Saturday 10th, May 2025
canara news

ಸಮಯವನ್ನು ವ್ಯರ್ಥ ಮಾಡಾಬೇಡಿ - ಶಿಕ್ಷಣ ಪ್ರೇಮಿ ಆನಂದ ಶೆಟ್ಟಿ

Published On : 17 Nov 2017   |  Reported By : Bernard D'Costa


ಕುಂದಾಪುರ, ನ.17: ವಿದ್ಯಾರ್ಥಿಗಳು ತಮ್ಮ ಸಮಯವನ್ನು ವ್ಯರ್ಥ ಮಾಡದೆ ಓದಲು ಹಾಗೂ ಇತರ ಪಠ್ಯೇತರ ಚಟುವಟಿಕೆಗಳಿಗೆ ಮೀಸಲಿಡಬೇಕು, ಪ್ರತಿದಿನ ತಮ್ಮ ಪಾಠ ಚಟುವಟಿಕೆಗಳನ್ನು ಓದಿ ಮನನ ಮಾಡಿಕೊಂಡು ಪರೀಕ್ಷೆಗಳಲ್ಲಿ ಉತ್ತಮವಾದ ಜ್ಞಾನಾರ್ಧನೆಯನ್ನು ಪಡೆದು ಜೀವನದಲ್ಲಿಸಫಲತೆಯನ್ನು ಪಡೆದುಕೊಳ್ಳ ಬೇಕು, ಆವಾಗಲೇ ನೀಜ ಜೀವನ ರೂಪಿತಗೊಳ್ಳುವುದೆಂದು ವಿಧ್ಯಾರ್ಥಿಗಳು ತಿಳಿದುಕೊಳ್ಳ ಬೇಕು’ ಶಿಕ್ಷಣ ಪ್ರೇಮಿ, ವಿದ್ಯಾರ್ಥಿಗಳ ಅಪಾರ ಪ್ರೀತಿ ಹೊಂದಿರುವ ನಿವೃತ್ತ ಶಿಕ್ಷಕರಾದ ಬೇಳೂರಿನ ಪೂಜ್ಯ ಶ್ರೀ ಆನಂದ ಶೆಟ್ಟಿಯವರು ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ನೆಡೆದ ಮಕ್ಕಳ ದಿನಾಚರಣೆ ಸಂಭ್ರಮದಲ್ಲಿ ಶಿಕ್ಷಣ ಪ್ರೇಮಿ, ವಿದ್ಯಾರ್ಥಿಗಳ ಅಪಾರ ಪ್ರೀತಿ ಹೊಂದಿರುವ ನಿವೃತ್ತ ಶಿಕ್ಷಕರಾದ ಬೇಳೂರಿನ ಪೂಜ್ಯ ಶ್ರೀ ಆನಂದ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಸಂದೇಶ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಪ್ರಾಂಶುಪಾಲರಾಗಿರುವ ಪೂಜ್ಯನೀಯ ರೇ ಫಾ| ಪ್ರವೀಣ್ ಅಮೃತ್ ಮಾರ್ಟಿಸ್‍ರವರು ವಹಿಸಿ ‘ವಿದ್ಯಾರ್ಥಿಗಳು ಶಿಸ್ತು ಬದ್ಧ ಜೀವನವನ್ನು ರೂಪಿಸಿಕೊಂಡು ತಮ್ಮ ಹೆತ್ತವರಿಗೆ ಹಾಗೂ ಕಲಿತ ವಿದ್ಯಾ ಸಂಸ್ಥೆಗಳಿಗೆ ಕೀರ್ತಿ ತರಬೇಕೆಂದು ಹಾಗೂ ಸಮಾಜದಲ್ಲಿ ಉತ್ತಮ ಸೇವೆಯನ್ನು ನೀಡಿ ಇತರರಿಗೆ ಮಾದರಿಯಾಗಬೇಕೆಂದು’ ಶುಭ ಸಂದೇಶ ನೀಡಿದರು.

ವೇದಿಕೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಮಂಜುಳಾ ನಾಯರ್, ವಿದ್ಯಾರ್ಥಿ ನಾಯಕ್ ಜೊನ್ಸನ್ ಲೂವಿಸ್, ಕಾರ್ಯದರ್ಶಿ ವೆನ್ಸಿಟಾ ರಾಣಿ ಡಿ ಸೋಜ ಹಾಗೂ ಎಲ್ಲಾ ತರಗತಿಯ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು. ಕೆಲವು ಮನೋರಂಜನೆ ಮತ್ತು ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಉಪನ್ಯಾಸಕರುಗಳಾದ ಶ್ರೀಮತಿ ಉಷಾರವರು ಸ್ವಾಗತಿಸಿ, ಶ್ರೀಮತಿ ರೇಷ್ಮಾ ಡಿ ಸೋಜರವರು ವಂದಿಸಿದರು. ಶ್ರೀ ನಾಗರಾಜ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here