Saturday 10th, May 2025
canara news

ಬಂಟ್ಸ್ ಸಂಘ ಮುಂಬಯಿ ಯುವ ವಿಭಾಗ ಆಯೋಜಿಸಿದ್ದ ಆಕಾಂಕ್ಷ-2017

Published On : 03 Nov 2017   |  Reported By : Rons Bantwal


ಶ್ರೇಯಸ್ ಶೆಟ್ಟಿ `ಮಿಸ್ಟರ್ ಬಂಟ್'- ರೋಶ್ನಿ ಶೆಟ್ಟಿ`ಮಿಸ್ ಬಂಟ್'
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, : ಬಂಟ್ಸ್ ಸಂಘ ಮುಂಬಯಿ ಇದರ ಯುವ ವಿಭಾಗವು ಮಾತೃಭೂಮಿ ಕೋ.ಅಪರೇಟಿವ್ ಸೊಸೈಟಿ ಲಿಮಿಟೆಡ್ ಸಹಯೋಗದಿಂದ ಆಯೋಜಿಸಿರುವ ಆಕಾಂಕ್ಷ-2017 ಸ್ಪರ್ಧೆಯಲ್ಲಿ ಉಡುಪಿ ಮೂಡು ಪೆರಪಳ್ಳಿ ಮೂಲದ ಶ್ರೇಯಸ್ ಎಸ್. ಶೆಟ್ಟಿ `ಮಿಸ್ಟರ್ ಬಂಟ್' ಹಾಗೂ ಪಡುಬೆಟ್ಟು ಮೂಲದ ರೋಶ್ನಿ ಸಿ.ಶೆಟ್ಟಿ `ಮಿಸ್ ಬಂಟ್' ಜಯಶೀಲರಾಗಿ ಕಿರೀಟ ಮುಡಿಗೇರಿಸಿ ಕೊಂಡರು.

ಕಳೆದ ಶನಿವಾರ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಡಾ| ಪ್ರಭಾಕರ ಎಲ್.ಶೆಟ್ಟಿ ಅಧ್ಯಕ್ಷತೆ ಮತ್ತು ಯುವ ವಿಭಾಗಧ್ಯಕ್ಷ ವಿವೇಕ್‍ವಿ.ಶೆಟ್ಟಿ ಸಾರಥ್ಯದಲ್ಲಿ ಜರುಗಿದ ವಾರ್ಷಿಕ ಆಕಾಂಕ್ಷ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ಬಿಜೆಪಿ ನೇತಾರೆ, ಸಂಸದ ಸದಸ್ಯೆ ಪೂನಂ ಮಹಾಜನ್, ಗೌರವ ಅತಿಥಿüಗಳಾಗಿ ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಯಾನೆ ನಾಡವರ ಸಂಘ ಹೆಬ್ರಿ ಮುನಿಯಾಳ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಳ, ಸ್ಟಾರ್ ಬ್ಲೋಗರ್ ಸಾಮಾಜಿಕ ಮಾಧ್ಯಮದ ಸಂತೋಷಿ ಶೆಟ್ಟಿ, ಮಾತೃಭೂಮಿ ಸೊಸೈಟಿ ಕಾರ್ಯಾಧ್ಯಕ್ಷ ಸಿಎ| ಶಂಕರ್ ಬಿ.ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಯುವ ವಿಭಾಗದ ಸ್ಥಾಪಕಾಧ್ಯಕ್ಷ, ಬಾಲಿವುಡ್ ನಟ ಹರೀಶ್ ವಾಸು ಶೆಟ್ಟಿ ಅವರನ್ನು ಸನ್ಮಾನಿಸಿದರು ಹಾಗೂ ಸ್ಪರ್ಧಿಗಳಿಗೆ ಶುಭಾರೈಸಿದರು.

ಬಂಟ್ಸ್ ಸಂಘದ ಉಪಾಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಐ.ಆರ್ ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್‍ಕುಮಾರ್ ಶೆಟ್ಟಿ ಕುತ್ಯಾರ್, ಜತೆ ಕೋಶಾಧಿಕಾರಿ ಮಹೇಶ್ ಎಸ್.ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ಲತಾ ಜಯರಾಮ ಶೆಟ್ಟಿ ವೇದಿಕೆಯಲ್ಲಿದ್ದು ಯುವ ವಿಭಾಗಕ್ಕೆ ಅಭಿನಂದಿಸಿದÀರು.

