Saturday 10th, May 2025
canara news

ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ ಆಗಿ ಹಾಸನದ ಸ್ನೇಹ

Published On : 24 Oct 2017   |  Reported By : Rons Bantwal


ಮಿಸ್ಟರ್ ಗ್ರಾಂಡ್ ಸೌತ್ ಇಂಡಿಯಾ ಆಗಿ ಬೆಂಗಳೂರಿನ ಕೌಶಲ್ ಚೌಧರಿ

ಜೆಪ್ಪಿನಮೊಗರುವಿನಲ್ಲಿ ಜರಗಿದ ಮಿಸ್ ಗ್ರೌಂಡ್ ಸೌತ್ ಇಂಡಿಯಾ-2017 ಸೌಂದರ್ಯ ಸ್ಪರ್ಧೆ

ಮಂಗಳೂರು: ದಕ್ಷಿಣ ಭಾರತ ಮಟ್ಟದಲ್ಲಿ ನಡೆಯುವ ಅತಿ ದೊಡ್ಡ ಸ್ಪರ್ಧೆಯಾಗಿರುವ , ಮಂಗಳೂರಿನ ಆಟ್ ್ ಬ್ಯಾಟಲ್ ಸಂಸ್ಥೆಯ ಮಿಸ್ಟರ್ ಆ್ಯಂಡ್ ಮಿಸ್ ಗ್ರೌಂಡ್ ಸೌತ್ ಇಂಡಿಯಾ-2017 ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ ಆಗಿ ಹಾಸನದ ಸ್ನೇಹ ಹಾಗೂ ಮಿಸ್ಟರ್ ಗ್ರಾಂಡ್ ಸೌತ್ ಇಂಡಿಯಾ ಆಗಿ ಬೆಂಗಳೂರಿನ ಕೌಶಲ್ ಚೌಧರಿ ವಿಜೇತರಾಗಿದ್ದಾರೆ.

ಜೆಪ್ಪಿನಮೊಗರು ರಿವರ್ ಡೇಲ್ ನಲ್ಲಿ ಇತ್ತೀಚೆಗೆ ನಡೆದ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಬೆಂಗಳೂರು, ತೆಲಂಗಾಣ, ಆಂಧ್ರ, ಗೋವಾ ಕೇರಳ ಹಾಗೂ ತಮಿಳುನಾಡಿನಿಂದ ಭಾಗವಹಿಸಿದ್ದ ಸ್ಪರ್ಧಿಗಳಲ್ಲಿ ಇವರು ಆಯ್ಕೆಯಾಗಿದ್ದಾರೆ.

ಉಳಿದಂತೆ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾದ ಮೊದಲ ರನ್ನರ್ ಅಪ್ ಆಗಿ ಮಂಗಳೂರಿನ ಬಿಂದು ಶೆಟ್ಟಿ, ಎರಡನೇ ರನ್ನರ್ ಅಪ್ ಆಗಿ ಮಂಗಳೂರಿನ ಆಶಿಕಾ, ಮೂರನೇ ರನ್ನರ್ ಅಪ್ ಆಗಿ ಹುಬ್ಬಳ್ಳಿಯ ಅಕ್ಷತಾ ಹಾಗೂ ಮಿಸ್ಟರ್ ಗ್ರಾಂಡ್ ಸೌತ್ ಇಂಡಿಯಾದ ಮೊದಲ ರನ್ನರ್ ಅಪ್ ಆಗಿ ಬೆಂಗಳೂರಿನ ಸ್ಟೀಫನ್ ಮತ್ತು ಚಂದ್ರು, ಬೆಂಗಳೂರಿನ ಕಾರ್ತಿಕ್ ದ್ವಿತೀಯ ರನ್ನರ್ ಅಪ್ ಆದರೆ ಮತ್ತೆ ಬೆಂಗಳೂರಿನ ಸಂಜಯ್ ಮತ್ತು ಹರ್ಷ ಕಿರಣ್ ಮೂರನೇ ರನ್ನರ್ ಅಪ್ ಆಗಿ ಆಯ್ಕೆಗೊಂಡಿದ್ದಾರೆ.

ಮುಖ್ಯ ಅತಿಥಿಗಳಾಗಿ ಸ್ಯಾಂಡಲ್ ವುಡ್‍ನ ನಿರ್ದೇಶಕ ಕಿರಣ್ , ಸ್ಟೂಡೆಂಟ್ ಚಿತ್ರದ ನಾಯಕನಟ ಸಚಿನ್, ಉದ್ಯಮಿ ಅರ್ಜುನ್, ತೊಕ್ಕೊಟ್ಟು ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಕಲ್ ಸೈನ್ಸ್ ಕಾಲೇಜು ಇದರ ನಿರ್ದೇಶಕ ಹಾಗೂ ಪ್ರಾಂಶುಪಾಲ ಅಸ್ಖಾನ್ ಶೇಖ್, ಫ್ಯಾಷನ್ ಡಿಸೈನರ್ ಸುನಿಲ್, ರೂಪದರ್ಶಿಗಳಾದ ವೈಷ್ಣವಿ, ಶ್ರೇಯಸ್, ಕಾರ್ಯಕ್ರಮದ ಮೇಕ್‍ಓವರ್ ಪಾಲುದಾರ ಬಾಬ್ ಉದಯ್, ಅಂತರಾಷ್ಟ್ರೀಯ ರೂಪದರ್ಶಿ ಹಾಗೂ ಆರ್ಟ್ ಬ್ಯಾಟಲ್ ಸಂಸ್ಥೆಯ ಸಿಇಓ ನಿತಿನ್ ಕೆ.ಎನ್ ಉಪಸ್ಥಿತರಿದ್ದರು.

ತೊಕ್ಕೊಟ್ಟು ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಕಲ್ ಸೈನ್ಸ್ ಇದರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here