Sunday 11th, May 2025
canara news

ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಗೆ ಸಿಎಂ ಚಾಲನೆ

Published On : 05 Nov 2017   |  Reported By : Canaranews network   |  Pic On: Photo credit-The Hindu


ಮಂಗಳೂರು:ದ.ಕ. ಜಿಲ್ಲೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಇಂಡಿಯನ್ ಕರಾಟೆಯ ರಾಷ್ಟ್ರೀಯ ಮುಕ್ತ ಚಾಂಪಿಯನ್ ಶಿಪ್ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದಿದ್ದು, ಸಿಎಂ ಸಿದ್ಧರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ತಮ್ಮ ಮೇಲೆ ನಡೆಯುವ ದೌರ್ಜನ್ಯವನ್ನು ಮೆಟ್ಟಿನಿಲ್ಲಲು ಸಮರಕಲೆಯನ್ನು ಯುವತಿಯರು ಕಲಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಈ ನಡುವೆ ಸಿದ್ದರಾಮಯ್ಯ ಅವರು ಮಂಗಳೂರು ಮೇಯರ್ ಕವಿತಾ ಸನಿಲ್ ಅವರೊಂದಿಗೆ ಕರಾಟೆ ಆಡಿದರು.ನ್ಯಾಷನಲ್ ಚಾಂಪಿಯನ್ ಮೇಯರ್ ಕವಿತಾ ಸನಿಲ್ ಮೊದಲು ಸಿಎಂಗೆ ಕರಾಟೆ ಪಂಚ್ ನೀಡಿ ಗಮನ ಸೆಳೆದರು. ಮೇಯರ್ ನೀಡಿದ ಪಂಚ್ ಗೆ ತಿರುಗೇಟಾಗಿ ಸಿದ್ದರಾಮಯ್ಯ ಕೂಡ ಪಂಚ್ ಕೊಟ್ಟು ನೆರೆದಿದ್ದವರ ಗಮನ ಸೆಳೆದರು. ಇನ್ನು, ಐತಿಹಾಸಿಕ ಟೂರ್ನಿಗೆ ಸಾವಿರಾರು ಜನ ಸಾಕ್ಷಿಯಾಗಿದ್ದು, ರಾಜ್ಯದ ವೇಗದ ಚಿತ್ರ ಬಿಡಿಸುವ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶಬರಿ ಗಾಣಿಗ ಅವರ ಚಿತ್ರ ಎಲ್ಲರ ಗಮನ ಸೆಳೆಯಿತು.

ಕರಾಟೆ ಹಬ್ಬಕ್ಕೆ ಸಿಎಂ ಚಾಲನೆ ಕೊಟ್ಟು ಇನ್ನೇನು ಅಲ್ಲಿಂದ ತೆರಳಬೇಕು ಅನ್ನುವಷ್ಟರಲ್ಲಿ ಶಬರಿ ಗಾಣಿಗ ಅವರ ಕುಂಚದಲ್ಲಿ ಅರಳಿದ ಕಲಾಕೃತಿ ಸಿಎಂ ಕಣ್ಣಿಗೆ ಬಿತ್ತು. ತಕ್ಷಣ ಕಾರ್ಯಕ್ರಮ ಮುಗಿಸಿ ಹಿಂದಿರುಗಿದ್ದ ಸಿಎಂ ಮತ್ತೇ ಹಿಂದೆ ಬಂದು ಶಬರಿ ಗಾಣಿಗ ಅವರ ಚಿತ್ರಕಲೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here