Sunday 11th, May 2025
canara news

ಗುಜರಾತ್‍ನಲ್ಲಿ ತುಳು ಸಂಘ ಬರೋಡ ವತಿಯಿಂದ ನಾಲ್ಕು ಯಕ್ಷಗಾನ ಕಲಾವಿದರಿಗೆ ಸನ್ಮಾನ

Published On : 04 Nov 2017   |  Reported By : Rons Bantwal


ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಗುಜರಾತ್ ಘಟಕದಿಂದ ಮೂರು ಮನೆಗಳ ಕೊಡುಗೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಬರೋಡ (ಗುಜರಾತ್), ನ.04: ಗುಜರಾತ್ ರಾಜ್ಯದ ಬರೋಡ ನಗರದ ಗುಜರಾತ್ ರಿಫೈನರಿ ಟೌನ್‍ಶಿಪ್ ಅಲ್ಲಿನ ಸ್ಪಂದನ್ (ಕಮ್ಯೂನಿಟಿ) ಸಭಾಗೃಹದಲ್ಲಿ ಕಳೆದ ಗುರುವಾರ ರಾತ್ರಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರÀ ಗುಜರಾತ್ ರಾಜ್ಯ ಘಟಕ ಉದ್ಘಾನಾ ಸಮಾರಂಭದಲ್ಲಿ ತುಳು ಸಂಘ ಬರೋಡ ಪರÀವಾಗಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ರಾಧಾಕೃಷ್ಣ ನಾವುಡ, ಸೀತಾರಾಮ ಕುಮಾರ ಕಟೀಲು, ಪದ್ಮನಾಭ ಉಪಾಧ್ಯ ಇವರನ್ನು ಗಣ್ಯರು ಸನ್ಮಾನಿಸಿ ಅಭಿನಂದಿಸಿದರು. ಅಂತೆಯೇ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‍ನ ಗುಜರಾತ್ ಘಟಕದ ಪರವಾಗಿ ಅಂಕ್ಲೇಶ್ವರ್, ಸೂರತ್, ಬರೋಡ ವಿಭಾಗಗಳಿಂದ ಮೂರು ಮನೆಗಳ ಕೊಡುಗೆ ಆಗಿಸಿ ಮೊತ್ತದ ಚೆಕ್‍ನ್ನು ಟ್ರಸ್ಟ್‍ನ ಸಂಸ್ಥಾಪಕಾಧ್ಯಕ್ಷ, ಯಕ್ಷಚಕ್ರೇಶ್ವರ ಸತೀಶ್ ಶೆಟ್ಟಿ ಪಟ್ಲ ಅವರಿಗೆ ಹಸ್ತಾಂತರಿಸಿ ಸನ್ಮಾನಿಸಿ ಶುಭಾರೈಸಿದರು.

