Saturday 10th, May 2025
canara news

ಶಿಸ್ತು ಬದ್ಧತೆಗೆ ಕಲ್ಲಡ್ಕ ಶ್ರೀ ರಾಮ ವಿದ್ಯಾಸಂಸ್ಥೆ ಮಾದರಿ: ಚಿತ್ರನಟಿ ಅಮೂಲ್ಯ

Published On : 29 Oct 2017   |  Reported By : Rons Bantwal


ಮುಂಬಯಿ (ಕಲ್ಲಡ್ಕ), ಅ.29: ಅಳಿಸಿ ಹೋಗುವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮತ್ತು ಕೃಷಿ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಕೆಲಸವನ್ನು ಕಲ್ಲಡ್ಕ ಶ್ರೀ ರಾಮ ವಿದ್ಯಾ ಸಂಸ್ಥೆಯ ವಿದ್ಯಾಥಿರ್üಗಳು ಮಾಡುತ್ತಿರುವುದು ದೇಶಕ್ಕೆ ಮಾದರಿ ಎಂದು ಖ್ಯಾತ ಚಲನಚಿತ್ರ ನಟಿ ಅಮೂಲ್ಯ ಹೇಳಿದರು. ಅವರು ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದಲ್ಲಿ ವಸುಧಾರ ಗೋಶಾಲೆಯಲ್ಲಿ ನಡೆದ ಗೋಪೂಜೆಯಲ್ಲಿ ಭಾಗವಹಿಸಿ ಬಳಿಕ ಶಿಶು ಮಂದಿರದ ಸೀತಾ ಕುಟೀರದ ಉದ್ಘಾಟನೆ ನೆರವೇರಿಸಿ, ಮಹೇಂದ್ರ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ನಡೆದ ಸಭಾಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಈ ಶಿಕ್ಷಣ ಸಂಸ್ಥೆಯಿಂದ ನಾನು ಕಲಿತು ಕೊಳ್ಳಲು ಬಹಳಷ್ಟು ಇದೆ. ವಿದ್ಯಾ ಕೇಂದ್ರ ನೋಡಿ ಬಹಳಷ್ಟು ಖುಷಿ ತಂದಿದೆ. ಇಲ್ಲಿನ ಸಂಸ್ಕಾರಯುತವಾದ ಶಿಕ್ಷಣ ರಾಜ್ಯಕ್ಕೆ ಪಸರಿಸಲಿ ಮತ್ತು ಮುಖ್ಯವಾಗಿ ಬೆಂಗಳೂರು ನಗರಕ್ಕೆ ಸಂಸ್ಕಾರದ ಶಿಕ್ಷಣ ಅಗತ್ಯವಿದೆ ಎಂದರು.

ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾವರ್ಧಕ ಸಂಘದ ಅದ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಸಾಧನೆಯನ್ನು ಮಾಡುವ ವಿಧ್ಯಾಥಿರ್üಗಳನ್ನು ತಯಾರು ಮಾಡುವ ಶಿಕ್ಷಣ ಸಂಸ್ಥೆಗಳು ಬೇಕಾಗಿದೆ. ಮಗುವನ್ನು ಧರ್ಮ ಸಂಸ್ಕ್ರತಿಯ ಜೊತೆಗೆ ಪರಿವರ್ತನೆ ಮಾಡುವ ಕೆಲಸ ಶಿಕ್ಷಣ ಈ ಸಂಸ್ಥೆಯಿಂದ ಮಾಡಲಾಗುತ್ತಿದೆ. ಮಣ್ಣಿನ ಸತ್ವವನ್ನು ಮತ್ತು ಜೀವನದ ಉದ್ದೇಶವನ್ನು ತಿಳಿಸುವ ವಿಶಿಷ್ಠವಾದ ಶಿಕ್ಷಣವನ್ನು ವಿದ್ಯಾಕೇಂದ್ರದಲ್ಲಿ ನೀಡಲಾಗುತ್ತಿದೆ. ಸರಕಾರದಲ್ಲಿ ಮತ್ತೆ ಅನ್ನಕ್ಕಾಗಿ ಭಿಕ್ಷೆ ಬೇಡುವ ಕೆಲಸಕ್ಕೆ ಹೋಗುವುದಿಲ್ಲ. ಈ ದೇಶದ ಮಣ್ಣಿನ ಸಂಸ್ಕ್ರತಿ, ಚಿಂತನೆ, ಅಧಾರದ ಮೇಲೆ ಸ್ವಾಭಿಮಾನದಿಂದ ಬದುಕುವುದನ್ನು ಈ ಸಂಸ್ಥೆ ಕಲಿಸಿಕೊಡುತ್ತದೆ, ಐದು ಕಿಂಟ್ವಾಲ್ ಅಕ್ಕಿ ಈ ಬಾರಿ ಶಾಲೆಯ ಗದ್ದೆಯಲ್ಲಿ ಬೆಳೆಯಲಾಗಿದೆ ಅಮೂಲಕ ಅನ್ನ ಕಸಿದ ಸರ್ಕಾರಕ್ಕೆ ಸಂದೇಶ ನೀಡಲಾಗಿದೆ ಎಂದರು.

