Saturday 10th, May 2025
canara news

ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಪ್ರಶಸ್ತಿ ಪ್ರದಾನ ಸಮಾರಂಭ

Published On : 06 Nov 2017   |  Reported By : Rons Bantwal


ರಾಷ್ಟ್ರದ ಭವಿಷ್ಯಕ್ಕೆ ಸಾಧಕ ಉದ್ಯಮಿಗಳ ಸಹಯೋಗ ಅತ್ಯವಶ್ಯ: ಸಂಸದ ಗೋಪಾಲ ಶೆಟ್ಟಿ
(ಚಿತ್ರ / ವರದಿ : ರೊನ್ಸ್ ಬಂಟ್ವಾಳ್)

ಮುಂಬಯಿ, ನ.05: ರಾಷ್ಟ್ರದ ಭವ್ಯ ಭವಿಷ್ಯಕ್ಕಾಗಿ ತಮ್ಮಂತಹ ಉದ್ಯಮಶೀಲರ, ಸಾಧಕ ಉದ್ಯಮಿಗಳ ಸಹಯೋಗ ಅತ್ಯವಶ್ಯ ಆಗಿದೆ. ಪ್ರಧಾನಿ ಮೋದಿ ಅವರ ಆಶಯವೂ ಅದೇ ಆಗಿದೆ. ಈ ಮೂಲಕವೇ ಡಿಜಿಟಲ್ ಇಂಡಿಯಾ ಸಾಧ್ಯವಾಗುವುದು. ಭಾರತದಲ್ಲಿ ಪಕ್ಷಕ್ಕಿಂತ ಭಾರತೀಯತೆಯೇ ಮಿಗಿಲಾಗಿದ್ದು. ಮೋದಿ ಅವರ ಇಂತಹ ಆಶಯಕ್ಕೆ ಬದ್ಧರಾಗಿ ದೇಶದ ಹಿತಕ್ಕಾಗಿ ಏಕತೆಯಿಂದ ಶ್ರಮಿಸೋಣ ಎಂದು ಬೋರಿವಿಲಿ ಲೋಕಸಭಾ ಸದಸ್ಯ ಗೋಪಾಲ ಸಿ.ಶೆಟ್ಟಿ ನುಡಿದರು.

ಇಂದಿಲ್ಲಿ ಭಾನುವಾರ ಅಂಧೇರಿ ಪೂರ್ವದ ಹೊಟೇಲ್ ಕೊಹಿನೂರು ಕಾಂಟಿನೆಂಟಲ್‍ನ ಸಭಾಗೃಹದಲ್ಲಿ ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‍ನ (ಸಿಸಿಸಿಐ) ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ ಅಧ್ಯಕ್ಷತೆಯಲ್ಲಿ ಜರುಗಿಸಲಾದ ಸಿಸಿಸಿಐ-2017ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ಪುರಸ್ಕಾರ ಪ್ರಾಯೋಜಕರನ್ನು ಒಳಗೊಂಡು ಆಯ್ದ ಗಣ್ಯರಿಗೆ ಪುರಸ್ಕಾರ ಪ್ರದಾನಿಸಿ ಗೋಪಾಲ ಶೆಟ್ಟಿ ಮಾತನಾಡಿದರು.

ಸಂಸದ ಗೋಪಾಲ ಶೆಟ್ಟಿ ಮತ್ತು ಅತಿಥಿs ಅಭ್ಯಾಗತರುಗಳಾಗಿ ಉಪಸ್ಥಿತ ರೆ| ಫಾ| ಸ್ಟೇಫನ್ ಫೆರ್ನಾಂಡಿಸ್ ಮತ್ತು ಸಮಾಜ ಸೇವಕ ಝೇವಿಯರ್ ಬ್ರಿಟ್ಟೊ ಅವರು ಸಿಸಿಸಿಐನ ಇಲೆಕ್ಟ್ರೋಪೆನೆಮೆಟಿಕ್ಸ್ ಎಂಡ್ ಹೈಡ್ರಾಲಿಕ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದ ಉತ್ಕೃಷ್ಟ ಸಾಧಕ ಉದ್ಯಮಿ ಪುರಸ್ಕಾರವನ್ನು ಬ್ರಿಲಿಯಂಟ್ ಪ್ರಿಂಟರ್ಸ್‍ನ ಅನಿಲ್ ರೆಗೋ ಮಂಗಳೂರು ಅವರಿಗೆ, ವೆಲ್‍ವಿನ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದ ಸಮಾಜ ಸೇವಾ ಪುರಸ್ಕಾರವನ್ನು ಎರಿಕ್ ಆಲ್ಫ್ರೇಡ್ ಕೊರೆಯಾ ಅವರಿಗೆ, ರಿಲಾಯಬಲ್ ಎಕ್ಸ್‍ಪೆÇೀರ್ಟ್ಸ್ ಪ್ರಾಯೋಜಕತ್ವದ ಉತ್ಕೃಷ್ಟ ಶೈಕ್ಷಣಿಕ ಸಾಧನಾ ಪುರಸ್ಕಾರವನ್ನು ವಿವೇಕ್ ಅರಾನ್ಹಾ ಪುಣೆ ಅವರಿಗೆ, ಡೇನಿಯಲ್ ಎಂಡ್ ಸನ್ಸ್ ಪ್ರಾಯೋಜಕತ್ವದ ಸಾರ್ವಜನಿಕ ಸೇವಾ ಪುರಸ್ಕಾರವನ್ನು ನಿವೃತ್ತ ನ್ಯಾಯಧೀಶ ಅಲೋಶಿಯಸ್ ಎಸ್.ಅಗೇರಾ ಅವರಿಗೆ, ಪಟಥು ಬ್ರದರ್ಸ್ ಪ್ರಾಯೋಜಕತ್ವದ ಮಹಿಳಾ ಉದ್ಯಮಿ ಸಾಧಕ ಪುರಸ್ಕಾರವನ್ನು ಕಾರ್ಮಿಣ್ ಡಿ'ಸೋಜಾ ಅವರಿಗೆ ಮತ್ತು ಆಲ್ಡೇಲ್ ಎಜ್ಯುಕೇಶನ್ ಟ್ರಸ್ಟ್ ಪ್ರಾಯೋಜಕತ್ವದ ಯುವ ಉದ್ಯಮಿ ಸಾಧಕ ಪುರಸ್ಕಾರವನ್ನು ನವೀನ್ ಅರನ್ಹಾ ಅವರಿಗೆ ಪ್ರದಾನಿಸಿ ಶುಭಾರೈಸಿದರು.

