Saturday 5th, July 2025
canara news

ಗೋರೆಗಾಂವ್ ಪಶ್ಚಿಮ ಸ್ವಾಗತ್ ವೈನ್‍ಶಾಪ್‍ಗೆ ಕಾನೂನು ಬಾಹಿರ ದಾಳಿ ಹಣವಸೂಲಿಗೈದ ಇಬ್ಬರು ಪೆÇಲೀಸ್ ಅಧಿಕಾರಿಗಳ ಅಮಾನತು

Published On : 14 Nov 2017   |  Reported By : Rons Bantwal


(ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ನ.14: ಮಹಾನಗರದ ಗೋರೆಗಾಂವ್ ಪಶ್ಚಿಮದ ವೈನ್‍ಶಾಪ್‍ನಿಂದ ಬಲತ್ಕಾರವಾಗಿ ಹಣ ವಸೂಲಿಗೈದ ಆರೋಪದ ಹಿನ್ನಲೆಯಲ್ಲಿ ಗೋರೆಗಾಂವ್ ಪೆÇಲೀಸ್ ಠಾಣೆಯ ಇಬ್ಬರು ಪೆÇಲೀಸ್ ಅಧಿಕಾರಿಗಳನ್ನು ಅಮಾನತು ಗೊಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ನ.3ರ ಶುಕ್ರವಾರ ಗೋರೆಗಾಂವ್ ಪಶ್ಚಿಮ ಪೆÇಲೀಸ್ ಠಾಣಾ ಸಹಾಯಕ ಇನ್ಸ್‍ಪೆಕ್ಟರ್ ದತ್ತಾತ್ರೇಯ ಗುಂಧ್ ಮತ್ತು ಸಬ್ ಇನ್ಸ್‍ಪೆಕ್ಟರ್ ಗೌರವಕ್ಷ್ ಗೋಡ್ಕೆ ಅವರು ರಾತ್ರಿ ಪಾಳ್ಯದ ಕರ್ತವ್ಯದಲ್ಲಿದ್ದರು. ಈ ವೇಳೆ ವೈನ್‍ಶಾಪ್‍ನಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಾಹಿಸುತ್ತಿದ್ದ ಮಂಗಳೂರು ಮೂಲದ ಸಂತೋಷ್ ಅಧಿಕಾರಿ ಅವರನ್ನು ಓರ್ವ ಪೆÇಲೀಸ್ ಅಧಿಕಾರಿ ನಕಲಿ ಪತ್ರಕರ್ತನೊಳಗೊಂಡು ಕಾನೂನು ಬಾಹಿರ ದಾಳಿ ನಡೆಸಿ ತರಾಟೆಗೆ ತೆಗೆದುಕೊಂಡಿದ್ದರು. ನೀವು 18 ವಯಸ್ಸಿನ ಕೆಳಗಿನವರಿಗೆ ಮಧ್ಯ (ಸಾರಾಯಿ) ನೀಡಿದ್ದು, ನಮ್ಮಲ್ಲಿ ಫೆÇಟೋ ಪ್ರೂಫ್ (ಸಾಕ್ಷಿ) ಇದೆ. ಆದ ಕಾರಣ ನಿಮ್ಮನ್ನು ಬಂಧಿಸಲು ಬಂದಿದ್ದೇವೆ ಎಂದು 40,000 ಸಾವಿರ ರೂಪಾಯಿ ವಸೂಲಿ ಮಾಡಿದ್ದರು. ಇನ್ನೊರ್ವ ಪೆÇಲೀಸ್ ಬಲವಂತಾಗಿ ಸಂತೋಷ್ ಮೇಲೆ ಸುಳ್ಳು ಅಪರಾಧ ಹೊರಿಸಿ ಬಂಧಿಸುವುದಾಗಿ ಹೇಳಿ ನಿನಗೆ ಜಾಮೀನು ಕೂಡ ದೊರಕುವುದಿಲ್ಲ ಅಂತಹ ಅಪರಾಧದಲ್ಲಿ ಬಂಧಿಸುವುದಾಗಿ ಬೆದರಿಕೆ ನೀಡಿ ಠಾಣೆಗೆ ಕರೆದೊಯ್ದು ದೈಹಿಕ ಮತ್ತು ಮಾನಸಿಕ ಹಿಂಸೆನೀಡಿ ಜೈಲಿನಲ್ಲಿ ಹಾಕುವ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ.