ತುಳು ಸಂಘ ಬರೋಡ ಇದರ ಗೌರವಾಧ್ಯಕ್ಷ ಕಲ್ಲಾಡಿ ಶ್ರೀ ಕೊರಗ ಶೆಟ್ಟಿ ಮತ್ತು ಶ್ರೀ ವಿಠಲ ಶೆಟ್ಟಿ ಪ್ರತಿಷ್ಠಾನ ಇರಾ ಮಂಗಳೂರು ಇದರ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಗುಜರಾತ್ ಬಿಲ್ಲವರ ಸಂಘದ ಸ್ಥಾಪಕ ರೂವಾರಿ ಪ್ರಸಕ್ತ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಗೌರವ ಅತಿಥಿüಗಳಾಗಿ ಉದ್ಯಮಿಗಳಾದ ರಾಧಾಕೃಷ್ಣ ಶೆಟ್ಟಿ ಸೂರತ್, ರಾಮಚಂದ್ರ ವಿ.ಶೆಟ್ಟಿ ಸೂರತ್, ಅಪ್ಪು ಶೆಟ್ಟಿ ಅಹ್ಮದಾಬಾದ್, ಬಾಲಕೃಷ್ಣ ಶೆಟ್ಟಿ ಬರೋಡ, ರವಿನಾಥ್ ಶೆಟ್ಟಿ, ಶಂಕರ್ ಶೆಟ್ಟಿ ಅಂಕ್ಲೇಶ್ವರ್, ಮನೋಜ್ ಸಿ.ಪೂಜಾರಿ ಸೂರತ್, ಡಾ| ಶರ್ಮಿಳಾ ಎಂ.ಜೈನ್ ಬರೋಡ, ಸೂರತ್‍ನ ಹೊಟೇಲ್ ಉದ್ಯಮಿ ಶಿವರಾಮ ಶೆಟ್ಟಿ ಸೂರತ್, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ| ಸುದೇಶ್ ಕುಮಾರ್ ರೈ, ಟ್ರಸ್ಟ್‍ನ ಗುಜರಾತ್ ಘಟಕದ ಅಧ್ಯಕ್ಷ ಅಜಿತ್ ಶೆಟ್ಟಿ ಅಂಕ್ಲೇಶ್ವರ್, ಪ್ರಮೀಳಾ ಶಶಿಧರ್ ಶೆಟ್ಟಿ, ಸುಜತಾ ದಿನಕರ್ ಶೆÉಟ್ಟಿ, ದಯಾನಂದ್ ಸಾಲ್ಯಾನ್ ಬರೋಡ, ತುಳು ಸಂಘದ ವಾಸು ಪಿ.ಸುವರ್ಣ, ಎಸ್‍ಕೆ ಹಳೆಯಂಗಡಿ, ಮದನ್‍ಕುಮಾರ್ ಗೌಡ, ಬಾಲಕೃಷ್ಣ ಎ.ಶೆಟ್ಟಿ, ಇಂದುದಾಸ್ ಶೆಟ್ಟಿ, ಕುಶಲ್ ಶೆಟ್ಟಿ, ರಂಜನಿ ಪ್ರವೀಣ್ ಶೆಟ್ಟಿ ಸೂರತ್, ರಾಧಾಕೃಷ್ಣ ಮೂಲ್ಯ, ಶಾಂತಾರಾಮ ಶೆಟ್ಟಿ ಸೂರತ್ ಮತ್ತಿತರ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‍ನ ಅಹ್ಮದಾಬಾದ್, ಬರೋಡಾ, ಸೂರತ್, ಅಂಕ್ಲೇಶ್ವರ್ ವಿಭಾಗಗಳ ಮುಖ್ಯಸ್ಥರು, ತುಳು ಸಂಘ ಬರೋಡಾ ಮತ್ತು ಕರ್ನಾಟಕ ಸಮಾಜ ಗುಜರಾತ್ ರಿಫೈನರಿ ಬರೋಡಾ, ಇನ್ನಿತರ ಸಂಸ್ಥೆಗಳ ಪ್ರತಿನಿಧಿಗಳು, ರಾಕೇಶ್ ಪೂಂಜಾ, ರವಿಚಂದ್ರ ಶೆಟ್ಟ್, ಸತೀಶ್ ಶೆಟ್ಟಿ ಎಕ್ಕಾರು, ಪ್ರಸನ್ನ ಮಂಗಳೂರು, ಅಶ್ವಿತ್ ಶೆಟ್ಟಿ, ಲೋಕೇಶ್ ಭರಣಿ, ದುರ್ಗಾಪ್ರಸಾದ್ ಈರೋಡ್, ಉಮೇಶ್ (ಇನ್‍ಲ್ಯಾಂಡ್) ಮಂಗಳೂರು, ಕರ್ನಾಟಕಸಂಘ ಬರೋಡಾ ಇದರ ಸಿ.ಮಹೇಂದ್ರ ಬರೋಡ, ಡಿ.ನರಸಿಂಹ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗುಜರಾತ್ ಘಟಕದ ಪ್ರಧಾನ ಸಂಘಟಕ ಹಾಗೂ ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆ ಗೈದರು. ಕು| ವೈಷ್ಣವಿ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್‍ನ ಗುಜರಾತ್ ಘಟಕದ ಗೌ| ಪ್ರ| ಕಾರ್ಯದರ್ಶಿ ವಿಶಾಲ್ ಸಾಂತ ಧನ್ಯವದಿಸಿದರು.

ಕಾರ್ಯಕ್ರಮದ ಅಂಗವಾಗಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರು ಪಟ್ಲ ಸತೀಶ್ ಶೆಟ್ಟಿ ಪ್ರಧಾನ ಭಾಗವತಿಕೆಯಲ್ಲಿ `ಶನೀಶ್ವರ ಮಹಾತ್ಮೆ' ಯಕ್ಷಗಾನ ಪ್ರದರ್ಶಿಸಿಸಲ್ಪಟ್ಟಿತು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here