Tuesday 23rd, October 2018
canara news

ನ.18-19: ಪುಂಜಾಲಕಟ್ಟೆಯಲ್ಲಿ ಸ್ವಸ್ತಿಕ್ ಪೆÇ್ರ ಕಬಡ್ಡಿ ಪಂದ್ಯಾಟ `ರಾಣಿ ಅಬ್ಬಕ್ಕಾ ಪ್ರಶಸ್ತಿ'ಗೆ ಭಾಜನರಾದ ಚಂದ್ರಶೇಖರ ಪಾಲೆತ್ತಾಡಿ

Published On : 14 Nov 2017   |  Reported By : Rons Bantwal


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ನ.13: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಸಾರಥ್ಯ ಮತ್ತು ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‍ನ ಸಹಭಾಗಿತ್ವ ಹಾಗೂ ಮುಂಬಯಿ ಉದ್ಯಮಿ ಶ್ರೀ ಸುಂದರರಾಜ್ ಹೆಗ್ಡೆ ಇವರ ಸಹಯೋಗದೊಂದಿಗೆ 34ನೇ ವಾರ್ಷಿಕ ಹೊನಲು ಬೆಳಕಿನ ಪುರುಷರ ಮುಕ್ತ ವಿಭಾಗ ಹಾಗೂ ಮಹಿಳಾ ಮುಕ್ತ ವಿಭಾಗದ ಸ್ವಸ್ತಿಕ್ ಪೆÇ್ರ ಕಬಡ್ಡಿ ಪಂದ್ಯಾಟ ಹಾಗೂ 60 ಕೆ.ಜಿ ವಿಭಾಗದ ಪಂದ್ಯಾಟ ಮತ್ತು ರಾಣಿ ಅಬ್ಬಕ್ಕಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇದೇ ನವೆಂಬರ್18-19ರ ಶನಿವಾರ ಮತ್ತು 13ನೇ ಆದಿತ್ಯವಾರ ಕ್ರಮವಾಗಿ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ.

Chandrashekara Palethady

Tungappa Bangera

ನ.18ರ ಶನಿವಾರ ಬೆಳಿಗ್ಗೆ 9.30 ಗಂಟೆಗೆ ವಾಮದಪದವು ಶ್ರೀ ಗಣೇಶ ಮಂದಿರದಿಂದ ರಾಣಿ ಅಬ್ಬಕ್ಕಾ ಕ್ರೀಡಾಜ್ಯೋತಿ ಪ್ರಜ್ವಲನೆಯೊಂದಿಗೆ ದ್ವಿದಿನಗಳ ಕಾರ್ಯಕ್ರಮ ಆರಂಭಗೊಳ್ಳುವುದು. ಬೆಳಿಗ್ಗೆ 10.30 ಗಂಟೆಗೆ ಬಂಗ್ಲೆ ಮೈದಾನದಲ್ಲಿ ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಕ್ರೀಡಾಜ್ಯೋತಿ ಬೆಳಗಿಸಿ ಸ್ವಸ್ತಿಕ್ ಪೆÇ್ರ ಕಬಡ್ಡಿ ಪಂದ್ಯಾಟಕ್ಕೆ ಹಾಗೂ ವಿಧಾನ ಪರಿಷತ್ತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಸಂಜೆ 4.30 ಗಂಟೆಗೆ 60 ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡುವರು.

ನ.19ನೇ ಆದಿತ್ಯವಾರ ಬೆಳಿಗ್ಗೆ 10.00 ಗಂಟೆಗೆ ವಿಧಾನ ಪರಿಷತ್ತ್ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ರಾಣಿ ಅಬ್ಬಕ್ಕಾ ಮುಕ್ತ ವಿಭಾಗದ ಪಂದ್ಯಾಟಕ್ಕೆ ಚಾಲನೆ ನೀಡುವರು. ಸಂಜೆ 7.00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಈ ಸಂದರ್ಭದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರಿಗೆ `ರಾಣಿ ಅಬ್ಬಕ್ಕಾ ಪ್ರಶಸ್ತಿ' ಪ್ರದಾನಿಸಿ ಗೌರವಿಸಲಾಗುವುದು. ಹಾಗೂ ಕ್ರೀಡಾಪಟುಗಳಾದ ಕರುಣಾಕರ ಶೆಟ್ಟಿ ಮತ್ತು ಹೇಮಚಂದ್ರ ಬಬ್ಬುಕಟ್ಟೆ, ಸಮಾಜ ಸೇವಕ ಬಾಲಕೃಷ್ಣ ರೈ, ಹಿರಿಯ ಕಬ್ಬಡ್ಡಿಪಟು ನಾರಾಯಣ ಪೂಜಾರಿ ಡೆಚ್ಚಾರು ಅವರಿಗೂ ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳೀನ್‍ಕುಮಾರ್ ಕಟೀಲು ಮತ್ತು ಪ್ರತಿಷ್ಠಿತ ಕೃಷಿಕ, ಯುವ ರಾಜಕಾರಣಿ ರಾಜೇಶ್ ನಾಯ್ಕ್ ಉಳೆಪಾಡಿಗುತ್ತು ಆಗಮಿಸಿ `ಪ್ರಶಸ್ತಿ' ಪ್ರದಾನಿಸಿ ಗೌರವಿಸಲಿದ್ದಾರೆ.

