Saturday 10th, May 2025
canara news

ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ಅಸ್ತಿತ್ವಕ್ಕೆ ಸಂಸ್ಮರಣಾ ಕಾರ್ಯಕ್ರಮ-ಟ್ರಸ್ಟ್ ಕಚೇರಿ ಉದ್ಘಾಟನೆ-ವಿದ್ಯಾನಿಧಿ ವಿತರಣೆ

Published On : 30 Oct 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.30: ಕುಂದಾಪುರ ನಾವುಂದ ಅಲ್ಲಿನ ಕಿರಿಮಂಜೇಶ್ವರ ಮೂಲದವರಾಗಿದ್ದು ಮುಂಬಯಿ ಕನ್ನಡ ಸಂಘ, ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕ, ಜಿ.ಡಿ ಜೋಶಿ ಪ್ರತಿಷ್ಠಾನ, ಮುಂಬೆಳಕು, ಮುಂಬಯಿ ಚುಕ್ಕಿ ಸಂಕುಲ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಕಳೆದ ಸುಮಾರು ಎರಡುವರೆ ದಶಕಗಳಿಂದ ಸಕ್ರೀಯರಾಗಿ ಸೇವ ನಿರತ ಹೆಸರಾಂತ ಸಂಘಟಕ, ಬರಹಗಾರ ಸ್ವರ್ಗಸ್ಥ ಚಂದ್ರಶೇಖರ್ ರಾವ್ ಸಂಸ್ಮರಣಾ ಕಾರ್ಯಕ್ರಮ ಮತ್ತು ಅವರ ಸ್ಮರಣಾರ್ಥ ಅಸ್ತಿತ್ವಕ್ಕೆ ತರಲಾದ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ಸೇವಾರ್ಪಣೆ ಮತ್ತು ಟ್ರಸ್ಟ್ ಕಚೇರಿ ಉದ್ಘಾಟನೆ ಇಂದಿಲ್ಲಿ ಶನಿವಾರ ಸಂಜೆ ಭಾಂಡೂಪ್ ಪಶ್ಚಿಮದ ಉಷಾನಗರ ಅಪಾರ್ಟ್‍ಮೆಂಟ್‍ನಲ್ಲಿ ನಡೆಸಲ್ಪಟ್ಟಿತು.

ಶ್ರೀದೇವಿ ಸಿ.ರಾವ್ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತ ಉದ್ಯಮಿ, ಸಮಾಜ ಸೇವಕ ವೆಂಕಟೇಶ್ ಸರಾಫ್ ಅವರು ದೀಪ ಪ್ರಜ್ವಲಿಸಿ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್‍ಗೆ ಚಾಲನೆಯನ್ನಿತ್ತರು ಹಾಗೂ ನಗರದಾದ್ಯಂತದ ಆಥಿರ್üಕವಾಗಿ ಹಿಂದುಳಿದ ಮಕ್ಕಳಿಗೆ ಚಂದ್ರಶೇಖರ್ ರಾವ್ ಸ್ಮರಣಾರ್ಥ ವಿದ್ಯಾನಿಧಿ ವಿತರಿಸಿದರು.

ಚಂದ್ರಶೇಖರ್ ಅವರ ಪತ್ನಿ ಶ್ರೀದೇವಿ ಕಳೆದ 6 ತಿಂಗಳಲ್ಲಿ ತಮ್ಮ ದುಃಖವನ್ನು ನುಂಗಿಕೊಂಡು ಪತಿ ಅವರ ಇಚ್ಛೆಯಂತೆ ಈ ಟ್ರಸ್ಟ್‍ನ್ನು ಸ್ಥಾಪಿಸಿರುವುದು ಅವರ ಆತ್ಮಕ್ಕೆ ಸಲ್ಲಿಸುತ್ತಿರುವ ನಿಜವಾದ ಶ್ರದ್ಧಾಂಜಲಿ ಎಂದು ಸರಾಫ್ ಅಭಿಪ್ರಾಯ ಪಟ್ಟರು.

ಈ ಟ್ರಸ್ಟ್ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಅವರ ಅಗಲಿಕೆಯ ನೋವು ಒಂದು ಮುಖವಾದರೆ ಅವರ ಇಚ್ಛೆಯಂತೆ ಬಡ ವಿದ್ಯಾಥಿರ್sಗಳ ಅಂಗವಿಕಲರ ವೃದ್ಧರ ಸೇವೆಯಲ್ಲಿ ತೊಡಗಿಸಿಕೊಳ್ಳುವ ಇದರ ಕಾರ್ಯ ಇನ್ನೊಂದು ಮುಖ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಶ್ರೀದೇವಿ ರಾವ್ ತಿಳಿಸಿದರು.

ಡಾ| ಕೆ.ರಘುನಾಥ್, ಡಾ| ಗಿರಿಜಾ ಶಾಸ್ತ್ರಿ, ಗೋಪಾಲ ತ್ರಾಸಿ, ನವೀನ್ ಕದ್ರಿ, ಸಜ್ಜನ್ ಬೆಂಗಳೂರು, ಡಾ| ವಾಣಿ ಉಚ್ಚಿಲ್ಕರ್, ಕೃಷ್ಣ ಪೂಜಾರಿ ಮತ್ತು ಅರುಷಾ ಎನ್.ಶೆಟ್ಟಿ ಅವರು ಚಂದ್ರಶೇಖರ್ ರಾವ್ ಅವರ ವಿವಿಧ ಸ್ತರಗಳ ಸೇವೆಯನ್ನು ನೆನಪಿಸಿದರು. ರಾವ್ ತಮ್ಮ ಜೀವಿತಾವಧಿಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದ ಸಂಘಸಂಸ್ಥೆಗಳ ಸದಸ್ಯರು, ಬಂಧು-ಮಿತ್ರರು ಉಪಸ್ಥಿತರಿದ್ದು ರಾವ್ ಅವರ ಸಾಹಿತ್ಯ, ಕಲೆ, ಸಂಸ್ಕೃತಿ, ಸಂಘಟನೆಗಳ ಸಮಾಜಮುಖಿ ಕೆಲಸಗಳನ್ನು ಶ್ಲಾಘಿಸಿ ಸ್ಮರಿಸಿದರು.

ನಾಟಕಕಾರ ಸಾ.ದಯಾ (ದಯಾನಂದ್ ಸಾಲ್ಯಾನ್) ಸ್ವಾಗತಿಸಿ ಪ್ರಸ್ತಾವನೆಗೈದÀು ಕಾರ್ಯಕ್ರಮ ನಿರೂಸಿ ವಂದಿಸಿದÀರು.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here