ್ಯಾಪ್ತಿ, ಶಾರೀರಿಕ,ಮಾನಸಿಕ, ಸಾಮಾಜಿಕ, ಸಂಜ್ಞಾತ್ಮಕ ಬೆಳವಣಿಗೆ ಮತ್ತು ಆ ವಯಸ್ಸಿನ ಮಕ್ಕಳು ಅನುಭವಿಸುವ ಮಾನಸಿಕ ತುಮುಲ, ತಾಕಲಾಟಗಳು,ಸಂಘರ್ಷಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿ ರಾಯೀ ರಾಜ ಕುಮಾರ್ ತಮ್ಮ 331 ನೇ ಕಾರ್ಯಕ್ರಮದಲ್ಲಿ ನೀಡಿದರು.

ಅಲ್ಲದೆ ಹಲವಾರುಉದಾಹರಣೆ ಮೂಲಕ ಹದಿಹರೆಯದ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ದೊರಕದಿದ್ಲದಲ್ಲಿ ಬಾಲಾಪರಾಧಿಯಾಗಿ ಬೆಳೆಯುವ ಸಾಧ್ಯತೆಯ ಚಿತ್ರಣವನ್ನು ನೀಡಿ ಶಿಕ್ಷಕರ ಪಾತ್ರ, ಜವಾಬ್ದಾರಿಯನ್ನು ನೆನಪಿಸಿದರು.

ದಿನಾಂಕ 12-10-17 ರಂದು ಜೀವನ ಕೌಶಲದ ಅನ್ವಯ, ಸನ್ನಿವೇಶ, ಬಳಕೆ, ನಿರ್ವಹಣೆ, ಮಾಹಿತಿಯನ್ನು ನೀಡಿ ಕೌಶಲ ಹಾಗೂ ಹೊಂದಾಣಿಕೆಯ ನಡವಳಿಕೆಯ ಅಗತ್ಯ ಬದುಕಿನಲ್ಲಿ ಎಷ್ಟಿದೆ ಎನ್ನುವುದರ ಚಿತ್ರಣವನ್ನು ಅಧ್ಯಾಪಕ, ಸಂಪನ್ಮೂಲ ವ್ಯಕ್ತಿ ರಾಯೀ ರಾಜ ಕುಮಾರ್ ತಮ್ಮ 332 ನೇ ಕಾರ್ಯಕ್ರಮದಲ್ಲಿ ನೀಡಿದರು.

ಕ್ಷೇತ್ರ ಸಂಪನ್ಮೂಲ ಕೇಂದ್ರದ ನಿರ್ವಾಹಕಿ ಶ್ರೀಮತಿ ನಿಶಾ ಸ್ವಾಗತಿಸಿ ವಂದಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here