ಮುಕ್ತ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಮತ್ತು ಚತುರ್ಥ ಬಹುಮಾನವಾಗಿ ರಾಣಿ ಅಬ್ಬಕ್ಕಾ ಪ್ರಶಸ್ತಿ, ಚಿನ್ನದ ಪದಕ, ನಗದು ನೀಡಿ ಗೌರವಿಸಲಾಗುವುದು. 60 ಕೆ.ಜಿ ವಿಭಾಗದಲ್ಲಿ ನಗದು ರಾಣಿ ಅಬ್ಬಕ್ಕಾ ಪ್ರಶಸ್ತಿ, ಚಿನ್ನದ ಪದಕ ನಗದು, ದ್ವಿತೀಯ, ತೃತೀಯ, ಚತುರ್ಥಬಹುಮಾನ, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಹಾಗೂ ಸವ್ಯಸಾಚಿ ಆಟಗಾರನಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ, ಅಧ್ಯಕ್ಷ ಪ್ರಶಾಂತ್ ಎಂ.ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ ಪಿ ಮಂಜಲಪಲ್ಕೆ ತಿಳಿಸಿದ್ದಾರೆ. ನಾಡಿನ ಸಮಸ್ತ ಕ್ರೀಡಾಭಿಮಾನಿಗಳು, ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸುವಂತೆ ಕಾರ್ಯದರ್ಶಿ ಜಯರಾಜ್ ಅತ್ತಾಜೆ ತಿಳಿಸಿದ್ದಾರೆ.

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕøತಿಕ, ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿದ್ದು ಸಾಧನೆಯ ಹಾದಿಯಲ್ಲಿ 35ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸಮಾಜಮುಖಿ ಕಾರ್ಯಗಳೊಂದಿಗೆ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. 33 ವರ್ಷಗಳಿಂದ ನಿರಂತರ ಕಬಡ್ಡಿ ಪಂದ್ಯಾಟಗಳನ್ನು ಆಯೋಜಿಸಿ ದೇಶೀ ಕ್ರೀಡೆ ಕಬಡ್ಡಿಯತ್ತ ಯುವಕರನ್ನು ಆಕರ್ಷಿಸಿದೆ. ವಿವಿಧ ಸಾಧಕರನ್ನು ಗುರುತಿಸಿ ಸ್ವಸ್ತಿಕ್ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡುವ ಉತ್ತಮ ಕಾರ್ಯ ಮಾಡುತ್ತಿದೆ. ಸಾಮಾಜಿಕ ಕಾರ್ಯಗಳಿಗಾಗಿ ದ.ಕ.ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಅತ್ಯುತ್ತಮ ಯುವಕ ಸಂಘವೆಂಬ ಪ್ರಶಸ್ತಿ ಗಳಿಸಿದೆ.

