Monday 12th, May 2025
canara news

ಡಿ.9-10: ಮಂಗಳೂರುನಲ್ಲಿ `ಅಂತಾರಾಷ್ಟ್ರೀಯ ಬಂಟರ ಪ್ರೊ ಕಬಡ್ಡಿ'

Published On : 22 Nov 2017   |  Reported By : Ronida Mumbai


ಪದ್ಮನಾಭ ಎಸ್.ಪಯ್ಯಡೆ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ

ಮುಂಬಯಿ, ನ.22: ಯೂತ್ ಬಂಟ್ಸ್ ಮಂಗಳೂರು ಇದೇ ಡಿ.9 ಮತ್ತು 10ರಂದು ಮಂಗಳೂರುನ ನೆಹರೂ ಮೈದಾನದಲ್ಲಿ ಆಯೋಜಿಸಿದ `ಅಂತಾರಾಷ್ಟ್ರೀಯ ಬಂಟರ ಪೆÇ್ರ ಕಬಡ್ಡಿ' ಪಂದ್ಯಾಟದ ಸಭೆಯನ್ನು ಇಂದಿಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಕಾರ್ಯಕ್ರಮ ಉದ್ಘಾಟಿಸಿದರು. ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿದರು.

ಪುತ್ತೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಚಂದ್ರಹಾಸ ರೈ, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರತನ್ ಶೆಟ್ಟಿ, ಉಳ್ಳಾಲ ವಲಯ ಬಂಟರ ಸಂಘ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು, ಜಯಕರ್ನಾಟಕ ಯುವ ಮುಖಂಡ ಸಹಜ್ ರೈ ಬಳಜ್ಜ, ಜಪ್ಪಿನಮೊಗರು ಯುವ ಬಂಟರ ಸಂಘ ಅಧ್ಯಕ್ಷ ಸುನೀಲ್ ಶೆಟ್ಟಿ ಉಪಸ್ಥಿತರಿದ್ದರು.

ಯೂತ್ ಬಂಟ್ಸ್ ಮಂಗಳೂರು ಅಧ್ಯಕ್ಷ ಕೃಷ್ಣ ಶೆಟ್ಟಿ ತಾರೆಮಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಇರಾ ಪ್ರಸ್ತಾವಿಸಿದರು. ನಿತೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನ ಕಾರ್ಯದರ್ಶಿ ಸುಖೇಶ್ ಭÀಂಡಾರಿ ಇರಾ ವಂದಿಸಿದರು.

8 ತಂಡಗಳ ಪಂದ್ಯಾಟ
ಡಿ.9 ಹಾಗೂ 10ರಂದು ನಡೆಯುವ ಪಂದ್ಯಾಟದಲ್ಲಿ ದೇಶ ವಿದೇಶಗಳ 8 ಜನ ಮಾಲೀಕರ, 8 ತಂಡಗಳು ಭಾಗವಹಿಸಲಿವೆ. ಸತೀಶ್ಚಂದ್ರ ಶೆಟ್ಟಿ ಮಾಲೀಕತ್ವದ `ಗೋಲ್ಡನ್ ಲೇಔಟ್ ಬಂಟ್ಸ್ ಸಿಗ್ದಲ್', ರಾಕೇಶ್ ಶೆಟ್ಟಿ ದುಬೈ ಅವರ `ದುಬೈ ಬಂಟ್ಸ್', ಎನ್.ಚಂದ್ರಹಾಸ್ ಶೆಟ್ಟಿ ಮಾಲೀಕತ್ವದ `ಮುನ್ನಲಾಯಿ ಸಿಜ್ಲರ್ಸ್ ಪುತ್ತೂರು', ಬಂಟ್ವಾಳ ಬಂಟ್ಸ್ ಸಂಘದ `ಬಂಟ್ವಾಳದ ಬಂಟರು', ಶ್ರೀಕಾಂತ್ ಶೆಟ್ಟಿ ಮಸ್ಕತ್ ಅವರ `ಬಂಟ್ಸ್ ಪ್ಯಾಂಥರ್ಸ್ ಮಸ್ಕತ್', ಮಂಗಳೂರು ಯೂತ್ ಬಂಟ್ಸ್‍ನ `ಮಂಗಳೂರು ಬಂಟ್ಸ್', ಸುರೇಶ್ ಶೆಟ್ಟಿ ಕುಂಜತ್ತೂರು, ರವಿ ಶೆಟ್ಟಿ ಉಜಾರ್ ಮಾಲೀಕತ್ವದ `ಯೂತ್ ಬಂಟ್ಸ್ ಕಾಸರಗೋಡು, ಸಹಜ್ ರೈ ಬಳಜ್ಜ ಅವರ 'ಆ್ಯಕ್ಷನ್ ಬಂಟ್ಸ್ ಪುತ್ತೂರು' ತಂಡಗಳು ಸ್ಪರ್ಧಿಸಲಿವೆ.

ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ `ಬಂಟ್ಸ್ ಟ್ರೋಫಿ' ಹಾಗೂ 1 ಲಕ್ಷ ರೂ. ನಗದು ಬಹುಮಾನ ಸಿಗಲಿದೆ. ರನ್ನರಪ್ ತಂಡಕ್ಕೆ ಬಂಟ್ಸ್ ಟ್ರೋಫಿ ಹಾಗೂ 75ಸಾವಿರ ರೂ, ತೃತೀಯ ಹಾಗೂ ಚುತುರ್ಥ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ಹಾಗೂ 40 ಸಾವಿರ ರೂ. ನಗದು ದೊರೆಯಲಿದೆ.

ಪಂದ್ಯಾಟಕ್ಕೆ ಕನ್ನಡ ತುಳು ಚಿತ್ರರಂಗದ ನಟ ನಟಿಯರು ತಾರಾಮೆರಗು ನೀಡಿಲಿದ್ದಾರೆ. ಡಿ.9ರಂದು ಸಂಜೆ 6ಕ್ಕೆ ಎ.ಸದಾನಂದ ಶೆಟ್ಟಿ ಉದ್ಘಾಟಿಸಲಿದ್ದು, ಬಂಟರ ಯಾನೇ ನಾಡವರ ಮಾತೃ ಸಂಘ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಬಂಟರ ಸಂಘ ಹೆಬ್ರಿ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಬಹುಮಾನ ವಿತರಿಸಲಿದ್ದಾರೆ. ಹಲವು ಗಣ್ಯರು ಎರಡೂ ದಿನದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ. (ರೋನಿಡಾ, ಮುಂಬಯಿ)




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here