Saturday 10th, May 2025
canara news

ಕುಖ್ಯಾತ ಗ್ಯಾಂಗ್ ನ ಇಬ್ಬರು ರೌಡಿಗಳ ಬಂಧನ

Published On : 25 Nov 2017   |  Reported By : Canaranews network


ಮಂಗಳೂರು: ಮಂಗಳೂರಿನ ನಟೋರಿಯಸ್ ಗ್ಯಾಂಗ್ ಟಾರ್ಗೇಟ್ ಗ್ರೂಪ್ ನ ಇಬ್ಬರನ್ನು ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು ಪೊಲೀಸರು ನಡೆಸಿದ 2 ಪ್ರತ್ಯೇಕ ಕಾರ್ಯಚರಣೆಯಲ್ಲಿ ಈ ಇಬ್ಬರನ್ನು ಬಂಧಿಸಲಾಗಿದೆ.ಮಂಗಳೂರು ಹೊರವಲಯದ ಉಳ್ಳಾಲದ ಮೇಲಂಗಡಿ ದರ್ಗಾ ನಿವಾಸಿಯಾದ ಸುಮೋ ಇಮ್ರಾನ್ ಅಲಿಯಾಸ್ ಇಮ್ರಾನ್ ಮತ್ತು ಇಲ್ಯಾಸ್ ಎಂಬವವರನ್ನು ಬಂಧಿಸುವಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹದ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಮತ್ತು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ , ಇಮ್ರಾನ್ ಮುಂಬಾಯಿಯ ದಾದರ್ ರೈಲ್ವೆ ನಿಲ್ದಾಣದ ಬಳಿಯಲ್ಲಿರುವ ವುಡ್ ಲ್ಯಾಂಡ್ ಗೆಸ್ಟ್ ಹೌಸ್ ಲಾಡ್ಜ್ ನಲ್ಲಿ ವಾಸವಾಗಿರುವ ಬಗ್ಗೆ ಮಾಹಿತಿ ದೊರೆತಿತ್ತು.ಈ ಹಿನ್ನೆಲೆಯಲ್ಲಿ ಮುಂಬಯಿ ನಗರಕ್ಕೆ ತೆರಳಿದ್ದ ರೌಡಿ ನಿಗ್ರಹದಳದ ಸಿಬ್ಬಂದಿ ಗೆಸ್ಟ್ ಹೌಸ್ ಮೇಲೆ ದಾಳಿ ಮಾಡಿ ಸುಮೋ ಇಮ್ರಾನ್ ನನ್ನು ಬಂಧಿಸಿದ್ದಾರೆ. ಈತನ ವಿರುದ್ದ ಬಜ್ಪೆ ,ಉಳ್ಳಾಲ ಮತ್ತು ಯಲ್ಲಾಪುರ ಪೋಲಿಸ್ ಠಾಣೆಗಳಲ್ಲಿ ಒಟ್ಟು 3 ವಾರಂಟ್ ಗಳಿದ್ದು ನ್ಯಾಯಲಯಾಕ್ಕೆ ಹಾಜರಾಗದೇ ಇದ್ದು ತಲೆ ಮರೆಸಿಕೊಂಡಿದ್ದ. ಅಲ್ಲದೇ, ಈತನ ವಿರುದ್ದ ನಗರದ ಉಳ್ಳಾಲ, ಬಜ್ಪೆ, ಮತ್ತು ಯಲ್ಲಾಪುರ ಠಾಣೆಗಳಲ್ಲಿ ಕೊಲೆಯತ್ನ,ದರೋಡೆ,ದರೋಡೆಗೆ ಯತ್ನ ಮೊದಲಾದ ಸುಮಾರು 9 ಪ್ರಕರಣಗಳು ದಾಖಲಾಗಿದೆ.

ಈ ನಡುವೆ ಈ ನಟೋರಿಯಸ್ ಟಾರ್ಗೆಟ್ ಗ್ಯಾಂಗ್ ನ ಇನ್ನೊಬ್ಬ ಸದಸ್ಯ ನಗರದ ಜಪ್ಪು ಕುಡುಪಾಡಿ ಮಸೀದಿ ಬಳಿಯ ಫ್ಲ್ಯಾಟ್ ಒಂದರಲ್ಲಿ ವಾಸವಾಗಿರುವ ಬಗ್ಗೆ ಖಚಿತ ಮಾಹಿತಿ ರೌಡಿ ನಿಗ್ರಹ ದಳದ ಪೊಲೀಸರಿಗೆ ದೊರೆತಿತ್ತು . ಮಾಹಿತಿ ಖಚಿತಪಡಿಸಿಕೊಂಡ ಪೊಲೀಸರು ಫ್ಲ್ಯಾಟ್ ಮೇಲೆ ದಾಳಿ ನಡೆಸಿ ಇಲ್ಯಾಸ್ ನನ್ನು ಬಂಧಿಸಿದ್ದಾರೆ.ಬಂಧಿತರನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here