ತುಂಗಪ್ಪ ಬಂಗೇರ ಅವರು 1983ರಲ್ಲಿ ಸಮಾನ ಮನಸ್ಕ ಯುವಕರೊಂದಿಗೆ ಸ್ವಸ್ತಿಕ್ ಕ್ರಿಕೆಟ್ ತಂಡ ಕಟ್ಟಿಕೊಂಡು ಆ ಮೂಲಕ ಸಂಸ್ಥೆಯನ್ನು ಸ್ಥಾಪನೆ ಗೊಳಿಸಿದ್ದರು. ನೂರಾರು ಜನಪರ ಕಾರ್ಯಕ್ರಮಗಳ ಸಂಘಟನೆಯೊಂದಿಗೆ, ಹಲವಾರು ವಿನೂತನ ಯೋಜನೆಗಳ ಅನುಷ್ಠಾನದೊಂದಿಗೆ, ಸಮಾಜಮುಖಿ ಚಿಂತನೆಗಳೊಂ ದಿಗೆ ನಿರಂತರ ಜನರೊಂದಿಗಿದ್ದು, ಜನರ ಒಡನಾಡಿಯಾಗಿ, ಸಾಮಾಜಿಕ ಪ್ರಗತಿಯಲ್ಲಿ ವಿಶಿಷ್ಠ ಕೊಡುಗೆ ನೀಡುತ್ತಿರು ವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಮಾದರಿ ಸಂಘಟನೆಯಾಗಿ ಜನಮೆಚ್ಚುಗೆಗೆ ಪಾತ್ರವಾಗಿದೆ. ನಿರಂತರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ನಡೆಸುವ ಮೂಲಕ ಕ್ರೀಡಾ ಕ್ಷೇತ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ಸಂಘಟನೆ ಹತ್ತಾರು ಆರೋಗ್ಯ ಶಿಬಿರಗಳು, ಮಾಹಿತಿ ಕಾರ್ಯಾಗಾರಗಳು, ತರಬೇತಿ ಕಮ್ಮಟಗಳು, ಬಡವರಿಗೆ ಮನೆಯ ವ್ಯವಸ್ಥೆ, ಮದುವೆಗೆ ನೆರವು, ಆಥಿರ್üಕ ದುರ್ಬಲರಿಗೆ ಸಹಾಯಧನ, ಅರ್ಹ ಬಡ ಮಕ್ಕಳಿಗೆ ಸಮವಸ್ತ್ರ ವಿತರಣೆ, ಜಿಲ್ಲಾ ಮಟ್ಟದ ಯುವಜನ ಮೇಳ, ಜಿಲ್ಲಾ ಮಟ್ಟದ ಆರೋಗ್ಯ ಮೇಳ, ಜಿಲ್ಲಾ ಮಟ್ಟದ ನಾಟಕೋತ್ಸವ, ಜಿಲ್ಲಾ ಕ್ರೀಡೋತ್ಸವ ಮೊದಲಾದ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಕ್ರಿಯಾಶೀಲವಾಗಿ, ರಚನಾತ್ಮಕವಾಗಿ ಮುನ್ನಡೆಯುತ್ತಿದೆ. ದಶಕದ ಹಿಂದೆ ರಜತ ಮಹೋತ್ಸವ ವನ್ನು ಸ್ವಸ್ತಿ ಸಿರಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ಸಾಮೂಹಿಕ ವಿವಾಹದೊಂದಿಗೆ ಅದ್ದೂರಿಯಾಗಿ ಆಚರಿಸಿ ನಾಡಿನ ಗಮನ ಸೆಳೆದ ಈ ಕ್ಲಬ್ ಅದನ್ನು ನಿರಂತರವಾಗಿ ವೈಭವಯುತವಾಗಿ ಮುಂದುವರಿಸುತ್ತಾ ನಾಡಿನ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ.

 
More News

ರಾಯನ್ ಇಂಟರ್‍ನೇಶನಲ್ ಗ್ರೂಫ್‍ನಿಂದ 158ನೇ ರಾಯನ್ ಮಿನಿಥಾನ್
ರಾಯನ್ ಇಂಟರ್‍ನೇಶನಲ್ ಗ್ರೂಫ್‍ನಿಂದ 158ನೇ ರಾಯನ್ ಮಿನಿಥಾನ್
ಗೋರೆಗಾಂವ್ ಮೋತಿಲಾಲ್ ನಗರÀದ ಶ್ರೀ ಶಾಂತ ದುರ್ಗಾದೇವಿ ಮಂದಿರದಲ್ಲಿ ಸಂಭ್ರಮ ಸಡಗರದಿಂದ ಸಂಪನ್ನಗೊಂಡ ವಾರ್ಷಿಕ ಶರನ್ನವರಾತ್ರಿ ಉತ್ಸವ
ಗೋರೆಗಾಂವ್ ಮೋತಿಲಾಲ್ ನಗರÀದ ಶ್ರೀ ಶಾಂತ ದುರ್ಗಾದೇವಿ ಮಂದಿರದಲ್ಲಿ ಸಂಭ್ರಮ ಸಡಗರದಿಂದ ಸಂಪನ್ನಗೊಂಡ ವಾರ್ಷಿಕ ಶರನ್ನವರಾತ್ರಿ ಉತ್ಸವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಸಾಯನ್,  ಆಶ್ರಯದಲ್ಲಿ  ದೀಪಾರಾಧನೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಸಾಯನ್, ಆಶ್ರಯದಲ್ಲಿ ದೀಪಾರಾಧನೆ

Comment Here