Sunday 11th, May 2025
canara news

ವೃದ್ಧ ದಂಪತಿಗೆ ನೆರವಾಗಿ ಮಾನವೀಯತೆ ಮೆರೆದ ಸಚಿವ ಯುಟಿ ಖಾದರ್

Published On : 04 Nov 2017   |  Reported By : Canaranews network


ಮಂಗಳೂರು : ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ ಖಾದರ್ ತಮ್ಮ ಕ್ಷೇತ್ರದ ಅಶಕ್ತ ವೃದ್ಧ ದಂಪತಿಗಳಿಗೆ ನೆರವಾಗಿ ಮಾನವೀಯತೆ ಮೆರೆದ್ದಾರೆ.

ಸಚಿವ ಯು.ಟಿ.ಖಾದರ್ ತಮ್ಮ ಕ್ಷೇತ್ರದ ಸೋಮೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಪಲಗೆ ಭೇಟಿ ನೀಡಿದ್ದ ವೇಳೆ ವಯೋ ವೃದ್ದ ದಂಪತಿಗೆ ರೇಶನ್ ಕಾರ್ಡ್ ಮಾಡಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇತ್ತೀಚೆಗೆ ಕುಂಪಲ ಪರಿಸರದಲ್ಲಿ ರಸ್ತೆ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಅಮೃತ ನಗರದ ಬಳಿ ಸಚಿವರ ಕಾರನ್ನು ಕಂಡು ಕುಂಟುತ್ತಾ ಬಂದ 79 ವರ್ಷ ಪ್ರಾಯದ ಯಶವಂತ ಆಚಾರಿ ಅವರನ್ನು ನೋಡಿ ಸಚಿವರು ತಮ್ಮ ಕಾರನ್ನು ನಿಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ತನ್ನ ಅಳಲನ್ನು ತೋಡಿಕೊಂಡ ಯಶವಂತ ಆಚಾರಿ, ತನ್ನ ಬಳಿ ರೇಶನ್ ಕಾರ್ಡ್ ಇಲ್ಲ, ಜೀವನ ನಡೆಸಲು ಕಷ್ಟವಾಗಿದೆ. ತನ್ನ ಪತ್ನಿ ಪಾರ್ಶ್ವವಾಯು ಪೀಡಿತೆ. ಆದ್ದರಿಂದ ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಆಹಾರ ಸಚಿವ ಯು.ಟಿ.ಖಾದರ್ ವೃದ್ಧ ದಂಪತಿಗಳ ಅಳಲನ್ನು ಆಲಿಸಿ ತಮ್ಮ ಆಪ್ತರಿಗೆ ಈ ವಯೋ ವೃದ್ದ ದಂಪತಿಗಳ ಮನೆಗೆ ತೆರಳಿ ರೇಶನ್ ಕಾರ್ಡ್ ಮಾಡಿ ಕೊಡಲು ತಿಳಿಸಿದರು.

ಈ ಸಂದರ್ಭದಲ್ಲಿ ಮನೆಯಲ್ಲಿ ದಂಪತಿಗಳ ಬೆರಳಚ್ಚು ಪಡೆಯಲು ಸಾದ್ಯವಾಗದಿದ್ದಾಗ. ಸಚಿವರ ಆಪ್ತರು ತಮ್ಮದೇ ವಾಹನದಲ್ಲಿ ದೇರಳಕಟ್ಟೆಯ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ರೇಶನ್ ಕಾರ್ಡ್ ಮಾಡಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಈ ವೃದ್ಧ ದಂಪತಿಗೆ ಸರಕಾರದಲ್ಲಿ ಸಿಗುವ ಅನಿಲ ಬಾಗ್ಯ ಯೋಜನೆಯಲ್ಲಿ ಗ್ಯಾಸ್ ನೀಡುವ ಭರವಸೆಯನ್ನು ಖಾದರ್ ನೀಡಿದರು. ರೇಶನ್ ಕಾರ್ಡ್ ದೊರೆಯುತ್ತಿದ್ದಂತೆ ವೃದ್ಧ ದಂಪತಿ ಬಾವುಕರಾಗಿ ಆಹಾರ ಸಚಿವ ಯು.ಟಿ.ಖಾದರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಇತ್ತ ಖಾದರ್ ಅವರ ಮಾನವೀಯತೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here