ಇದೇ ಶುಭಾವಸರದಲ್ಲಿ ರೋನಾಲ್ಡ್ ನೊರೋನ್ಹಾ ನಿರ್ದೇಶಕತ್ವದ ಅರೋಕಿಯಾ ಸಂಸ್ಥೆ ರಚಿಸಿದ ಆ್ಯಪ್‍ನ್ನು ಅನಾವರಣ ಗೊಳಿಸಲಾಯಿತು. ರೂಬೆನ್ ಬುಥೆಲೋ ಆ್ಯಪ್‍ನ ಮಾಹಿತಿಯನ್ನಿತ್ತರು. ಅತಿಥಿsಗಳು ಮತ್ತು ಪುರಸ್ಕೃತರು ಸಂದರ್ಭೋಚಿತವಾಗಿ ಮಾತನಾಡಿ ಸಿಸಿಸಿಐಗೆ ಅಭಿವಂದಿಸಿದರು. û

ಸಿಸಿಸಿಐ ಸಂಸ್ಥಾಪಕ ಕಾರ್ಯಾಧ್ಯಕ್ಷ ವಿನ್ಸೆಂಟ್ ಮಥಾಯಸ್, ಮಾಜಿ ಕಾರ್ಯಾಧ್ಯಕ್ಷ ಹೆನ್ರಿ ಲೊಬೋ, ಪುರಸ್ಕಾರ ಸಮಿತಿ ಸಂಚಾಲಕ ಜಾನ್ ಡಿ'ಸಿಲ್ವಾ, ಉಪ ಕಾರ್ಯಾಧ್ಯಕ್ಷರಾದ ಆಲ್ಬರ್ಟ್ ಡಬ್ಲ್ಯೂ.ಡಿ'ಸೋಜಾ ಮತ್ತು ಜೋನ್ ಮಾಥ್ಯು ಪುರಸ್ಕೃತರನ್ನು ಪರಿಚಯಿಸಿ ಅಭಿನಂದಿಸಿದರು. ಜೀನ್ ಎ.ಸಿಕ್ವೇರಾ, ಗ್ಲೇಡಿಸ್ ಡಿ'ಸಿಲ್ವಾ, ಮತ್ತು ಪ್ರಮೀಳಾ ವಿ.ಮಥಾಯಸ್ ಅತಿಥಿüಗಳಿಗೆ ಪುಷ್ಫಗುಪ್ಚ ನೀಡಿ ಗೌರವಿಸಿದರು. ನ್ಯಾ| ಪಿಯೂಸ್ ವಾಸ್, ಜಾನ್ ಡಿ'ಸಿಲ್ವಾ, ಲೊರೆನ್ಸ್ ಕುವೆಲ್ಲೊ, ವಾಲ್ಟರ್ ಬುಥೆಲೋ, ಜಾನ್ ಮಾಥ್ಯು, ಜಾನ್‍ಸನ್ ಥೆರಟಿಲ್ ಸನ್ಮಾನ ಪತ್ರ ವಾಚಿಸಿದರು.

ಸಮಾರಂಭದಲ್ಲಿ ಸಿಸಿಸಿಐ ನಿರ್ದೇಶಕರು, ವಿವಿಧ ಉಪ ಸಮಿತಿಗಳ ಸಂಚಾಲಕರುಗಳು ಸೇರಿದಂತೆ ಇತರ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದು, ಪರ್ಲ್ ಪ್ರೇಮ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ಆಗ್ನೇಲ್ಲೋ ರಾಜೇಶ್ ಅಥೈಡೆ ಧನ್ಯವದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here