Sunday 11th, May 2025
canara news

ಸಾಮಾಜಿಕ ಜಾಲತಾಣದಲ್ಲಿ ಕಟೀಲು ದುರ್ಗೆಗೆ ಅವಹೇಳನ, ಫೇಸ್ ಬುಕ್ ನಲ್ಲಿ ಕಿಡಿ

Published On : 04 Nov 2017   |  Reported By : Canaranews network


ಮಂಗಳೂರು : ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಿಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಅವಹೇಳನ ಮಾಡಲಾಗಿದೆ.ಜಬ್ಬಾರ್ ಮಂಗಳೂರು ಎನ್ನುವ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಶ್ರೀ ರಾಮ, ಸೀತೆ, ಕಟೀಲು ದುರ್ಗಾಪರಮೇಶ್ವರಿ, ಸ್ವಾಮಿ ಕೊರಗಜ್ಜ ಸೇರಿದಂತೆ ಎಲ್ಲಾ ಹಿಂದೂ ದೇವಿ-ದೇವರುಗಳ ವಿರುದ್ಧ ಅತ್ಯಂತ ಕೀಳುಮಟ್ಟದ ಅಸಹ್ಯಕರ ಭಾಷೆ ಬಳಸಿ ಪೋಸ್ಟ್ ಗಳನ್ನು ಹಾಕಲಾಗಿದೆ.

ಈ ಹಿನ್ನೆಲೆಯಲ್ಲಿ ಈ ಫೇಸ್ಬುಕ್ ಖಾತೆಯ ವಿರುದ್ಧ ಹಾಗೂ ಅದನ್ನು ನಿರ್ವಹಿಸುತ್ತಿರುವ ಜಬ್ಬಾರ್ ಮಂಗಳೂರು ಎಂಬ ವ್ಯಕ್ತಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.ಈ ಹಿಂದೆ ಜಬ್ಬಾರ್ ಬಿ.ಸಿ ರೋಡ್ ಎನ್ನುವ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿಯ ಬಗ್ಗೆ ಅವಹೇಳನಕಾರಿ ಬರಹ ಪೋಸ್ಟ್ ಮಾಡಲಾಗುತ್ತು. ಇದರಿಂದ ಕೆರಳಿದ್ದ ಹಿಂದೂ ಸಂಘಟನೆಗಳು ರಸ್ತೆಗಿಳಿದು ಹೋರಾಟ ನಡೆಸಿದ್ದವು.

ಈ ಪ್ರಕರಣದ ವಿರುದ್ಧ ಪ್ರತಿಭಟನೆಗಳ ಕಾವು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ, ಜಬ್ಬಾರ್ ಬಿ.ಸಿ ರೋಡ್ ಫೇಸ್ಬುಕ್ ಖಾತೆಯ ವಿರುದ್ಧ ತನಿಖೆ ಆರಂಭಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಿದೀನ್ ಹಾಗೂ ಶಫಿ ಎಂಬುವವರನ್ನು ಬಂಧಿಸಲಾಗಿತ್ತು.ಇದೀಗ ಮತ್ತೆ ಜಬ್ಬಾರ್ ಮಂಗಳೂರು ಎನ್ನುವಾತ ಫೇಸ್ಬುಕ್ ಖಾತೆಯಲ್ಲಿ ದೇವಿ ದುರ್ಗಾಪರಮೇಶ್ವರಿ, ಸ್ವಾಮಿ ಕೊರಗಜ್ಜ, ಶ್ರೀರಾಮ ಹಾಗೂ ಸೀತಾ ದೇವಿಯನ್ನು ಅತ್ಯಂತ ಅಶ್ಲೀಲ ಪದಗಳ ಮೂಲಕ ಅವಹೇಳನಕಾರಿಯಾಗಿ ಬರಹ ಪ್ರಕಟಿಸಿದ್ದಾನೆ. ಈತನ ಕಮೆಂಟ್ ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here