Friday 29th, March 2024
canara news

ಕುಂದಾಪುರ ಕಾಂಗ್ರೇಸ್ : ಇಂದಿರಾ ಗಾಂಧಿ ಜನ್ಮದಿನಾಚರಣೆ

Published On : 21 Nov 2017   |  Reported By : Bernard D'Costa


“ಬ್ಯಾಂಕ್ ರಾಷ್ಟ್ರೀಕರಣ, ಭೂಸುಧಾರಣೆ ಮತ್ತು ಗರೀಬಿ ಹಠಾವೋ ಮೂಲಕ ದೇಶವನ್ನು ಅಭಿವೃದ್ಧಿಯತ್ತ ಒಯ್ದ ಇಂದಿರಾಜಿ”

ಸ್ವತಂತ್ರ ಭಾರತದ ಪ್ರಥಮ ಮಹಿಳಾ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ದೂರದÀರ್ಶಿತ್ವದ ಪ್ರತಿಫಲವಾಗಿ ಇಂದು ಈ ದೇಶ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ಅಗ್ರಗಣ್ಯ ಎನಿಸಿಕೊಳ್ಳಲು ಸಾಧ್ಯವಾಗಿದೆ. ಅವರು ತನ್ನ ದಿಟ್ಟ ನಿರ್ಧಾರಗಳಿಂದ ಜಾರಿಗೆ ತಂದ 20 ಅಂಶಗಳ ಕಾರ್ಯಕ್ರಮ ಬ್ಯಾಂಕ್ ರಾಷ್ಟ್ರೀಕರಣ, ಉಳುವವನೆ ಹೊಲದೊಡೆÀಯ ಕಾಯ್ದೆ ಮತ್ತು ಗರೀಬಿ ಹಠವೋ ಮೂಲಕ ಅನ್ನ, ಬಟ್ಟೆ ಮತ್ತು ವಸತಿಗೆ ನೀಡಿದ ಆಧ್ಯತೆಗಳು ದೀನದಲಿತರ ಸಮಗ್ರ ಏಳಿಗೆಗೆ ಕಾರಣವಾದುವು. ದೇಶದ ಸಮಗ್ರತೆಗಾಗಿ ಹೋರಾಡಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಇಂದಿರಾಜಿಯವರು ಈ ದೇಶಕ್ಕೆ ನೀಡಿದ ಕೊಡುಗೆಗಾಗಿ ಎಂದೆಂದಿಗೂ ಚಿರಸ್ಮರಣೀಯರು ಎಂದು ಕುಂದಾಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಹೇಳಿದರು.

 

ಅವರು ಭಾನುವಾರ ಕುಂದಾಪುರ ಬ್ಲಾಕ್ ಕಾಂಗ್ರೇಸ್ ಕಛೇರಿಯಲ್ಲಿ ನಡೆದ ಇಂದಿರಾ ಗಾಂಧಿ 100ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಮೂರನೇ ಪ್ರಧಾನಿಯಾಗಿ ಆಯ್ಕೆಗೊಂಡ ಇಂದಿರಾಜಿಯವರಲ್ಲಿ ದೇಶ ಕಟ್ಟುವ ಛಲ ರಕ್ತಗತವಾಗಿಯೇ ಬಂದಿತ್ತು. ಅವರ ಜೀವನ ಚರಿತ್ರೆಯೇ ಒಂದು ಅದ್ಭುತ ಸಂದೇಶ. ಬಾಂಗ್ಲಾ ವಿಮೋಚನೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿಯವರಿಂದ ‘ದುರ್ಗೆ’ ಎಂದು ಹೊಗಳಿಸಿಕೊಂಡ ಮಹಾನ್ ಧೀರೆ. ದೇಶದ ಕಟ್ಟಕಡೆಯ ಜನರನ್ನು ಸಮಾನತೆ ಮಂತ್ರದ ಮೂಲಕ ಮುಖ್ಯವಾಹಿನಿಗೆ ತಂದು ಅವರ ಜೀವನ ಮಟ್ಟವನ್ನು ಎತ್ತರಕ್ಕೇರಿಸಿದ ಕೀರ್ತಿ ಇಂದಿರಾ ಅವರದ್ದು ಎಂದು ಕಾಂಗ್ರೇಸ್ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ಮಾಣಿ ಗೋಪಾಲ್ ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಐಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ನಗರ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ತಾ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಶ್ರೀಧರ ಶೇರೆಗಾರ್, ಪ್ರಭಾಕರ ಕೋಡಿ, ಕೇಶವ ಭಟ್, ಚಂದ್ರ ಅಮೀನ್, ಯುವ ಕಾಂಗ್ರೇಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಯುವ ಮುಖಂಡ ಸಂಪತ್ ಶೆಟ್ಟಿ, ಕಾಂಗ್ರೇಸ್ ಐಟಿ ಸೆಲ್ ಜಿಲ್ಲಾಧ್ಯಕ್ಷ ವಿಶ್ವಾಸ್ ಶೆಟ್ಟಿ, ಮುಖಂಡರುಗಳಾದ ಶ್ರೀಧರ ಆಚಾರ್ ಕಾಳಾವರ, ಕೋಡಿ ಅಬ್ದುಲ್ಲ, ಲೋಯ್ ಕರ್ವಾಲ್ಲೋ, ಶಶಿಧರ ಕಾಂಚನ್, ಸುಬ್ರಹ್ಮಣ್ಯ ಮುಂತಾದವರು ಉಪಸ್ಥಿತರಿದ್ದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here