Saturday 10th, May 2025
canara news

ಅಂತರ್ರಾಜ್ಯ ಕುಖ್ಯಾತ ಚೋರರ ಬಂಧನ

Published On : 12 Nov 2017   |  Reported By : Canaranews network


ಮಂಗಳೂರು: ಅಂತರ್ ರಾಜ್ಯ ಕುಖ್ಯಾತ ಚೋರರ ತಂಡವೊಂದನ್ನು ಕಾರ್ಕಳ ಎಎಸ್ಪಿ ಋಷಿಕೇಶ್ ನೇತೃತ್ವದ ಪೊಲೀಸರ ತಂಡವು ಕಾರ್ಕಳದ ಮೂರು ಮಾರ್ಗ ಎಂಬಲ್ಲಿ ಶನಿವಾರ ನಸುಕಿನ ಜಾವದಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಪೂನಾದ ಮಂಜರಿ(೩೭), ಕೋಮಲ(೩೫), ಸಂದೀಪ್ ಜಾದವ್(೨೭), ಪ್ರಕಾಶ್ ಲಾಲ್ ಸಿಂಗ್ ಸಾಳುಂಕೆ(೬೦), ವಿದ್ಯಾ ಪ್ರಕಾಶ್ ಸಾಳುಂಕೆ(೫೦) ಕಲ್ಪನಾ ಕುನಾಲ್ ರಾತೋಡ್(೨೭) ಎಂಬವರಾಗಿದ್ದಾರೆ. ಪೂನಾದ ಮಂಜರಿ(೩೭), ಕೋಮಲ(೩೫), ಸಂದೀಪ್ ಜಾದವ್(೨೭) ಎಂಬವರು ಕಾರ್ಕಳ ನಗರದ ಆಭರಣ ಜುವೆಲ್ಲರಿ ಶೋ ರೂಂ ನಲ್ಲಿ ನಡೆದ ಹಾಡು ಹಗಲೇ ಕಳವು ಪ್ರಕರಣದಲ್ಲಿ ಭಾಗಿಯಾಗಿ ಆರೋಪಿಗಳಾಗಿದ್ದಾರೆ.2017 ಜೂನ್ 12ರ ಸಂಜೆ 4.15 ರ ವೇಳೆಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಆರೋಪಿಗಳು ಸಿಬ್ಬಂದಿಯ ಗಮನವನ್ನು ಬೇರೆಡೆಗೆ ಸೆಳೆದಯುವಂತೆ ಮಾಡಿ ರೂ. 2,35,000 ಮೌಲ್ಯದ ಚಿನ್ನಾಭರಣವನ್ನು ಎಗರಿಸಿ ಹೋಗಿದ್ದರು.

ರಾತ್ರಿ ವ್ಯಾಪಾರ ಕೇಂದ್ರ ಮುಚ್ಚುವ ಹಂತದಲ್ಲಿ ಅಭರಣಗಳ ಲೆಕ್ಕಚಾರದ ಸಂದರ್ಭದಲ್ಲಿ ಕಳವು ಆಗಿರುವ ಅಂಶ ಬೆಳಕಿಗೆ ಬಂದಿತ್ತು. ಘಟನೆ ಬಗ್ಗೆ ಎಲ್ಲಾ ಮಾಹಿತಿ ಅಲ್ಲಿನ ಸಿಸಿ ಕೆಮರಾಗಳು ಸೆರೆ ಹಿಡಿದಿರುವುದರಿಂದ ಆರೋಪಿಗಳ ಮುಖಛಾಯೆ ಹಾಗೂ ಆರೋಪಿಗಳು ಬಂದಿದ್ದ ಎಂಹೆಚ್ 12 ಡಿಎಸ್-4912 ನಂಬ್ರದ ಸ್ಕಾರ್ಪಿಯೋ ಜೀಪನ್ನು ಪತ್ತೆ ಹಚ್ಚಲು ಸಾಧ್ಯವಾಗಿತ್ತು.ಘಟನೆ ನಡೆದ ಕೆಲವೇ ಗಂಟೆಗಳೊಳಗಾಗಿ ಮೂಡಬಿದ್ರಿ ಠಾಣಾ ವ್ಯಾಪ್ತಿಯ ಚಿನ್ನದ ಅಂಗಡಿಯೊಂದರಲ್ಲಿ ಗ್ರಾಹಕರ ರೀತಿಯಲ್ಲಿ ತೆರಳಿ ರೂ.80,000 ಮೌಲ್ಯದ 2 ಚಿನ್ನದ ಬಳೆಗಳನ್ನು ಎಗರಿಸಿಕೊಂಡು ಹೋಗಿರುವ ಬಗ್ಗೆ ಮೂಡಬಿದ್ರಿ ಠಾಣೆಯಲ್ಲಿ ಕೇಸುದಾಖಲಾಗಿತ್ತು.ಆರೋಪಿಗಳಿಂದ ನಗ-ವಗದು ವಶಕ್ಕೆ ಎಎಸ್ಪಿ ಋಷಿಕೇಶ್ ನೇತೃತ್ವದ ಪೊಲೀಸರು ಮೂರು ಮಾರ್ಗದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬಂದಿದ್ದ ಎಂಹೆಚ್ 12 ಡಿಎಸ್-4912 ನಂಬ್ರದ ಸ್ಕಾರ್ಪಿಯೋ ಜೀಪನ್ನು ತಡೆದು ತಪಾಸಣೆ ಗುರಿಪಡಿಸಲು ಮುಂದಾಗಿದ್ದ ಸಂದರ್ಭದಲ್ಲಿ ಜೀಪಿನಲ್ಲಿದ್ದವರ ಪೈಕಿ ಓರ್ವ ಪಲಾಯನಕ್ಕೆ ಮುಂದಾದಾಗ ಪೊಲೀಸರಿಗೆ ಅನುಮಾನ ಮೂಡಲು ಕಾರಣವಾಗಿತ್ತು. ಆರೋಪಿಗಳನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಗುರಿ ಪಡಿಸಿದಾಗ ಆಭರಣ ಜುವೆಲ್ಲರಿ ಶೋರೂಂನಲ್ಲಿ ನಡೆಸಿದ ಚಿನ್ನಾಭರಣ ಕಳವು ಸೇರಿದಂತೆ ಹಲವು ಪ್ರಕರಣಗಳು ಬೆಳಕಿಗೆ ಬರಲು ಸಾಧ್ಯವಾಯಿತು. ಆರೋಪಿಗಳ ವಶದಲ್ಲಿದ್ದ 25 ಗ್ರಾಂ ತೂಕದ ಸುಮಾರು ೭೩,೦೦೦ ಮೌಲ್ಯದ ಬಂಗಾರದ ಉಂಗುರ-5, ಸುಮಾರು 4 ಲಕ್ಷ ಮೌಲ್ಯದ ಸ್ಕಾರ್ಪಿಯೋ ವಾಹನ, 7 ಮೊಬೈಲ್ ಹಾಗೂ 26, 907 ನಗದನ್ನು ಇದೇ ಸಂದರ್ಭದಲ್ಲಿ ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here