Tuesday 5th, August 2025
canara news

ಮಾದಕ ವಸ್ತು ಮಾರಾಟ ಪ್ರಮಾಣ ಹೆಚ್ಚಳ; ದ.ಕ.ಜಿಲ್ಲೆಯಾದ್ಯಂತ ನಿಗಾ

Published On : 25 Oct 2017   |  Reported By : canaranews network


ಮಂಗಳೂರು: ಮಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಹೆಚ್ಚುತ್ತಿದೆ. ಮಾದಕ ದ್ರವ್ಯಗಳನ್ನು ಹದಿ ಹರೆಯದ ಮಕ್ಕಳಿಗೆ ಸರಬರಾಜು ಮಾಡುವ ಜಾಲವು ಅವ್ಯಾಹತವಾಗಿರುವುದು ಕಂಡು ಬರುತ್ತಿದೆ ಎಂದು ದ.ಕ.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.ಇದನ್ನು ತಡೆಗಟ್ಟಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಮಕ್ಕಳಿಗೆ ಅಮಲು ಬರಿಸುವ ಮದ್ಯಸಾರ ಮಾದಕ ವಸ್ತು ಅಥವಾ ಇನ್ನಿತರ ದ್ರವ್ಯಗಳನ್ನು ನೀಡಿದ್ದಲ್ಲಿ ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ 2015 ಸೆಕ್ಷನ್ 77 ರಂತೆ 7 ವರ್ಷಗಳ ತನಕ ಕಠಿನ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ.ವರೆಗೆ ದಂಡ ಹಾಗೂ ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ 2015 ಸೆಕ್ಷನ್ 78ರಂತೆ ಅಮಲು ಬರಿಸುವ ಮಾದಕ ವಸ್ತುಗಳ ಮಾರಾಟ, ಸಾಗಣೆ ಅಥವಾ ಕಳ್ಳ ಸಾಗಾಣಿಕೆಯಲ್ಲಿ ಮಕ್ಕಳನ್ನು ಬಳಸಿದ್ದಲ್ಲಿ 7 ವರ್ಷಗಳ ಕಾರಾಗೃಹ ಸಜೆ ಹಾಗೂ 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here