Saturday 10th, May 2025
canara news

ಅರ್ಥಪೂರ್ಣ ಹವ್ಯಾಸಗಳಿಂದ ವ್ಯಕ್ತಿತ್ವ ವಿಕಸನ

Published On : 13 Oct 2017   |  Reported By : media release


ಮೂಡುಬಿದಿರೆ: ಸ್ಥಳೀಯ ಆಳ್ವಾಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳ ವಾರ್ಷಿಕ ವಿಶೇಷ ಶಿಬಿರ ಅಶ್ವತ್ಥಪುರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿದೆ. ಇಂದು ತಾ.12-10-17 ರಂದು ಮಧ್ಯಾಹ್ನ ಶಿಬಿರಾರ್ಥಿಗಳಿಗೆ ನಡೆದ ವಿಶೇಷ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮೂಡುಬಿದಿರೆಯ ರಾಯೀ ರಾಜ ಕುಮಾರ್ ರು ಅರ್ಥಪೂರ್ಣ ಹವ್ಯಾಸಗಳಿಂದ ವ್ಯಕ್ತಿತ್ವ ವಿಕಸನದ ವಿವಿಧ ಹರಹುಗಳನ್ನು ತಿಳಿಯಪಡಿಸಿದರು. ಅರ್ಥಪೂರ್ಣ ಹವ್ಯಾಸಗಳಾದ ಚಿತ್ರಕಲೆ,ಅಂಚೆಚೀಟಿ,ನಾಣ್ಯ,ನೋಟು,ಸಂಗ್ರಹಣೆ,ಇತ್ಯಾದಿಗಳ ಬಗೆಗೆ ಪ್ರಾಯೋಗಿಕ ಮಾಹಿತಿಯನ್ನು ನೀಡಿದರು.

 

ಎನ್.ಎಸ್.ಎಸ್. ಶಿಬಿರದ ನಿರ್ವಾಹಕ,ಉಪನ್ಯಾಸಕ ಡಾ।ಸುಮಂತ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಎನ್. ಎಸ್. ಎಸ್. ವಿದ್ಯಾರ್ಥಿಗಳು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here