Saturday 10th, May 2025
canara news

ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ `ವರ್ತಮಾನಕ್ಕೆ ಸಲ್ಲುವ ಬಸವಣ್ಣ' ವಿಚಾರ ಸಂಕಿರಣ

Published On : 15 Oct 2017   |  Reported By : Rons Bantwal


ಬಸವಣ್ಣರನ್ನು ವಿಶ್ವವೇ ಅರ್ಥೈಸಿ ಕೊಂಡಿದೆ : ಡಾ| ಹೆಚ್.ಎಸ್ ಶಿವಪ್ರಕಾಶ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)


ಮುಂಬಯಿ, ಅ.15: ಬಸವ ಇಂಟರ್‍ನ್ಯಾಷನಲ್ ಫೌಂಡೇಷನ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಮೈಸೂರು ಅಸೋಸಿಯೇಶನ್ ಮುಂಬಯಿ ಹಾಗೂ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ `ವರ್ತಮಾನಕ್ಕೆ ಸಲ್ಲುವ ಬಸವಣ್ಣ' ವಿಚಾರ ಸಂಕಿರಣ ಕಾರ್ಯಕ್ರಮ ಇಂದಿಲ್ಲಿ ಭಾನುವಾರ ಪೂರ್ವಾಹ್ನ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್‍ನ ಸಭಾಗೃಹದಲ್ಲಿ ಆಯೋಜಿಸಿತ್ತು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಬಸವರಾಜ ಸಾದರ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಅತಿಥಿsಗಳಾಗಿ ಬಸವ ಇಂಟರ್‍ನ್ಯಾಷನಲ್ ಫೌಂಡೇಷನ್ ಅಧ್ಯಕ್ಷ ಎಸ್.ಮಹದೇವಯ್ಯ ಲಂಡನ್, ಉಪಸ್ಥಿತರಿದ್ದು ಜೆಎನ್‍ಯು ದೆಹಲಿ ಪ್ರಾಧ್ಯಾಪಕ ಡಾ| ಹೆಚ್.ಎಸ್ ಶಿವಪ್ರಕಾಶ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪೆÇ್ರ| ಎಸ್.ಜಿ ಸಿದ್ಧರಾಮಯ್ಯ ಅವರು `ಬಸವಣ್ಣ ಆತ್ಮವಿಮರ್ಶೆ' ವಿಚಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಬಸವಣ್ಣರು ಯಾವತ್ತೂ ದಿವಂಗತರಲ್ಲ. ಅವರು ಬುದ್ಧಿಜೀವಿಗಳ ಬದುಕು ಬೆಳಗಿಸಿದ ಧೀಶಕ್ತಿ ಆಗಿದ್ದಾರೆ. ಇತಿಹಾಸದ ಭಾಗವಾಗಲ್ಲದಿದ್ದರೂ ವರ್ತಮಾನದ ಭಾಗವಾಗಿ ಮನುಕುಲ ಸಂಕುಲಕ್ಕೆ ಮಾದರಿಯಾಗಿದ್ದಾರೆ. ಬಂಡಯೋತ್ತರರು ಕಂಡ ಬಸವಣ್ಣರು ಮೋದಿ ಕಂಡ ಬಸವಣ್ಣರೂ ಒಂದಾಗಿದೆ. ಅವರನ್ನು ವಿವಿಧ ರೀತಿಗಳಲ್ಲಿ ಕಂಡವರು ನಮ್ಮಲ್ಲಿದ್ದಾರೆ. ಆಳುವವನಿಗೆ ಮತ್ತು ಆಳಿಸಿಕೊಳ್ಳುವನು ಎಲ್ಲರಿಗೂ ಬಸವಣ್ಣ ಬೇಕಾದವರು. ಕಾರಣ ಇಡೀ ವಿಶ್ವ ಬಸವಣ್ಣರನ್ನು ಅರ್ಥ ಮಾಡಿಕೊಂಡಿದೆ. ಹಾಗಾಗಿ ಇಂದಿಗೂ ಬಸವಣ್ಣರು ಚಾಲ್ತಿಯಲ್ಲಿದ್ದಾರೆ. ಇದಕ್ಕೆ ಮಹಾರಾಷ್ಟ್ರ ಸರಕಾರ ಬಸವಣ್ಣರ ಭಾವಚಿತ್ರವನ್ನು ಎಲ್ಲ ಸರಕಾರಿ ಕಛೇರಿಗಳಲ್ಲಿರಿಸಲು ಆಜ್ಞೆ ಮಾಡಿರುವುದೇ ಅವರ ಆದರ್ಶದ ಸಾಕ್ಷಿ. ಇಂತಹ ಇತಿಹಾಸದ ಬಸವಣ್ಣರ ಬಾಳು ಸರ್ವರಿಗೂ ಮಾದರಿ ಎಂದು ಉದ್ಘಾಟನಾ ಭಾಷಣವನ್ನುದ್ದೇಶಿಸಿ ಡಾ| ಹೆಚ್.ಎಸ್ ಶಿವಪ್ರಕಾಶರು ಬಸವಣ್ಣರ ನುಡಿಮುತ್ತುಗಳನ್ನಾಡಿದರು.


