Thursday 25th, April 2024
canara news

ಮಂಗಳೂರಿಗೆ ಕಾದಿದೆ ಅಪಾಯ!

Published On : 19 Nov 2017   |  Reported By : Canaranews network


ಮಂಗಳೂರು : ಜಾಗತಿಕ ತಾಪಮಾನದಿಂದ ಉಂಟಾಗುವ ಪ್ರವಾಹದ ಅಪಾಯ ಮಂಗಳೂರಿಗೆ ಹೆಚ್ಚು ಎಂದು ನಾಸಾದ ವರದಿ ಹೇಳಿದೆ. ಮುಂಬೈ, ನ್ಯೂಯಾರ್ಕ್ ನಗರಗಳಿಗೆ ಹೋಲಿಸಿದರೆ ಮಂಗಳೂರು ಅಪಾಯದಲ್ಲಿದೆ ಎಂದು ಎಚ್ಚರಿಕೆ ನೀಡಿದೆ.ಜರ್ನಲ್ ಸೈನ್ಸ್ ಅಡ್ವಾನ್ಸ್ ಮೂಲಕ ನಡೆಸಿದ ಮುಂದಿನ 100 ವರ್ಷಗಳ ಅಧ್ಯಯದ ವರದಿ ಈ ಕುರಿತ ಅಂಕಿ ಅಂಶಗಳನ್ನು ನೀಡಿದೆ. ಹಿಮಬಂಡೆಗಳು ಕರಗಿ ಸಮುದ್ರಕ್ಕೆ ನೀರು ಸೇರುವ ಪ್ರಮಾಣದಲ್ಲಿ ಮಂಗಳೂರಿಗೆ 15.98 ಸೆಂ.ಮೀ. ಅಂಕ ಸಿಕ್ಕಿದೆ. ಮುಂಬೈ 15.26 ಸೆಂ.ಮೀ. ಮತ್ತು 10.65 ಅಂಕಗಳು ನ್ಯೂಯಾರ್ಕ್ಗೆ ಸಿಕ್ಕಿವೆ.ವಿವಿಧ ನಗರಗಳು ಮತ್ತು ದೇಶಗಳು ಪ್ರವಾಹದಿಂದ ಪಾರಾಗಲು ಮಾಡುವ ಯೋಜನೆಗಳು ಮುಂದಿನ 100 ವರ್ಷಗಳಿಗೆ ಆಗುವಂತಿರಬೇಕು.

ನಗರಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆಗಳು ಅಷ್ಟಿವೆ' ಎಂದು ಎರಿಕ್ ಲಿವಿನ್ಸ್ ಹೇಳಿದ್ದಾರೆ.ಜಾಗತಿಕ ತಾಪಮಾನ ಏರಿಕೆಯಿಂದ ಯಾವ ಹಿಮನದಿ, ಹಿಮಗಲ್ಲುಗಳು ಕರಗಿದರೆ ಯಾವ ನಗರಗಳ ಭಾಗಗಳು ಮುಳುಗುತ್ತವೆ ಎಂಬುದನ್ನು ಲೆಕ್ಕ ಹಾಕುವ ಆನ್ಲೈನ್ ಸಿಮ್ಯುಲೇಟರ್ ಅನ್ನು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಅಭಿವೃದ್ಧಿಪಡಿಸಿದೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here