Saturday 10th, May 2025
canara news

ಅ.28: ಮಂಗಳೂರುನಲ್ಲಿ ತಾರಸಿ ತೋಟ ಕೃಷಿ ತರಬೇತಿ ಶಿಬಿರ

Published On : 23 Oct 2017   |  Reported By : Rons Bantwal


ಮುಂಬಯಿ. ಅ.23: ಮಂಗಳೂರು ಆಸುಪಾಸಿನ ಸಾರ್ವಜನಿಕರಿಗಾಗಿ ತಾರಸಿ ತೋಟ ಕೃಷಿ ತರಬೇತಿ ಶಿಬಿರವನ್ನು ಹೃದಯವಾಹಿನಿ ಕರ್ನಾಟಕ ಸಂಸ್ಥೆಯು 28.10.2017ನೇ ಶನಿವಾರ ಉರ್ವಸ್ಟೋರ್‍ನಲ್ಲಿ ಏರ್ಪಡಿಸಿರುತ್ತದೆ. ಶಿಬಿರದಲ್ಲಿ ನಿಮ್ಮ ಮನೆಯಲ್ಲಿ ಲಭ್ಯವಿರುವ ಜಾಗದಲ್ಲಿ ಸೊಪ್ಪು, ತರಕಾರಿಗಳನ್ನು, ಹಣ್ಣು ಹಂಪಲು ಹಾಗೂ ಔಷಧಿ ಗಿಡ, ಮರಗಳನ್ನು ಬೆಳೆಯಲು ಸಾಧ್ಯವೆಂಬುದನ್ನು ತಾರಸಿ ತೋಟ ಕೃಷಿ ತಜ್ಞ ಕೃಷ್ಣಪ್ಪ ಗೌಡ ಪಡ್ಡಂಬೈಲು ಅವರು ಶಿಬಿರಾಥಿರ್üಗಳಿಗೆ ತೋರಿಸಿ ಕೊಡಲಿದ್ದಾರೆ ಹಾಗೂ ಮನೆಯಲ್ಲಿ ದೊರೆಯುವ ತ್ಯಾಜ್ಯಗಳಿಂದ ಸಾವಯವ ಗೊಬ್ಬರವನ್ನು ತಯಾರಿಸುವ ಮಾಹಿತಿಯನ್ನು ನೀಡಲಿದ್ದಾರೆ.

ರಾಸಾಯನಿಕ ರಹಿತ ಹಣ್ಣು ಮತ್ತು ತರಕಾರಿಗಳನ್ನು ಮನೆಯಲ್ಲಿಯೇ ಬೆಳೆದು ಉಪಯೋಗಿಸುವುದರಿಂದ ಆರೋಗ್ಯ ವೃದ್ಧಿಗೆ ಹೆಚ್ಚು ಅನುಕೂಲವಾಗುತ್ತದೆ. ಸೀಮಿತ ಜನರಿಗೆ ಮಾತ್ರ ತರಬೇತಿ ಪಡೆಯಲು ಅವಕಾಶ ಇರುವುದರಿಂದ ಮೊದಲು ಹೆಸರು ನೊಂದಾಯಿಸಿ ಕೊಂಡವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಹೆಸರು ನೊಂದಾಯಿಸಲು ಕೊನೆಯ ದಿನಾಂಕ: 27.10.2017 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ 0824-4281531/ 9886510087

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here