ವೇದಿಕೆಯಲ್ಲಿ ಅಮೂಲ್ಯರ ಪತಿ, ಉದ್ಯಮಿ ಜಗದೀಶ್, ಬೆಂಗಳೂರು ಲಹರಿ ಕಂಪೆನಿ ಮಾಲಕ ಜಿ.ವೇಲು, ಉದ್ಯಮಿ ರಾಮಚಂದ್ರ, ಬೆಂಗಳೂರು ಮಹಿಳಾ ಮೋರ್ಚಾದ ಅದ್ಯಕ್ಷೆ ಸುನೀತಾ ಮಂಜುನಾಥ, ಮೈಸೂರಿನ ಸುಬ್ರಹ್ಮಣ್ಯ ತಂತ್ರಿ, ಎಸ್.ಸಿ ಮೋರ್ಚಾದ ಉಪಾಧ್ಯಕ್ಷ ಮುರಳಿಮೋಹನ್, ವಕೀಲರಾದ ಗಿರೀಶ್, ಹಾಲೂರಿನ ಪತ್ರಕರ್ತ ಎಚ್.ವಿ ಪ್ರಥ್ವಿ , ಬ್ಯಾಡಗಿ ಕ್ಷೇತ್ರದ ಬಿಜೆಪಿ ಮುಖಂಡ ಬಾಲಚಂದ್ರ ಎಸ್ ಪಾಟೀಲ. ಸಕಲೇಶಪುರದ ಬಿಜೆಪಿ ಮುಂಖಂಡ ಹೇಮಂತ್ ಕುಮಾರ್, ಬಿಜಾಪುರದ ಪಿಎಸ್‍ಐ ಮಹೇಂದ್ರ ನಾಯಕ್, ತಿಪಟೂರು ಕ್ಷೇತ್ರದ ಬಿಜೆಪಿ ಮುಖಂಡ ಕೆ.ಟಿ ಶಾಂತಕುಮಾರ್, ಧಾರವಾಡದ ಮಾಜಿ ಮೇಯರ್ ಶಿವು ಹಿರೆಮಠ, ಶಿವರೂರು ಪಿ.ಎಲ್.ಡಿ ಬ್ಯಾಂಕ್‍ನ ಅಧ್ಯಕ್ಷ ಶಿವಯೋಗಿ, ದಿನಕರ್ಜೋಶಿ, ನಿಕೇಶ್ ಸಕಲೇಶಪುರ, ಸುನಿಲ್ ಕುಲಕರ್ಣಿ,ಮೈಸೂರು ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ಮಂಗಳೂರು ವಿಕಾಸ ಕಾಲೇಜಿನ ಸಲಹೆಗಾರ ಅನಂತ ಪ್ರಭು, ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಅದ್ಯಕ್ಷ ನಾರಾಯಣ ಸೋಮಾಯಾಜಿ, ಸಂಚಾಲಕ ವಸಂತ ಮಾಧÀವ, ಪದ್ಮನಾಭ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.

ಆಶಾ ಪ್ರಸಾದ್ ರೈ ಸ್ವಾಗತಿಸಿದರು. ಮಲ್ಲಿಕಾ ಶೆಟ್ಟಿ ವಂದಿಸಿದರು. ರಾಜೀವಿ ಕಾರ್ಯಕ್ರಮ ನಿರೂಪಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here