ಕೆ.ವಿ ನಾಗರಾಜಮೂರ್ತಿ ಪ್ರಸ್ತಾವಿಕ ನುಡಿಗಳನ್ನಾಡಿ ಬಸವಣ್ಣರು ಜೀವನ ಕಾಲಕ್ಕಿಂತ ಹೆಚ್ಚು ಈ ಯುಗದಲ್ಲಿ ಪ್ರಸಿದ್ಧರಿದ್ದಾರೆ. ಅವರ ವಿಚಾರಧಾರೆ ಈ ನಾಡಿಗೆ ಅತ್ಯಂತ ಮುಖ್ಯ. ಅವರ ಬದುಕು ಸಮಯೋಚಿತವಾಗಿ ಚರ್ಚಿತವಾಗಿದೆ. ಸಮರಸ ಬಾಳಿನ ಕೇಂದ್ರ ಬಿಂದು ಬಸವಣ್ಣ ಆಗಿದ್ದು, ಇಂತಹ ಮಹಾನ್ ಚೇತನರ ನಡೆ ನುಡಿ ಪ್ರಸಕ್ತ ಸಮಾಜಕ್ಕೆ ಆದರಣೀಯದಾಗಬೇಕು. ಆದುದರಿಂದ ಇಂತಹ ಕಾರ್ಯಕ್ರಮಗಳಿಂದ ಅವರ ನೈಜ ವಿಚಾರಗಳ ಚರ್ಚೆಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ಬೆಳಗಾವಿ ಅಥಣಿ ಇಲ್ಲಿನ ಮೋಟಗಿ ಮಠದ ಡಾ| ಪ್ರಭು ಚೆನ್ನಬಸವ ಸ್ವಾಮೀಜಿ, ಮಹಾರಾಷ್ಟ್ರದ ಜ್ಯೋತಿಬಾ ಫುಲೆ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ| ಕೆ.ಪಿ ವಿಶ್ವನಾಥ್, ಮನೋಹರ್ ಎಂ. ಕೋರಿ, ಡಾ| ಭರತ್‍ಕುಮಾರ್ ಪೆÇಲಿಪು, ಡಾ| ಎಸ್.ಕೆ ಭವಾನಿ, ಬಿ.ಎಲ್ ಪಾಟೀಲ್, ಡಾ| ಮಮತಾ ರಾವ್, ಸುರೇಖಾ ಎಸ್.ದೇವಾಡಿಗ, ಎಂ.ಜಿ ಎಡವಡ್, ವಿಜಯಪುರ, ಜಂಬುನಾಥ ಕಾಂಚಣಿ, ಸುಗಂಧ ಸತ್ಯಮೂ ರ್ತಿ, ಕೆ.ಗೋವಿಂದ ಭಟ್, ಸುಬ್ರಯ್ಯ ಶಂಕರ್, ಡಾ| ಗಣಪತಿ ಶಂಕರಲಿಂಗ,ಶಿವಣ್ಣ ಎಂ.ವಕ್ಕರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


ತತ್ವದಲ್ಲಿ ಸತ್ಯವಿದ್ದರೆ ಅದು ಚಿರವಾಗಿರುತ್ತದೆ. ಇಂತಹ ಸಂದೇಶ ನೀಡದ ಬಸವಣ್ಣರು ಶ್ರೇಷ್ಠರು. ಭಕ್ತಿ ವಚನದಲ್ಲಿ ಅಮೃತ ಇದ್ದಂತಹ ಬಸವಣ್ಣರು ನುಡಿದಂತೆ ನಡೆದವರು. ಮನುಕುಲದ ಅರ್ಥಗರ್ಭಿತ ಬದುಕಿಗೆ ಜನಮನ ಮುಟ್ಟಿಸುವ ಸಂದೇಶ ಇವರದ್ದಾಗಿದೆ ಎಂದು ಮೈಸೂರು ಅಸೋಸಿಯೇಶನ್ ಮುಂಬಯಿ ಅಧ್ಯಕ್ಷೆ ಕಮಲ ವಚನವನ್ನಾಡಿ ಸ್ವಾಗತಿಸಿದರು.

ಬಸವಲಿಂಗಯ್ಯ ಹಿರೇಮಠ ಅವರ ವಚನ ಪ್ರಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ವೇದಿಕೆಯಲ್ಲಿ ಆಸೀನರಾಗಿದ್ದು ಮುಂಬಯಿ ವಿಶ್ವ ವಿದ್ಯಾಲಯ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಾಹಿಸಿ ವಂದಿಸಿದರು. ಅಲ್ಲಮ ಶಾಲಾ ವಿದ್ಯಾಥಿರ್sಗಳು ಜಾನಪದ ಕಲಾ ಪ್ರದರ್ಶನ ಪ್ರದರ್ಶಿಸಿದರು.

 

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here