Saturday 10th, May 2025
canara news

೧೨ ಸಾವಿರ ಕೋ. ರೂ. ವೆಚ್ಚದಲ್ಲಿ ಶಿರಾಡಿ ಘಾಟಿಗೆ ಸುರಂಗ ಮಾರ್ಗ ಪ್ರಸ್ತಾವ

Published On : 23 Nov 2017   |  Reported By : canaranews network


ಮಂಗಳೂರು: ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಶಿರಾಡಿ ಘಾಟಿ ಹಾದು ಹೋಗುವ ಪ್ರದೇಶದಲ್ಲಿ ೧೨ ಸಾವಿರ ಕೋಟಿ ರೂ. ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಣದ ವಿಚಾರ ಪ್ರಸ್ತಾವನೆಯಲ್ಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ ಮಹದೇವಪ್ಪ ಹೇಳಿದ್ದಾರೆ. ೨೩ ಕಿ.ಮೀ ಉದ್ದಕ್ಕೆ ಜಪಾನ್ ನ ಸಹಯೋಗದಲ್ಲಿ ಈ ಸುರಂಗ ಮಾರ್ಗ ನಿರ್ಮಿಸುವ ಬಗ್ಗೆ ಪರಾಮರ್ಶೆ ನಡೆಯುತ್ತಿದೆ ಎಂದು ವಿಧಾನಪರಿಷತ್ ಅಧಿವೇಶನದಲ್ಲಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿ ಈ ಮಾಹಿತಿ ನೀಡಿದರು.

ಇದೇ ವೇಳೆ ಅಡ್ಡಹೊಳೆಯಿಂದ ಬಂಟ್ವಾಳದವರೆಗೆ ನಿರ್ಮಾಣವಾಗುತ್ತಿರುವ ಕಾಮಗಾರಿ ೨೦೧೯ ರ ಎ.೨೩ರೊಳಗೆ ಮುಗಿಸುವುದಾಗಿ ಎನ್ ಎಚ್ ಎಐ ತಿಳಿಸಿದೆ ಎಂದು ಸಚಿವರು ವಿವರಿಸಿದರು. ಹಾಸನ, ಸಕಲೇಶಪುರ ರಸ್ತೆಯಲ್ಲಿನ ತಿರುವು ಕಡಿಮೆಗೊಳಿಸುವುದು, ಸುಗಮ ಸಂಚಾರಕ್ಕಾಗಿ ೮೦ ಕಿ.ಮೀ. ವೇಗಕ್ಕೆ ಮಿತಿಗೊಳಿಸಿ ರಸ್ತೆ ನಿರ್ಮಿಸಲಾಗುತ್ತಿದೆ. ಹಾಸನದಿಂದ ಮಾರನಹಳ್ಳಿಯವರೆಗೆ ೩೩ ಸ್ಥಳಗಳಲ್ಲಿ, ಅಡ್ಡಹೊಳೆಯಿಂದ ಬಂಟ್ವಾಳದವರೆಗೆ ೩೬ ಸ್ಥಳಗಳಲ್ಲಿ ತಿರುವುಗಳನ್ನು ಸಾಧ್ಯವಾದಷ್ಠು ನೇರಗೊಳಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here