ರಾತ್ರಿ 1.30 ಗಂಟೆ ತನಕ ಪೆÇಲೀಸ್ ಠಾಣೆಯಲ್ಲಿ ವಿಚಾರಕ್ಕೆ ಒಳಪಡಿಸಿ, ನಂತರ ಸಹಾಯಕ ಇನ್‍ಸ್ಪೆಕ್ಟರ್ ದತ್ತಾತ್ರೇಯ ಹಾಗೂ ನಕಲಿ ಪತ್ರಕರ್ತ ಸೇರಿ ನಿಮಗೆ ಬಿಡಬೇಕಾದರೆ ಒಂದು ಲಕ್ಷ ರೂಪಾಯಿ ನಗದು ನೀಡುವಂತೆ ಒತ್ತಾಯಿಸಿದ್ದರು. ನನ್ನ ಹತ್ತಿರ ಅಷ್ಟು ಹಣ ಇರಲಿಲ್ಲ ವೈನ್‍ಶಾಪ್‍ನಲ್ಲೂ 30,000 ಸಾವಿರ ಮಾತ್ರ ಇತ್ತು ಆ ಹಣ ಕೂಡ ಮಾಲೀಕರಿಗೆ ನೀಡಬೇಕಾಗಿದೆ ಎಂದು ಸಂತೋಷ್ ತಿಳಿಸಿದ್ದರೂ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಅಂತೆಯೇ ವೈನ್‍ಶಾಪ್‍ನಲ್ಲಿದ್ದ 30,000 ಹಣವನ್ನು ಪೆÇಲೀಸರು ತೆಗೆದುಕೊಂಡು ಇನ್ನೂ 10,000 ತಂದು ಕೊಡುವಂತೆ ಸೂಚಿಸಿದರು. ನಂತರ ಅವರು ನನಗೆ ಠಾಣೆಯ ಹತ್ತಿರವಿರುವ ಎಟಿಎಂಗೆ ಕೊಂಡುಹೋಗಿ 10,000 ತೆಗೆದು ನೀಡಿದ ನಂತರವಷ್ಟೇ ನನಗೆ ಮನೆಗೆ ಹೋಗಲು ಅವಕಾಶ ನೀಡಿದದ್ದರು ಎಂದು ಘಟನೆಯ ಮಾರನೇ ದಿನ ವೈನ್‍ಶಾಪ್ ಮಾಲೀಕರು ಸಂತೋಷ್ ಅಧಿಕಾರಿ ಅವರನ್ನೊಳಗೊಂಡು ಬೃಹನ್ಮುಂಬಯಿ ಪೆÇೀಲಿಸ್ ಉನ್ನತ ಅಧಿಕಾರಿಗಳಿಗೆ ನೀಡಿದ್ದÀ ದೂರಿನಲ್ಲಿ ಸಂತೋಷ್ ಅಧಿಕಾರಿ ಮುಂಬಯಿ ಕಮಿಷನರ್ ಆಫ್ ಪೆÇಲೀಸ್ ಅವರಿಗೆ ದೂರಿನಲ್ಲಿ ತಿಳಿಸಿದ್ದರು.

ಗೋರೆಗಾಂವ್‍ನ ಉನ್ನತ ಪೆÇೀಲಿಸ್ ಅಧಿಕಾರಿಗಳು, ಪ್ರಾದೇಶಿಕ ಪೆÇಲೀಸ್ ಉಪ ಆಯುಕ್ತ, ಸಹಾಯಕ ಪೆÇಲೀಸ್ ಆಯುಕ್ತ ಅವರಿಗೂ ಮಾಹಿತಿ ನೀಡಿದ್ದÀರು. ಮಾಹಿತಿ ತಿಳಿದಾಕ್ಷಣ ಉನ್ನತಾಧಿಕಾರಿಗಳು ಎರಡು ಪೆÇಲೀಸ್ ಅಧಿಕಾರಿಗಳ ಮಾಹಿತಿ ಪಡೆÉದು ವಿಚಾರಣೆಗೆ ಒಳಪಡಿಸಿದ್ದರು. ಸ್ವಾಗತ್ ವೈನ್‍ಶಾಪ್ ವಿರುದ್ಧ ಪರಿಸರದ ಜನತೆಯಿಂದ ದೂರು ಬರುತ್ತಿದ್ದವು ಎಂದು ಪೆÇೀಲಿಸಲು ಹೇಳಿಕೆ ನೀಡಿ ಆ ಕಾರಣ ನಾವು ಖಾಲಿ ವಿಚಾರಣೆ ನಡೆಸಿತ್ತಿದ್ದೆವು ಎಂದು ತಿಳಿಸಿದ್ದಾರೆ. ನಂತರ ಬಲವಾದ ವಿಚಾರಣೆ ನಡೆಸಿದಾಗ ಘಟನೆಯನ್ನು ಒಪ್ಪಿಕೊಂಡ ದತ್ತಾತ್ರೇಯ ಗುಂಧ್ ಮತ್ತು ಗೌರವಕ್ಷ್ ಗೋಡ್ಕೆ ಇವರನ್ನು ಸೇವೆಯಿಂದ ವಜಾ ಗೊಳಿಸಲಾಗಿದೆ ಎಂದು ಗೋರೆಗಾಂವ್ ಪೆÇಲೀಸ್ ಠಾಣಾ ಹಿರಿಯ ಪೆÇಲೀಸ್ ಅಧಿಕಾರಿ ಧನಾಜಿ ನಾಲವಡೆ ತಿಳಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here