Saturday 10th, May 2025
canara news

ಸಾಧಿಸಿದರೆ ಎಲ್ಲವೂ ಸಾಧ್ಯ ಎನ್ನುವುದಕ್ಕೆ ಸಾಕ್ಷಿ ಆಗಿದ್ದಾರೆ ರೋನ್ಸ್ ಬಂಟ್ವಾಳ್

Published On : 20 Oct 2017


ಮೂಡುಮಾರ್ನಾಡು ನಿವಾಸಿ ಅಮಿತಾ ರಾಜೇಶ್ ಕೋಟ್ಯಾನ್ ಅವರ ಏಕೈಕ ಗಂಡು ಮಗು ಜನಿಸಿದ ಕೆಲವು ದಿನಗಳ ಬಳಿಕ ಭಯಾನಕ ಖಾಯಿಲೆ ಯಿಂದ ಮಾಂಸದ ಮುದ್ದೆಯಂತೆ ಮಾರ್ಪಟ್ಟಿತ್ತು.

ಇದನ್ನರಿತ ದಂಪತಿ ಮಗುವಿಗೆ ಭವಿಷ್ಯವೇ ಇಲ್ಲವೆಂದು ಸಾಬೀತು ಪಡಿಸಿ ಕೊಂಡರೂ ಮಗುವಿನ ಆರೈಕೆಗಾಗಿ ಕಾಡಿಬೇಡಿ 8.5 ಲಕ್ಷ ಖರ್ಚು ಮಾಡಿ ಎಲ್ಲವನ್ನೂ ಕಳ ಕೊಂಡರು.

ಈ ಬಗ್ಗೆ ತೋನ್ಸೆ ಸಂಜೀವ ಪೂಜಾರಿ ಮುಖೇನ ತಿಳಿದ ರೋನ್ಸ್ ಬಂಟ್ವಾಳ್ ತಮ್ಮ ಸತತ ಪ್ರಯತ್ನದಿಂದ ತಜ್ಞರೋರ್ವರನ್ನು ಹುಡುಕಿ ಮಗುವಿಗ ಸೂಕ್ತ ಚಿಕಿತ್ಸೆ ನೀಡುವಲ್ಲಿ ಯಶಸ್ಸು ಕಂಡಿದ್ದಾರೆ.

ಇದೀಗ ಮಗುವಿನ ಆರೋಗ್ಯ ಸುಧಾರಣೆ ಆಗುತ್ತಿದ್ದು ಮಗು ಮತ್ತು ಪಾಲಕರಲ್ಲಿ ಲವಲವಿಕೆ ಮೂಡಿಸುವಂತಾಗಿದೆ. ಮಗು ಮತ್ತೆ ಎಲ್ಲಾ ಮಕ್ಕಳಂತೆ ಕುಣಿದಾಡಿ ಮನೆ ಬೆಳಕಾಗಿಸುಂತೆ ಆಗಿದ್ದು ಕೋಟ್ಯಾನ್ ಪರಿವಾರ ಮತ್ತೆ ದೇವರನ್ನು ಕಾಣುವಂತೆ ಆಗಿದೆ.

ರೋನ್ಸ್ ಬರೇ ಸಹಾಯ ಹಸ್ತ ಮಾತ್ರವಲ್ಲ ಅವರೊಂದಿಗೆ ಸಮಯವನ್ನೂ ಕಳೆದು ಸೇವಾ ನಿರತರಾಗ ಈ ಬಾರಿ (17,Oct) ಬಂಟ್ವಾಳ್ ಗೆಳೆಯರನ್ನು ಒಳಗೊಂಡು ಸದ್ದಿಲ್ಲದೆ ದೀಪಾವಳಿ ಆಚರಿಸಿದ್ದಾರೆ. ಸಾಧಿಸಿದರೆ ಎಲ್ಲವೂ ಸಾಧ್ಯ ಎನ್ನುವುದಕ್ಕೆ ಸಾಕ್ಷಿ ಆಗಿದ್ದಾರೆ. ಅಂದು (16,Aug.17) ಈ ಮಗು ಹೇಗಿತ್ತು ಮತ್ತು ಇಂದು ಅದೇ ಮಗು (17,Oct) 67% ಗುಣಮುಖ ಕಂಡಿದೆ. ಕಂಗಲಾಗಿ ಬದುಕು ತ್ಯಜಿಸಲು ಸಿದ್ಧವಾಗಿದ್ದ ಈ ಮಗುವಿನ ಕುಟುಂಬದಲ್ಲಿ ಬಾರೀ ಸಂತಸ ಮೂಡಿದೆ *ಗಣೇಶ್ ಪೂಜಾರಿ ಮೂಡಬಿದ್ರಿ*




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here