Friday 4th, July 2025
canara news

ವಾಲ್ಕೇಶ್ವರದಲ್ಲಿ ಶಿವಾ'ಸ್ ಸಿಗ್ನೇಚರ್ ಸಲೂನ್ ನೂತನ ಮಳಿಗೆ ಆರಂಭ ಬಾಲಿವುಡ್ ನಟಿ ಕಿರ್ತಿ ಕುಲ್ಹಾರಿ ಅವರಿಂದ ಉದ್ಘಾಟನೆ

Published On : 13 Oct 2017   |  Reported By : Ronida Mumbai


(ಚಿತ್ರ / ವರದಿ: ರೊನಿಡಾ ಮುಂಬಯಿ)

ಮುಂಬಯಿ, ಅ.12: ಮಾಯಾನಗರಿ ಬೃಹನ್ಮುಂಬಯಿಯಲ್ಲಿ ಕ್ಷೌರಿಕ ವೃತ್ತಿ ಮುಖೇನ ಬಾಲಿವುಡ್ ಸೇರಿದಂತೆ ದೇಶವಿದೇಶಗಳಲ್ಲಿ ತನ್ನದೇ ಸ್ವಂತಿಕೆಯ ಛಾಪು ಮೂಡಿಸಿರುವ ಕ್ಷೌರ ಉದ್ದಿಮೆಯ ಹೆಸರಾಂತ ತುಳು ಕನ್ನಡಿಗ ಡಾ| ಶಿವರಾಮ ಕೆ.ಭಂಡಾರಿ ಅತ್ತೂರು (ಕಾರ್ಕಳ) ಆಡಳಿತ್ವದ ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ತನ್ನ 15ನೇ ಮಳಿಗೆಯನ್ನು ಸ್ಥಾನೀಯ ಪ್ರಪ್ರಥಮ ವಿಲಾಸಿ (ಲಗ್ಝೂರಿಯಸ್) ಕೇಶ ಮತ್ತು ಸೌಂದರ್ಯ ಗಮ್ಯಸ್ಥಾನ ಆಗಿಸಿ ಶಿವಾ'ಸ್ ಸಿಗ್ನೇಚರ್ ಸಲೂನ್ ಕೇಶಾಲಯವನ್ನು ಇಂದು ಸಂಜೆ ಮಲಬಾರ್‍ಹಿಲ್ ವಾಲ್ಕೇಶ್ವರ್ ಡೊಂಗರ್ಸಿ ರಸ್ತೆಯ ತೀನ್‍ಬತ್ತಿ ಇಲ್ಲಿನ ವೀಣಾ ಅಪಾರ್ಟ್‍ಮೆಂಟ್ಸ್‍ನಲ್ಲಿ ಶುಭಾರಂಭ ಗೊಳಿಸಿತು.

ಮುಖ್ಯ ಅತಿಥಿüಯಾಗಿ ಉಪಸ್ಥಿತ ಬಾಲಿವುಡ್ ನಟಿ, ಇಂದುಸರ್ಕರ್ ಚಲನಚಿತ್ರದ ನಾಯಕಿ ನಟಿ ಕಿರ್ತಿ ಕುಲ್ಹಾರಿ, ರಿಬ್ಬನ್ ಕತ್ತರಿಸಿ ಶಿವಾ'ಸ್ ಸಿಗ್ನೇಚರ್ ಸಲೂನ್ ಉದ್ಘಾಟಿಸಿದರು. ಶಿವರಾಮ ಕೆ.ಭಂಡಾರಿ ತನ್ನ ಮಾತೃಶಿ ಗುಲಾಬಿ ಕೃಷ್ಣ ಭಂಡಾರಿ ಅವರೊಂದಿಗೆ ಶ್ರೀಫಲ ಹೊಡೆದು ಕ್ಷೌರಿಕ ಸೇವೆಗಳಿಗೆ ಚಾಲನೆಯನ್ನಿತ್ತರು. ಪುರೋಹಿತ ನಾಗರಜ್ ಭಟ್ ಧರೆಗುಡ್ಡೆ (ಕಾರ್ಕಳ) ತನ್ನ ಪೌರೋಹಿತ್ಯದಲ್ಲಿ ವಾಸ್ತುಪೂಜೆ, ಗಣಹೋಮ ನೆರವೇರಿಸಿ ನೆರೆದ ಶಿವಾ'ಸ್ ಹಿತೈಶಿಗಳಿಗೆ ಪುರೋಹಿತರು ಹಿತೈಷಿಗಳಿಗೆ ತೀರ್ಥಪ್ರಸಾದ ವಿತರಿಸಿ ಹರಸಿದರು.

