Saturday 5th, July 2025
canara news

ಕಟೀಲು ಮೇಳದ ಯಕ್ಷಗಾನ ತಿರುಗಾಟಕ್ಕೆ ಚಾಲನೆ

Published On : 15 Nov 2017   |  Reported By : Canaranews network


ಮಂಗಳೂರು : ಶ್ರೀ ಕ್ಷೇತ್ರ ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 6 ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಚಾಲನೆ ನೀಡಲಾಗಿದೆ. 2017-18 ನೇ ಸಾಲಿನ ಶ್ರೀ ಕ್ಷೇತ್ರದ ಸೇವೆ ಬಯಲಾಟಗಳ ತಿರುಗಾಟ ಆರಂಭಗೊಂಡಿದೆ.ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಅನಂತಪದ್ಮನಾಭ ಅಸ್ರಣ್ಣ 6 ಮೇಳಗಳ ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಮೇಳಗಳ ತಿರುಗಾಟಕ್ಕೆ ಚಾಲನೆ ನೀಡಿದರು.

ಶ್ರೀ ಕ್ಷೇತ್ರ ಕಟೀಲಿನಲ್ಲಿ ನಿನ್ನೆ ಸಂಜೆ ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಾನದಲ್ಲಿ ಗೆಜ್ಜೆ ಮುಹೂರ್ತ ನಡೆದು ಎಲ್ಲಾ 6 ಮೇಳಗಳ ಹನ್ನೆರಡು ಮಂದಿ ವೇಷಧಾರಿಗಳು ಭಾಗವತಿಕೆ ಹಿಮ್ಮೇಳಗಳ ಸಹಿತ ಯಕ್ಷ ನಾಟ್ಯ ಪ್ರದಕ್ಷಿಣೆ, ಗಣಪತಿ ಸನ್ನಿಧಿಯಲ್ಲಿ ಯಕ್ಷಗಾನ ನಾಟ್ಯ ಸೇವೆ ನಡೆಸಿದರು. ಕ್ಷೇತ್ರದ 6 ಮೇಳಗಳ ದೇವರ ಪೆಟ್ಟಿಗೆ ಚಿನ್ನ, ಬೆಳ್ಳಿಯ ಕಿರೀಟ ಹಾಗೂ ಆಯುಧಗಳನ್ನು ದೇವಸ್ಥಾನದಲ್ಲಿ ಪೂಜಿಸಿ ಬಳಿಕ ಸರಸ್ವತಿ ಸದನದಲ್ಲಿನ ಚೌಕಿಯಲ್ಲಿ ಪೂಜೆ ಸಲ್ಲಿಸಲಾಯಿತು.

6 ಯಕ್ಷಗಾನ ಮೇಳಗಳ ತಿರುಗಾಟ ಆರಂಭದ ಮೊದಲ ಹಂತವಾಗಿ ಕ್ಷೇತ್ರದ ರಥಬೀದಿಯಲ್ಲಿ ನಿರ್ಮಿಸಲಾಗಿದ್ದ 6 ಯಕ್ಷ ರಂಗಗಳಲ್ಲಿ ಸೋಮವಾರ ರಾತ್ರಿ ಬಯಲಾಟ ಪ್ರದರ್ಶನ ನಡೆಯಿತು.ಯಕ್ಷಗಾನ ರಂಗದ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಶ್ರೀ ಕ್ಷೇತ್ರದ ಮೇಳದಲ್ಲಿ ಸೇವೆ ಸಲ್ಲಿಸಲಿದ್ದಾರೆ. ಶ್ರೀ ಕ್ಷೇತ್ರ ಕಟೀಲಿನ 4 ನೇ ಮೇಳದಲ್ಲಿ ಹಿರಿಯ ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ ಸೇವೆ ಸಲ್ಲಿಸಲಿದ್ದಾರೆ

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here