Monday 12th, May 2025
canara news

ನೆರೂಲ್ ಅಲ್ಲಿನ ಬಿಎಸ್‍ಕೆಬಿ ಅಸೋಸಿಯೇಶನ್‍ನ ಆಶ್ರಯದಲ್ಲಿ

Published On : 22 Nov 2017   |  Reported By : Rons Bantwal


ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಶಾಖೆ ಉದ್ಘಾಟನೆ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ನ. 21: ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಇದರ 774ನೇ, ಮಹಾರಾಷ್ಟ್ರದಲ್ಲಿನ 50ನೇ ಶಾಖೆಯು ಬಿಎಸ್‍ಕೆಬಿ ಅಸೋಸಿಯೇಶನ್ ಇದರ ನೆರೂಲ್ ಅಲ್ಲಿರುವ ಹಿರಿಯ ನಾಗರಿಕರ ವಾಸಧಾಮ `ಆಶ್ರಯ' ದ ತಳ ಮಜಲಿನಲ್ಲಿ ಇತ್ತೀಚಿಗೆ ಲೋಕಾರ್ಪಣೆಗೊಂಡಿತು.

ವಿಶೇಷ ಅತಿಥಿüಯಾಗಿ ಸಿಡ್ಕೋ ಸಸ್ಥೆಯ ಜಂಟಿ ಆಡಳಿತ ನಿರ್ದೇಶಾಧಿಕಾರಿ, ಆರ್.ಆರ್ ಚವ್ಹಾಣ್ ಆಗಮಿಸಿ ರಿಬ್ಬನ್ ಕತ್ತರಿಸಿ ಶಾಖೆಯನ್ನು ಉದ್ಘಾಟಿಸಿದರು. ಹಾಗೂ ಕರ್ನಾಟಕ ಬ್ಯಾಂಕ್‍ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್ ಅವರು ಎ.ಟಿ.ಎಂ ಯಂತ್ರವನ್ನು ಉದ್ಘಾಟನೆಗೈದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್‍ನ ಮುಂಬಯಿ ವಿಭಾಗೀಯ ಉಪ ಮಹಾ ಪ್ರಬಂಧಕ ರಾಜಕುಮಾರ್ ಪಿ.ಹೆಚ್., ಬಿಎಸ್‍ಕೆಬಿ ಅಸೋಸಿಯೇಶನ್‍ನ ಅಧ್ಯಕ್ಷರ ಡಾ| ಸುರೇಶ್ ಎಸ್.ರಾವ್, ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ ಹಾಗೂ ಇನ್ನಿತರ ಪದಾಧಿಕಾರಿಗಳ ಉಪಸ್ಥಿತರಿದ್ದರು.

ಮಹಾಬಲೇಶ್ವರ ಅವರು ಸಭಾ ಕಾರ್ಯಕ್ರಮವನ್ನುದ್ದೇಶಿ ಮಾತನಾಡೊ ಕರ್ನಾಟಕ ಬ್ಯಾಂಕ್ ನ ಪ್ರಗತಿಯ ಹಾದಿಯ ಬಗ್ಗೆ ವಿಸ್ತಾರವಾಗಿ ತಿಳಿಸುತ್ತಾ ಚವಾಣ್ ಹಾಗೂ ಸುರೇಶ್ ರಾವ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ, ಪುಷ್ಪಗುಚ್ಚ, ಸ್ಮರಣಿಕೆಗಳನ್ನಿತ್ತು ಸನ್ಮಾನಿಸಿದರು.

ಅಸೋಸಿಯೇಶನ್ ನ ಪರವಾಗಿ ಸುರೇಶ್ ರಾವ್, ಮಹಾಬಲೇಶ್ವರ್ ಎಂ. ಎಸ್, ಚವಾಣ್, ಅಂತೆಯೇ ಬ್ಯಾಂಕ್‍ನ ಅಂತರಿಕ ರೂಪುರೇಷೆಗಳನ್ನು ರೂಪಿಸಿದ ಆರ್ಕಿಟೆಕ್ಟ್ ಹಿತೇನ್ ಸೇಥಿ ಅವರನ್ನು ಸತ್ಕರಿಸಿದರು.
ಉಪಾಧ್ಯಕ್ಷ ವಾಮನ್ ಹೊಳ್ಳ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here