ಅತಿಥಿüಗಳು ಹಾಗೂ ಪ್ರಾಯೋಜಕರು ವಿಜೇತರಿಗೆ ಕಿರೀಟ ತೊಡಸಿ ಪುಷ್ಫಗುಪ್ಚ, ಸ್ಮರಣಿಕೆ, ನಗದು ಪ್ರದಾನಿಸಿ ಅಭಿನಂದಿಸಿದರು. ಬಂಟ್ಸ್ ಸಂಘದ ಉಪಾಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಐ.ಆರ್ ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್‍ಕುಮಾರ್ ಶೆಟ್ಟಿ ಕುತ್ಯಾರ್, ಜತೆ ಕೋಶಾಧಿಕಾರಿ ಮಹೇಶ್ ಎಸ್.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿ ಕಾರ್ಯಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಉಪ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಮತ್ತಿತರ ಪದಾಧಿಕಾರಿಗಳು ಕಾರ್ಯಕ್ರಮ ಸಂಯೋಜಕರು, ಪ್ರಾಯೋಜಕರು, ಪೆÇ್ರೀತ್ಸಾಹಕರನ್ನು ಗೌರವಿಸಿದರು.

ಮುಚ್ಚೂರು ಕೈದ್‍ಮಾರುಗುತ್ತು ಆದಿತ್ಯ ದಿನೇಶ್ ಶೆಟ್ಟಿ `ಮಿಸ್ಟರ್ ಬಂಟ್' ಪ್ರಥಮ ರನ್ನರ್ , ಪೆರ್ಣ ದೊಡ್ಡಮನೆ ಗಣೇಶ್ ಜಯಂತ್ ಶೆಟ್ಟಿ ದ್ವಿತೀಯ ರನ್ನರ್ ಸ್ಥಾನ ಮತ್ತು ಶ್ರೇಯಸ್ ಎಸ್. ಶೆಟ್ಟಿ ಅವರೇ ಮಿಸ್ಟರ್ ಪೆÇಪ್ಯುಲರ್ ಸ್ಥಾನಕ್ಕೆ ಪಾತ್ರರಾದರು. ಪುತ್ತಿಗೆಗುತ್ತು ಕಡಂದಲೆ ಪರಾರಿ ಮೂಡುಜೆಪ್ಪು ಭೂಮಿ ಧನೇಶ್ ಶೆಟ್ಟಿ `ಮಿಸ್‍ಬಂಟ್' ಪ್ರಥಮ ರನ್ನರ್, ಸರ್ವೆ ಮೇಗಿನಗುತ್ತು ಸ್ನೇಹ ರತ್ನಾಕರ್ ರೈ ದ್ವಿತೀಯ ರನ್ನರ್ ಹಾಗೂ ನಿರೀಕ್ಷಾ ಶೆಟ್ಟಿ ಮಿಸ್ ಪೆÇಪ್ಯುಲರ್ ಸ್ಥಾನ ವಿಜೇತರಾದರು.

ಯುವ ವಿಭಾಗಧ್ಯಕ್ಷ ವಿವೇಕ್ ವಿ.ಶೆಟ್ಟಿ ಸ್ವಾಗತಿಸಿದರು. ಯುವ ವಿಭಾಗದ ಉಪ ಕಾರ್ಯಾಧ್ಯಕ್ಷ ನವೀನ್ ವಿ.ಶೆಟ್ಟಿ ಮಿಜಾರು, ಗೌ|ಕೋಶಾಧಿಕಾರಿ ಸುಶಾಂತ್ ಎಸ್.ಶೆಟ್ಟಿ, ಜತೆ ಕಾರ್ಯದರ್ಶಿ ಧೀರಾಜ್ ಎಸ್.ಶೆಟ್ಟಿ, ಜತೆ ಕೋಶಾಧಿಕಾರಿ ಶರತ್ ವಿ.ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಮತ್ತಿತರರು ಸಹಯೋಗವನ್ನಿತ್ತರು. ದಕ್ಷಾ ಶೆಟ್ಟಿ, ಪ್ರತೀಕ್ ಶೆಟ್ಟಿ ಮತ್ತು ಸಾಹೀಲ್ ರೈ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅಕಾಂಕ್ಷಾ ಸ್ಪರ್ಧೆ ನಿರ್ವಾಹಿಸಿದರು. ಜಯ ಎ.ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿದರು. ಬಂಟರವಾಣಿ ಮಾಸಿಕದ ಸಂಪಾದಕ ಅಶೋಕ್ ಪಕ್ಕಳ ಸಭಾ ಕಾರ್ಯಕ್ರಮ ನಿರೂಪಿಸಿದರು. ಯುವ ವಿಭಾಗದ ಪ್ರ| ಕಾರ್ಯದರ್ಶಿ ಶ್ರೀಮಾ ಆರ್.ಶೆಟ್ಟಿ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here