ಸಮಾರಂಭದಲ್ಲಿ ಹಿರಿಯ ಕೇಶೋದ್ಯಮಿ ವಿಠಲ್ ಭಂಡಾರಿ, ಉಡುಪಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ, ಭಂಡಾರಿ ಮಹಾ ಮಂಡಲದ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ, ಭಂಡಾರಿ ಸೇವಾ ಸಮಿತಿ ಮುಂಬಯಿ ಮಹಿಳಾ ವಿಭಾಗಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ಕಡಂದಲೆ, ನ್ಯಾಯವಾದಿ ರಾಮಣ್ಣ ಎಂ.ಭಂಡಾರಿ, ಪ್ರಭಾಕರ್ ಪಿ.ಭಂಡಾರಿ ಥಾಣೆ, ಮೇಘಾ ಸೌರಭ್ ಭಂಡಾರಿ, ರಂಜಿತ್ ಭಂಡಾರಿ ಸೇರಿದಂತೆ ನೂರಾರು ಗಣ್ಯರು ಆಗಮಿಸಿದ್ದರು.

ಶಿವರಾಮ್ ಭಂಡಾರಿ ಸುಖಾಗಮನ ಬಯಸಿ ತನ್ನ ಮಾತೃಶಿ ಗುಲಾಬಿ ಕೃಷ್ಣ ಭಂಡಾರಿ ಮತ್ತು ಪತ್ನಿ ಅನುಶ್ರೀ ಶಿವರಾಮ ಭಂಡಾರಿ ಅವರನ್ನೊಳಗೊಂಡು ಅತಿಥಿüಗಳಿಗೆ ಶಾಲು ಹೊದಿಸಿ ಸತ್ಕರಿಸಿ ಅಭಿವಂದಿಸಿದರು.

ಈ ಸಂದರ್ಭ ಮಾ| ರೋಹಿಲ್ ಶಿವರಾಮ್, ಕು| ಆರಾಧ್ಯ ಶಿವರಾಮ್ ಸೇರಿದಂತೆ ಶಿವಾ'ಸ್ ಪರಿವಾರದ ಪೂರ್ವಿ ಖೆಡೆಕರ್, ರವಿ ಭಂಡಾರಿ, ರಾಘವ ಭಂಡಾರಿ, ರಾಕೇಶ್ ಭಂಡಾರಿ, ಶ್ವೇತಾ ಭಂಡಾರಿ ಮತ್ತಿತರ ಕರ್ಮಚಾರಿಗಳು ಉಪಸ್ಥಿತರಿದ್ದು, ಸರಿತಾ ಬಂಗೇರಾ ಅತಿಥಿsಗಳನ್ನು ಪರಿಚಯಿಸಿ ವಂದಿಸಿದರು.

ಸುಮಾರು 4,000 ಚದರ ಅಡಿ ವಿಸ್ತೀರ್ಣ ಸ್ಥಳಾವಕಾಶದಲ್ಲಿ ರೂಪಿಸಲ್ಪಟ್ಟ ಈ ಕೇಶಾಂಲಂಕಾರ ಗೃಹದಲ್ಲಿ ವಿಶ್ವಪ್ರಿಯ ಕೆರಸ್ಟಸೆ ಪ್ಯಾರಿಸ್ ಉತ್ಪನ್ನದ ಕ್ಷೌರ, ಉಗುರು, ಚಹರಾಂಕಾರ, ಫೇಶಿಯಲ್, ಪಾದೋಪಚಾರ, ಸ್ಟೀಮ್, ಕೇಶ ಬಣ್ಣಲಾಂಕರ, ಅಂಗಮರ್ಧನ (ಬೋಡಿ ಮಸಾಜ್), ದಂಪತಿಗಳಿಗಾಗಿ ಏಕಕಾಲದ ಅನೇಕಾನೇಕ ಸೇವೆಗಳು ಸೇರಿದಂತೆ ನೂರಾರು ಬಗೆಯ ಅತ್ಯಾಧುನಿಕ ಸೇವೆಯೊಂದಿಗೆ ಈ ವಿಲಾಸಿ ಸಲೂನ್ ಹೊಂದಿದೆ ಎಂದು ಶಿವರಾಮ್ ಭಂಡಾರಿ ತಿಳಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here