Saturday 5th, July 2025
canara news

ಮಂಗಳೂರು ಏರ್ಪೋಟ್ನಲ್ಲಿ ಅಕ್ರಮ ಚಿನ್ನಸಾಗಾಟ, ಓರ್ವನ ಬಂಧನ

Published On : 25 Oct 2017   |  Reported By : canaranews network


ಮಂಗಳೂರು: ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.ಸುಮಾರು 1 ಕೆ.ಜಿ ತೂಕದ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದು, ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಕಾಸರಗೋಡು ನಿವಾಸಿ ರಫೀಕ್ ಮೊಯಿದೀನ್ (36) ಬಂಧಿತ .

ಈತ ತನ್ನ ಎರಡೂ ಕಾಲಿನ ಉದ್ದಕ್ಕೂ ಚಿನ್ನದ ಪುಡಿ ತುಂಬಿದ್ದ ಪ್ಲಾಸ್ಟಿಕ್ ಕವರನ್ನು ಗಮ್ ಮೂಲಕ ಅಂಟಿಸಿಕೊಂಡಿದ್ದ. ಯಾರಿಗೂ ಅನುಮಾನವೇ ಬಾರದ ರೀತಿಯಲ್ಲಿ ಸಿನಿಮೀಯ ಶೈಲಿಯಲ್ಲಿ ಚಿನ್ನ ಸಾಗಿಸುವ ಪ್ರಯತ್ನ ಈತ ನಡೆಸಿದ್ದ ಎಂದು ಹೇಳಲಾಗಿದೆ.ಆದರೆ ವಿಮಾನ ನಿಲ್ದಾಣದಲ್ಲಿ ರಫೀಕ್ ಮೊಯಿದ್ದೀನ್ ನಡವಳಿಕೆ ಕಸ್ಟಮ್ಸ್ ಅಧಿಕಾರಿಗಳಲ್ಲಿ ಅನುಮಾನ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ರಫೀಕ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ತನಿಖೆಗೆ ಒಳಪಡಿಸಿದರು.

ಈ ಸಂದರ್ಭದಲ್ಲಿ ಅಕ್ರಮ ಚಿನ್ನ ಸಾಗಾಟದ ಈತನ ತಂತ್ರ ಬಯಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ 31,31,689 ರೂಪಾಯಿ ಮೌಲ್ಯದ 1.58 ಕಿಲೋ ಗ್ರಾಂ ತೂಕದ ಚಿನ್ನ ವಶಪಡಿಸಿಕೊಂಡಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here